Published
6 months agoon
By
Akkare Newsಕೋಡಿಂಬಾಡಿ, ಜೂ:11 ಕೋಡಿಂಬಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಬೆಳ್ಳಿಪ್ಪಾಡಿ ಗ್ರಾಮದ ಕೊಡಿಮರ , ಕಟಾರ, ಅಂದ್ರಾಗೇರಿ, ಗುಂಡೋಳೇ, ಬರ್ತೋ ಲಿ,ಕೋಡಪಟ್ಯ ಮೊದಲಾದ ಕಡೆ ಆನೆ ಗಳು ಕಾಣಿಸಿಕೊಂಡ ಬಗ್ಗೆ ಗ್ರಾಮಸ್ಥರು ಬಯಬಿತರಾದ ಪರಿಸ್ಥಿತಿ ವಿದ್ದ ಕಾರಣ ಗ್ರಾಮ ಪಂಚಾಯತ್ ವತಿಯಿಂದ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ದ್ವನಿ ವರ್ಧಕ ಮುಖಾಂತರ ಜಾಗ್ರತಿ ಗೊಳಿಸಲಾಯಿತು.
ಈ ಪ್ರದೇಶದ ಸಾರ್ವಜನಿಕರ ಗಮನಕ್ಕೆ,ಇವತ್ತು ಸಂಜೆ 6 ಗಂಟೆ ನಂತರ ಕಾಡಾನೆ ಗಳ ಕಾರ್ಯಚರಣೆ ಸುಮಾರು 30 ಮಂದಿ ಅರಣ್ಯ ಇಲಾಖೆಯ ಸಿಬ್ಬಂದಿ ಗಳಿಂದ ನಡೆಯಲಿದೆ ಶಾಲಾ ಮಕ್ಕಳು ಸಮೇತ ಎಲ್ಲರೂ ಸಂಜೆ 6 ಗಂಟೆ ಒಳಗೆ ಮನೆ ಸೇರಬೇಕು ಯಾರು ಹೊರಗೆ ಬಾರದೆ, ಎಲ್ಲಾ ಮನೆಯ ಲೈಟ್ ಆಫ್ ಮಾಡಬೇಕು, ಸೌoಡ್ ಮಾಡಬಾರದು ಎಂದು ತಿಳಿಸಲಾಯಿತು.