Published
12 months agoon
By
Akkare Newsಪುತ್ತೂರು: ದರ್ಬೆ ಸಂತ ಫಿಲೋಮಿನಾ ಪ್ರೌಢಶಾಲಾ ನಿವೃತ್ತ ಶಿಕ್ಷಕ, ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಬಳಿಯ ನಿವಾಸಿ ಚಂದ್ರಶೇಖರ ಕುಂಜತ್ತಾಯ ರವರು ಅಲ್ಪಕಾಲದ ಅಸೌಖ್ಯದಿಂದ ನಿಧನರಾದರು.
ಗಣಿತ ಹಾಗೂ ವಿಜ್ಞಾನ ಶಿಕ್ಷಕರಾಗಿ ಪಂಜದಿಂದ ವೃತ್ತಿ ಜೀವನವನ್ನು ಆರಂಭಿಸಿ ನಂತರ ದರ್ಬೆ ಸಂತ ಫಿಲೋಮಿನಾ ಪ್ರೌಢಶಾಲೆಯಲ್ಲಿ ದೀರ್ಘಕಾಲ ಸೇವೆ ಸಲ್ಲಿಸಿದ್ದರು.
ಮೃತರು ಪತ್ನಿ ಪುಷ್ಪಾಲತಾ, ಮಕ್ಕಳಾದ ಗಿರೀಶ್, ಪೂರ್ಣಪ್ರಜ್ಞ, ಸಂಧ್ಯಾ, ವಿದ್ಯಾ, ಸವಿತಾ ಅವರನ್ನು ಅಗಲಿದ್ದಾರೆ.