Published
7 months agoon
By
Akkare Newsಪುತ್ತೂರು: ಬಪ್ಪಳಿಗೆಯ ಮುಖ್ಯ ರಸ್ತೆಗಳಬದಿಯಲ್ಲಿರುವ ಅಪಾಯಕಾರಿ ಮರಗಳನ್ನು ತೆರವು ಮಾಡುವಂತೆ ಶಾಸಕರುಸೂಚನೆ ನೀಡಿದ್ದ24 ಗಂಟೆಯೊಳಗೆ ಎಲ್ಲಾ ಅಪಾಯಕಾರಿ ಮರಗಳನ್ನು ಅರಣ್ಯ ಇಲಾಖೆ ತೆರವುಮಾಡಿದೆ.
ಭಾನುವಾರ ಬಪ್ಪಳಿಗೆಯಲ್ಲಿಮರವೊಂದು ಗಾಳಿಗೆ ಉರುಳಿ ಬಿದ್ದು ಎಂಟು ವಿದ್ಯುತ್ ಕಂಬಗಳು ಮುರಿದಿದ್ದವು. ಘಟನಾ ಸ್ಥಳಕ್ಕೆ ಶಾಸಕರಾದ ಅಶೋಕ್ ರೈ ಭೇಟಿ ನೀಡಿ ಮರ ತೆರವು ಮಾಡದೇ ಇರುವ ವಿಚಾರಕ್ಕೆ ಅಧಿಕಾರಿಗಳನ್ನು ತರಾಟೆಗೆ ಎತ್ತಿಕೊಂಡಿದ್ದರು. 24 ಗಂಟೆಯೊಳಗೆ ಎಲ್ಲಾ ಅಪಾಯಕಾರಿ ಮರಗಳನ್ನು ತೆರವುಮಾಡುವಂತೆ ಸೂಚನೆ ನೀಡಿದ್ದರು.ಅದರಂತೆ ಅಧಿಕಾರಿಗಳು ಮರಗಳನ್ನು ತೆರವುಮಾಡಿದ್ದಾರೆ.ಹಲವು ವರ್ಷಗಳಿಂದ ಇಲ್ಲಿನ ಮರಗಳನ್ನು ತೆರವು ಮಾಡಲು ಇಲಾಖೆಗೆ ಮನವಿ ಮಾಡಿದ್ದರೂ ತೆರವು ಕಾರ್ಯಾಚರಣೆ ನಡೆದಿರಲಿಲ್ಲ. ಶಾಸಕರ ಭೇಟಿ ಬಳಿಕ ತೆರವು ನಡೆದಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ