ನಮ್ಮೊಂದಿಗೆ ಸಂಪರ್ಕ ಸಾಧಿಸಿ

ಇಂದಿನ ಕಾರ್ಯಕ್ರಮ

ಎಲ್ಲರನ್ನು ಜೊತೆಗೆ ಕೊಂಡೊಯ್ಯುವ ಪದ್ಮರಾಜ್ ಆರ್. ಪೂಜಾರಿ ಸಮುದ್ರವಿದ್ದಂತೆ: ನಿಕೇತ್ ರಾಜ್ ಮೌರ್ಯ ಫರಂಗಿಪೇಟೆಯಲ್ಲಿ ಕಾಂಗ್ರೆಸ್ ಚುನಾವಣಾ ಪ್ರಚಾರ ಸಭೆ

Published

on

ಮಂಗಳೂರು: ಪದ್ಮರಾಜ್ ಅವರ ಹಿಂದೆ ಎಲ್ಲಾ ವರ್ಗದ ಜನರೂ ಇದ್ದಾರೆ. ಹಾಗಾಗಿ ಎಲ್ಲಾ ನದಿಗಳು ಸೇರಿ ಸಮುದ್ರವಾದಂತೆ ಪದ್ಮರಾಜ್ ಆರ್. ಪೂಜಾರಿ. ಅವರನ್ನು ಮನೆಮನೆಗೆ ತಲುಪಿಸಿ, ಗೆಲ್ಲಿಸಬೇಕು ಎಂದು ಕೆಪಿಸಿಸಿ ವಕ್ತಾರ ನಿಕೇತ್ ರಾಜ್ ಮೌರ್ಯ ಹೇಳಿದರು.

ಫರಂಗಿಪೇಟೆಯಲ್ಲಿ ಭಾನುವಾರ ನಡೆದ ದ.ಕ. ಲೋಕಸಭಾ ಕ್ಷೇತ್ರದ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದರು.ಪದ್ಮರಾಜ್ ಗೆದ್ದರೆ ಕನಕದಾಸ, ಬಸವಣ್ಣ, ಸೂಫಿ ಸಂತರ, ಅಂಬೇಡ್ಕರ್ ಅವರ ಆಶಯ ಗೆದ್ದಂತೆ. ಹಾಗಾಗಿ ಪದ್ಮರಾಜ್ ಆರ್. ಪೂಜಾರಿ ಗೆಲ್ಲಬೇಕು ಎಂದರು.

ಪದ್ಮರಾಜ್ ಆರ್. ಪೂಜಾರಿ ಅವರ ಬಗ್ಗೆ ಎಲ್ಲರಿಗೂ ತಿಳಿದ ವಿಚಾರ. ಎಲ್ಲರನ್ನು ಪ್ರೀತಿಯಿಂದಲೇ ನಡೆಸಿಕೊಡುವ ವ್ಯಕ್ತಿ. ಮತ ಹಾಕದ ಯುವಕನನ್ನು ದ್ವೇಷಿಸಲಾರರು. ಆತನ ಕೈಹಿಡಿದು ಸರಿಯಾದ ದಾರಿಯಲ್ಲಿ ನಡೆಸುವಂತಹ ವ್ಯಕ್ತಿ ಪದ್ಮರಾಜ್. ಇಂತಹ ವ್ಯಕ್ತಿ ಗೆಲ್ಲಲೇಬೇಕು ಎಂದರು.

ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್. ಪೂಜಾರಿ ಮಾತನಾಡಿ, ಬೆಲೆ ಏರಿಕೆಯಿಂದ ತತ್ತರಿಸಿರುವ ಜನರಿಗೆ ಸಹಾಯವಾಗುವ ನಿಟ್ಟಿನಲ್ಲಿ ಕಾಂಗ್ರೆಸ್ ಸರಕಾರ ಗ್ಯಾರೆಂಟಿ ಯೋಜನೆಗಳನ್ನು ಜಾರಿಗೆ ತಂದಿದೆ. ಇಂದು ಐದು ಗ್ಯಾರೆಂಟಿಗಳಿಂದ ಜನರು ಸ್ವಾವಲಂಭಿಯಾಗಿದ್ದಾರೆ. ಮಹಿಳೆಯರು ಆಶಾದಾಯಕ ಜೀವನ ನಡೆಸುತ್ತಿದ್ದಾರೆ. ಜನರನ್ನು ಇನ್ನಷ್ಟು ಸಶಕ್ತರನ್ನಾಗಿಸುವ ಉದ್ದೇಶದಿಂದ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದರೆ ಇನ್ನಷ್ಟು ಗ್ಯಾರೆಂಟಿ ಯೋಜನೆಗಳನ್ನು ಜನರಿಗೆ ನೀಡಲಿದ್ದೇವೆ ಎಂದರು.








ಇದೇ ಸಂದರ್ಭ ಗುರುಕಿರಣ್ ಶೆಟ್ಟಿ ಅವರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು. ಗೇರು ನಿಗಮದ ಅಧ್ಯಕ್ಷೆ ಮಮತಾ ಗಟ್ಟಿ, ಮುಡಿಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಕಾಶ್, ಚಂದ್ರಪ್ರಕಾಶ್ ಶೆಟ್ಟಿ, ಚಂದ್ರಹಾಸ ಕರ್ಕೇರ, ಡಾ. ಇಫ್ತಿಕಾರ್, ಜಬ್ಬಾರ್, ದ.ಕ.ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಉಮರ್ ಫಾರೂಕ್, ರಾಜ್ಯ ಮಹಿಳಾ ಆಯೋಗದ ಮಾಜಿ ಅಧ್ಯಕ್ಷೆ ಕೃಪಾ ಅಮರ್ ಆಳ್ವ, ದ.ಕ.ಜಿಲ್ಲಾಪಂಚಾಯತ್ ಮಾಜಿ ಸದಸ್ಯ ಕೆ.ಕೆ.ಸಾಹುಲ್ ಹಮೀದ್, ವೃಂದಾ ಪೂಜಾರಿ, ಲವೀನಾ, ಎಫ್.ಎ.ಖಾದರ್, ರಶೀದಾ ಬಾನು, ಇಕ್ಬಾಲ್ ಸುಜೀರ್, ಎಫ್.ಎಂ.ಬಶೀರ್, ಜಬ್ಬಾರ್ ಮಾರಿಪಳ್ಳ, ಬುಖಾರಿ ಕುಂಪನಮಜಲು, ಹಸನಬ್ಬ ಗುಡ್ಡೆ ಮನೆ, ಮೋನಾಕ, ಸಾಹುಲ್ ಹಮೀದ್, ರಝಾಕ್, ಇಸ್ಮಾಯಿಲ್, ಭಾಸ್ಕರ್ ರೈ, ಇಸಾಕ್, ಮೋನು, ಸಲಾಂ ಮಲ್ಲಿ, ಸಮೀರ್ ಪಜೀರ್, ಇಮ್ತಿಯಾಝ್ ತುಂಬೆ, ಎಐಸಿಸಿ ವೀಕ್ಷಕ ಜೋನ್ ಮೊದಲಾದವರು ಉಪಸ್ಥಿತರಿದ್ದರು.

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version