Published
8 months agoon
By
Akkare Newsಪುತ್ತೂರು: ಸೀಮೆಯ ಬಲ – ನಾಡು ಎಂಬ ಹೆಸರಿನ ಬಲ್ನಾಡಿನಲ್ಲಿ ಭಾನುವಾರ ಸೀಮೆಯೊಡತಿಯ ವೈಭವದ ನೇಮ ನಡಾವಳಿ ಜರಗಿತು.
ಬಲ್ನಾಡು ಶ್ರೀ ದಂಡನಾಯಕ- ಉಳ್ಳಾಲ್ತಿ, ಹಾಗೂ ಪರಿವಾರ ದೈವಗಳ ನೇಮ ನಡಾವಳಿಗೆ ಮೊದಲ ದಿನವಾದ ಶನಿವಾರ ರಾತ್ರಿ ಗಂಟೆ 7 ರಿಂದ ಭಂಡಾರ ತೆಗೆದು, ತಂಬಿಲಾದಿಗಳು ಜರಗಿತು. ನಂತರ ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಿತು.
ಏ. 28ರ ಭಾನುವಾರ ಮುಂಜಾನೆಯಿಂದಲೇ ಸಹಸ್ರಾರು ಭಕ್ತಾದಿಗಳು ಸರತಿ ಸಾಲಿನಲ್ಲಿ ನಿಂತು ಮಲ್ಲಿಗೆ ಪ್ರಿಯೆ ಉಳ್ಳಾಲ್ತಿ ಅಮ್ಮನವರಿಗೆ ಮಲ್ಲಿಗೆ, ಪಟ್ಟೆ ಸೀರೆಗಳನ್ನು ಸಮರ್ಪಿಸಿದರು.
ಬೆಳಿಗ್ಗೆ ಶ್ರೀ ದಂಡನಾಯಕ ದೈವದ ವಾಲಸರಿ ನೇಮ ನಡೆದು ಬಳಿಕ ಶ್ರೀ ಉಳ್ಳಾಲ್ತಿ ನೇಮ ನಡೆಯಿತು. ಮಧ್ಯಾಹ್ನ ಅನ್ನಸಂತರ್ಪಣೆ ಜರಗಿತು. ಬಳಿಕ ಕಾಳರಾಹು ಮತ್ತು ಮಲರಾಯ ದೈವಗಳ ನೇಮ ನಡೆಯಿತು.