Published
5 months agoon
By
Akkare Newsವಿಟ್ಲ: ಮದ್ಯದ ನಶೆಯಲ್ಲಿದ್ದ ರೌಡಿಶೀಟರ್ ಸರಣಿಯಾಗಿ ನಾಲ್ಕು ವಾಹನಗಳಿಗೆ ಡಿಕ್ಕಿ ಹೊಡೆದು ಪರಾರಿಯಾಗಲು ಯತ್ನಿಸಿದ ಘಟನೆ ವಿಟ್ಲದಲ್ಲಿ ನಡೆದಿದೆ.
ರೌಡಿಶೀಟರ್ ಕೇಪು ಗ್ರಾಮದ ಗಣೇಶ್ ಎಂಬಾತನು ಇಂದು ಸಂಜೆ ನಾಲ್ಕು ಮಾರ್ಗದಿಂದ ಪುತ್ತೂರು ಕಡೆಗೆ ಹೋಗುತ್ತಿದ್ದಾಗ ಕಾರುಗಳಿಗೆ ಹಾಗೂ ಬೈಕ್‌ಗಳಿಗೆ ಡಿಕ್ಕಿ ಹೊಡೆದು ಪರಾರಿಯಾಗಲು ಯತ್ನಿಸಿದಾಗ ಮೇಗಿನಪೇಟೆಯ ಬಳಿ ಪೊಲೀಸರು ಅಡ್ಡಗಟ್ಟಿ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.
ಈತ ಈ ಹಿಂದೆ ವಿಟ್ಲದಲ್ಲಿ ಪುಡಿರೌಡಿಯಾಗಿದ್ದು ಕೆಲ-ಕೃತ್ಯದಲ್ಲಿ ಭಾಗಿಯಾಗಿದ್ದಾನೆ. ಇದೀಗ ವಿಟ್ಲ ಪೊಲೀಸರು ಈತನನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.