Published
6 months agoon
By
Akkare Newsಪುತ್ತೂರು: ಕರ್ನಾಟಕ ಕಟ್ಟಡ ಮತ್ತು ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ, ಕೋಡಿಂಬಾಡಿ ಗ್ರಾಮ ಪಂಚಾಯತು, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕೋಡಿಂಬಾಡಿ ಒಕ್ಕೂಟ ಮತ್ತು ರೈ ಎಸ್ಟೇಟ್ ಎಜ್ಯುಕೇಷನ್& ಚಾರಿಟೇಬಲ್ ಟ್ರಸ್ಟ್ ಪುತ್ತೂರು ಇವರ ಆಶ್ರಯದಲ್ಲಿ ಆರೋಗ್ಯ ತಪಾಸಣಾ ಶಿಬಿರ ಜೂ.23ರಂದು ಕೋಡಿಂಬಾಡಿ ಹಿ.ಪ್ರಾ. ಶಾಲಾ ಸಭಾಭವನದಲ್ಲಿ ನಡೆಯಿತು.
ಗ್ರಾಮ ಪಂಚಾಯತ್ ಅಧ್ಯಕ್ಷೆ ಮಲ್ಲಿಕಾ ಅಶೋಕ್ ಅಧ್ಯಕ್ಷತೆ ವಹಿಸಿದ್ದರು. ಉದ್ಘಾಟನೆಯನ್ನು
ವಿಲ್ಮ ಎಲಿಜಾಬೆತ್(ಲೇಬರ್ ಆಫೀಸರ್ LO2 ಮಂಗಳೂರು )ನೇರವೇರಿಸಿದರು.ವೇದಿಕೆಯಲ್ಲಿ ಕೋಡಿಂಬಾಡಿ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಜಯಪ್ರಕಾಶ್ ಬದಿನಾರ್,ಗಣಪತಿ ಹೆಗ್ಡೆ (ಕಾರ್ಮಿಕ ಇಲಾಖೆ ಪುತ್ತೂರು ),ಲಕ್ಷ್ಮಣ್ ರೆಡ್ಡಿ (Programme head),ಜಗದೀಶ್ (programme manager ) ,ರಮೇಶ್ (ಕಾರ್ಮಿಕ ಇಲಾಖೆ Executive ),ಕೋಡಿಂಬಾಡಿ ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷರಾದ ಶೇಖರ್ ಪೂಜಾರಿ ಜೇಡರಪಾಲು, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಒಕ್ಕೂಟದ ಅಧ್ಯಕ್ಷರಾದ ಶಾರದಾ ರೈ, ಕಟ್ಟಡ ಕಾರ್ಮಿಕರ ಮುಖಂಡರಾದ ಮಾಲಿಂಗ ನಾಯ್ಕ್ ಉಪ್ಪಿನಂಗಡಿ, ರೈ ಎಸ್ಟೇಟ್ ಜಾರಿಟೇಬಲ್ ಟ್ರಸ್ಟಿನ ಲಿಂಗಪ್ಪ ಉಪಸ್ಥಿತರಿದ್ದರು .
(ಪ್ರಸಾದ್ District Camp Coordinator) ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು,ರಮೇಶ್ ರವರು ಧನ್ಯವಾದಿಸಿದರು. ನೂರಾರು ಕಟ್ಟಡ ನೊಂದಾಯಿತ. ಕಾರ್ಮಿಕ ಸದಸ್ಯರು ಈ ಕಾರ್ಯಕ್ರಮದ ಸದುಪಯೋಗ ಪಡೆದುಕೊಂಡರು.