Published
8 months agoon
By
Akkare Newsಬೆಳ್ತಂಗಡಿ : ಬಳ್ಳಮಂಜ ಮಚ್ಚಿನ ಗ್ರಾಮದ ವಡ್ಡ ಇಲ್ಲಿನ ಮೂಲ ಮನೆಯ ನಾಗಬನದಲ್ಲಿ ನಿನ್ನೆ ನಾಗ ದೇವರ ವಾಸ್ತು ಪೂಜೆ ಹಾಗೂ ಇಂದು ಬೆಳಿಗ್ಗೆ ಗಂಟೆ 10-14ರ ಮಿಥುನ ಲಗ್ನದಲ್ಲಿ ಶ್ರೀ ನಾಗ ಪ್ರತಿಷ್ಠೆಯು ಬಳ್ಳಮಂಜ ಶ್ರೀ ಮನೋಹರ್ ಭಟ್ ರವರ ನೇತೃತ್ವದಲ್ಲಿ ನಡೆಯಿತು .
ಶ್ರೀ ದೇವರ ಪ್ರಸಾದ ವಿತರಣೆ, ಅನ್ನಸಂತರ್ಪಣೆ ಕಾರ್ಯಕ್ರಮವು ಹಾಗೂ ಮನೆಯರಾದ ಜಾರಪ್ಪ ಮೂಲ್ಯ ಮತ್ತು ಮನೆಯವರು, ಶ್ರೀಮತಿ ಚಂದ್ರಾವತಿ ಡೋಗ್ರ ಮೂಲ್ಯ ಮತ್ತು ಮನೆಯವರು, ಲಕ್ಷ್ಮಣ ಮೂಲ್ಯ ಮತ್ತು ಮನೆಯವರು, ಹರೀಶ ಮೂಲ್ಯ ಮತ್ತು ಮನೆಯವರು, ಜನಾರ್ಧನ್ ಮತ್ತು ಮನೆಯವರು, ಚಂದ್ರಶೇಖರ್ ಮತ್ತು ಮನೆಯವರು , ಪದ್ಮನಾಭ ಸಾಲ್ಯಾನ್ ಮತ್ತು ಮನೆಯವರು, ತುಂಗಪ್ಪ ಮೂಲ್ಯ ಮತ್ತು ಮನೆಯವರು, ಕೃಷ್ಣಪ್ಪ ಮೂಲ್ಯ ಮತ್ತು ಮನೆಯವರು, ನವೀನ್ ಚಂದ್ರ ಮೂಲ್ಯ ಮತ್ತು ಮನೆಯವರು, ರಮೇಶ್ ಮೂಲ್ಯ ಮತ್ತು ಮನೆಯವರು, ಸಂಜೀವ ಜತ್ತನ್ಮಾರ್ , ಶ್ರೀಧರ್ ವಡ್ಡ ಮೂಲ್ಯ ಮತ್ತು ಮನೆಯವರು ಉಪಸ್ಥಿತಿಯಿದ್ದರು.
ಇಂದು ಸಾಯಂಕಾಲ ಶ್ರೀ ರಕ್ಷೇಶ್ವರಿ ಮಹಿಷಂತಾಯ, ಪಂಜುರ್ಲಿಗಳ ಮತ್ತು ವಾರಾಹಿಪಾತಾಣ ಮೂರ್ತಿ ಗುಳಿಗ ದೈವಗಳ ಕಟ್ಟೆ ಸ್ಥಾನಗಳಿಗೆ ವಾಸ್ತುಹೋಮಾದಿಗಳನ್ನು ನಡೆಸಿ ನಾಳೆ ತಾ. 03-05-2024ನೇ ಶುಕ್ರವಾರ ಬೆಳಿಗ್ಗೆ 7-22ಕ್ಕೆ ಸರಿಯಾಗಿ ನಡೆಯುವ ವೃಷಭ ಲಗ್ನದಲ್ಲಿ ಆರಂಭಗೊಂಡು ಶ್ರೀ ದೈವಗಳ ಪ್ರತಿಷ್ಠೆ ಹಾಗೂ ರಾತ್ರಿ ದೈವಗಳ ನೇಮೋತ್ಸವ ಮತ್ತು ಪ್ರಸಾದ ವಿತರಣೆ ಅನ್ನಸಂತರ್ಪಣೆ ನಡೆಯಲಿದೆ.