ನಮ್ಮೊಂದಿಗೆ ಸಂಪರ್ಕ ಸಾಧಿಸಿ

ಸ್ಥಳೀಯ

ವಿದ್ಯುತ್ ಗುತ್ತಿಗೆದಾರರಿಗೆ ಬ್ರೇಕ್ ಡೌನ್ ಕಾಮಗಾರಿಗೆ ಭತ್ಯೆ ನೀಡುವಂತೆ ಇಂಧನ ಸಚಿವರಿಗೆ ಶಾಸಕ ಅಶೋಕ್ ರೈ ಮನವಿ

Published

on

ಪುತ್ತೂರು: ವಿದ್ಯುತ್ ಗುತ್ತಿಗೆದಾರರು ನಿರ್ವಹಿಸುವ ತುರ್ತು ಸೇವೆಗಳಲ್ಲಿ ಒಂದಾದ ಬ್ರೇಕ್ ಡೌನ್ ಕಾಮಗಾರಿಗಳನ್ನು ತ್ವರಿತ ರೀತಿಯಲ್ಲಿ ವಿದ್ಯುತ್ ಇಲಾಖೆ ಹಾಗೂ ವಿದ್ಯುತ್ ಗುತ್ತಿಗೆದಾರರು ಜೊತೆಗೂಡಿ ಗ್ರಾಹಕರಿಗೆ ತೊಂದರೆಯಾಗದಂತೆ ಕಾಮಗಾರಿಯನ್ನು ನಿರ್ವಹಿಸಿಕೊಂಡು ಬರುತ್ತಿದ್ದಾರೆ.

 

ಇವರಿಗೆ ಭತ್ಯೆ ನೀಡುವಂತೆ ಇಂಧನ‌ಸಚಿವ ಕೆ‌ಜೆ ಜಾರ್ಜ್ ಅವರಿಗೆ ಶಾಸಕ ಅಶೋಕ್ ರೈ ಮನವಿ ಮಾಡಿದ್ದಾರೆ.ಆದರೆ ಇವರಿಗೆ ಈ ಹಿಂದೆ ನೀಡುತ್ತಿದ್ದ 45% ಪ್ರಾದೇಶಿಕ ಭತ್ಯೆ, 25% ಬ್ರೇಕ್ ಡೌನ್ ಭತ್ಯೆ, ಸಾಗಾಣಿಕೆ ವೆಚ್ಚ ಹಾಗೂ ಇ ಎಸ್ ಐ / ಪಿ ಎಫ್ ಭತ್ಯೆಗಳ ಬದಲಾಗಿ ಈಗ ಕೇವಲ ದರಪಟ್ಟೆಯ ಮೊತ್ತದ ಮೇಲೆ 12% ಗಳ ಭತ್ಯೆ ನೀಡುತ್ತಿದ್ದು. ಇದರಿಂದ ನಮ್ಮ ಮಲೆನಾಡು ಹಾಗೂ ಕರಾವಳಿ ಭೂ ಭಾಗಗಳಾದ ಪುತ್ತೂರು, ಸುಳ್ಳ, ಮಡಿಕೇರಿ, ಬೆಳ್ತಂಗಡಿ ತಾಲೂಕು ಸೇರಿದಂತೆ ಹಲವು ಮಲೆನಾಡು ಭಾಗಗಳಲ್ಲಿ ವಿದ್ಯುತ್ ಬ್ರೇಕ್ ಡೌನ್ ಕಾಮಗಾರಿಗಳನ್ನು ನಿರ್ವಹಿಸಲು ಕಷ್ಟ ಸಾಧ್ಯವಾಗಿದೆ.

ಅದಲ್ಲದೆ ಈ ಮಲೆನಾಡು ಪ್ರದೇಶಗಳಲ್ಲಿ ವಿಪರೀತ ಮಳೆಯಿಂದಾಗಿ ರಸ್ತೆಗಳು ಹದಗೆಟ್ಟು ಬ್ರೇಕ್ ಡೌನ್ ಕಾಮಗಾರಿ ಸ್ಥಳಗಳಿಗೆ ವಿದ್ಯುತ್ ಕಂಬಗಳನ್ನು ಸಾಗಿಸಲು ಹೆಚ್ಚಿನ ಸಂಖ್ಯೆಯ ಕಾರ್ಮಿಕರನ್ನು ಅಥವಾ ಬದಲಿ ರಸ್ತೆಯನ್ನು ಬಳಸಿ ಬ್ರೇಕ್ ಡೌನ್ ಕಾಮಗಾರಿಯ ಕೆಲಸವನ್ನು ನಿರ್ವಹಿಸಬೇಕಾಗಿದೆ.

 

ಅದರಿಂದ ಬ್ರೇಕ್ ಡೌನ್ ಕಾಮಗಾರಿಗಳಿಗೆ ಈ ಹಿಂದೆ ನೀಡುತ್ತಿದ್ದ 45% ಪ್ರಾದೇಶಿಕ ಭತ್ಯೆ, 25% ಬ್ರೇಕ್ ಡೌನ್ ಭತ್ಯೆ, ಸಾಗಾಣಿಕಾ ವೆಚ್ಚ ಹಾಗೂ ಇ ಎಸ್ ಐ ಪಿ ಎಫ್ ಭತ್ಯೆಗಳನ್ನು ಈ ಹಿಂದಿನಂತೆಯೇ ನೀಡಿ ಗುತ್ತಿಗೆದಾರರ ಸಮಸ್ಯೆಗಳಿಗೆ ಸ್ಪಂದಿಸುವಂತೆ ಸಚಿವ ಕೆ ಜೆ ಜಾರ್ಜ್ ಅವರಿಗೆ ಮನವಿ ಮಾಡಿದ್ದಾರೆ.‌ಶಾಸಕರ ಮನವಿಗೆ ಸಚಿವರು ಪೂರಕವಾಗಿ ಸ್ಪಂದಿಸಿದ್ದು ಈ ಬಗ್ಗೆ ಪರಿಶೀಲಿಸಿ‌ಕ್ರಮಕೈಗೊಳ್ಳುವ ಭರವಸೆಯನ್ನು‌ನೀಡಿದ್ದಾರೆ.

 

ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘದ ದ ಕ ಜಿಲ್ಲಾಧ್ಯಕ್ಷ ಸೋಮಶೇಖರ ಪೈಕ,ಉಪಾಧ್ಯಕ್ಷ ದಾಮೋದರ ಮಂಚಿ,ಕಿಶೋರ್ ಕುಮಾರ್,ಕಾರ್ಯದರ್ಶಿ ಹರಿಶ್ಚಂದ್ರ ಕೆ, ಜತೆಕಾರ್ಯದರ್ಶಿ ಸತ್ಯನಾರಾಯಣ,ಕೋಶಾಧಿಕಾರಿ ಮಧುಕಿರಣ್ ಕೆ ಎನ್,ಸಂಘಟನಾ ಕಾರ್ಯದರ್ಶಿ ಚಿದಾನಂದ ನಾಯಕ್,ಕ್ರೀಡಾ ಕಾರ್ಯದರ್ಶಿ ದಯಾನಂದ ಕೆ ಉಪಸ್ಥಿತರಿದ್ದರು.

 

 

 

 

 

 

 

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version