ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ (ರೀ )ವಿಟ್ಲ ಇದರ ಅಳಿಕೆ ವಲಯದ ಅಳಿಕೆ ಒಕ್ಕೂಟದ ವತಿಯಿಂದ 52 ಬಡ ವಿದ್ಯಾರ್ಥಿಗಳಿಗೆಉಚಿತ ಬರವಣಿಗೆ ಪುಸ್ತಕ ವಿತರಣೆ ಮಾಡಲಾಯಿತು. ಅಳಿಕೆ ಒಕ್ಕೂಟದ ನಿಕಟಪೂರ್ವ ಅಧ್ಯಕ್ಷರಾದ ಬಾಲಕೃಷ್ಣ ಪೂಜಾರಿಯವರು ತಮ್ಮ ವತಿಯಿಂದ ಪುಸ್ತಕ ಒದಗಿಸಿದ್ದು, ಪುಸ್ತಕ ವಿತರಣ ಕಾರ್ಯಕ್ರಮದಲ್ಲಿ ಅಳಿಕೆ ಶಾಲಾ ಶಿಕ್ಷಕ ಯಾದವ , ಅಳಿಕೆ ಗ್ರಾಮ ಪಂಚಾಯಿತಿ
ಅಧ್ಯಕ್ಷ ಪದ್ಮನಾಭ, ನಿಕಟಪೂರ್ವ ಅಧ್ಯಕ್ಷರಾದ ಬಾಲಕೃಷ್ಣ ಪೂಜಾರಿ, ಒಕ್ಕೂಟದ ಉಪಾಧ್ಯಕ್ಷರಾದ ಮೋನಪ್ಪ, ಅಳಿಕೆ ವಲಯ ಮೇಲ್ವಿಚಾರಕಿ ಮಾಲತಿ, ಸೇವಾಪ್ರತಿನಿಧಿ ಚಂದ್ರಾವತಿ, ಅಳಿಕೆ ಒಕ್ಕೂಟದ ಪದಾಧಿಕಾರಿಗಳು, ಉಪಸ್ಥಿತರಿದ್ದರು.