Published
7 months agoon
By
Akkare Newsಪುತ್ತೂರು. ಮೇ : 23. ಪುತ್ತೂರು ಮಾಜಿ ಶಾಸಕ ಸಂಜೀವ ಮಟ0ದೂರು ರವರ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಪೋಸ್ಟ್ ವಿಚಾರವನ್ನು ಇಟ್ಟುಕೊಂಡು ಬಿಜೆಪಿ ಪಕ್ಷದವರು ಪೊಲೀಸ್ ಠಾಣೆಗೆ ದೂರನ್ನು ನೀಡಿದ್ದಾರೆ ಇದರ ಆಧಾರದಲ್ಲಿ ಪೊಲೀಸರು ಪ್ರಕರಣವನ್ನು ದಾಖಲು ಮಾಡಿದ್ದಾರೆ
ಬೆಳ್ತಂಗಡಿ ಶಾಸಕ ಪೊಲೀಸ್ ಠಾಣೆಗೆ ಬೆಂಕಿ ಇಡುವ ಎಚ್ಚರಿಕೆ ನೀಡಿದ್ದು ಮತ್ತು ಪೊಲೀಸರನ್ನು ಹೀನಾಯವಾಗಿ ನಿಂದಿಸಿದ್ದು ಅಷ್ಟು ದೊಡ್ಡ ಪ್ರಕರಣ ದಾಖಲಾದರು ಪೊಲೀಸರು ಈತನಕ ಬಂಧಿಸಿಲ್ಲ .
ಇದೀಗ ಕಾಂಗ್ರೆಸ್ ಪಕ್ಷದ ಸಾಮಾನ್ಯ ಕಾರ್ಯಕರ್ತ ಪ್ರಜ್ವಲ್ ರೈಯ ಮೇಲೆ ವಿನಾಕಾರಣ ರಾಜಕೀಯ ಒತ್ತಡಕ್ಕೆ ಮಣಿದು ಎಫ್ ಆರ್ ದಾಖಲಿಸಿದ್ದು ಇಲಾಖೆಯ ಮೇಲೆ ಅನುಮಾನ ಬರುವಂತಾಗಿದೆ ಆದರಿಂದ ಪ್ರಜ್ವಲ್ ರೈರವರನ್ನು ಬಂಧಿಸಿದರೆ ಜಿಲ್ಲಾ ಕಾಂಗ್ರೆಸ್ ವತಿಯಿಂದ ಪೋಲಿಸ್ ಠಾಣೆ ಎದುರು ಬೃಹತ್ ಪ್ರತಿಭಟನೆ ಮಾಡಲಾಗುವುದೆಂದು ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷರಾದ ಮುರಳೀಧರ ರೈ ಮ0ಠದಬೆಟ್ಟು ಮಾಧ್ಯಮಕ್ಕೆ ತಿಳಿಸಿದ್ದಾರೆ