Published
5 months agoon
By
Akkare Newsಬೆಂಗಳೂರು: ಮುಡಾ ಹಗರಣ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಆಯೋಜಿ ಸಿರುವ ಮೈಸೂರು ಚಲೋ ಪಾದಯಾತ್ರೆ ಶನಿವಾರ ಬೆಳಗ್ಗೆ 8 ಗಂಟೆಗೆ ಜೆಡಿಎಸ್ ಜತೆಗೂಡಿಯೇ ಪ್ರಾರಂಭವಾಗಲಿದೆ. ಇದ ರೊಂದಿಗೆ ರಾಜ್ಯ ಸರಕಾರದ ವಿರುದ್ಧಎನ್‌ಡಿಎ ಮೈತ್ರಿಕೂಟ ಅಧಿಕೃತವಾಗಿ ರಣಕಹಳೆ ಮೊಳಗಿಸಲು ಸಜ್ಜಾಗಿದೆ.
ಬೆಂಗಳೂರಿನ ಕೆಂಗೇರಿ ಕೆಂಪಮ್ಮ ದೇಗುಲ ಬಳಿ ಇರುವ ಜೆಕೆ ಗ್ರ್ಯಾಂಡ್ ಅರೆನಾ ಸೆಂಟರ್‌ನಿಂದ ಪಾದಯಾತ್ರೆ ಪ್ರಾರಂಭ ವಾಗಲಿದೆ. ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ, ಕೇಂದ್ರ ಸಚಿವ ಕುಮಾರಸ್ವಾಮಿ, ಮಾಜಿ ಸಿಎಂ ಬಿಎಸ್‌ವೈ, ಬಿಜೆಪಿ ರಾಜ್ಯ ಉಸ್ತುವಾರಿ ರಾಧಾ ಮೋಹನದಾಸ್ ಅಗರ್ವಾಲ್, ವಿಪಕ್ಷ ನಾಯಕರಾದ ಆರ್. ಅಶೋಕ್, ಛಲವಾದಿ ನಾರಾಯಣಸ್ವಾಮಿ, ವಿಧಾನಸಭೆಯ ಜೆಡಿಎಸ್ ನಾಯಕ ಸಿ.ಬಿ. ಸುರೇಶ್ ಬಾಬು, ಮಾಜಿ ಸಚಿವ ಜಿ.ಟಿ. ದೇವೇಗೌಡ ಉದ್ಘಾಟನ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಸಮಾರೋಪಕ್ಕೆ ಅಮಿತ್ ಶಾ?
ಮೈಸೂರಿನಲ್ಲಿ ನಡೆಯುವ ಪಾದ ಯಾತ್ರೆಯ ಸಮಾರೋಪಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರಿಗೆ ಆಹ್ವಾನ ನೀಡಲಾಗಿದೆ. ಅಮಿತ್ ಶಾ ಭಾಗವಹಿಸಿ ಸಿದ್ದರಾಮಯ್ಯ ವಿರುದ್ಧ ವಾಗ್ಧಾಳಿ ನಡೆಸುವ ಸಾಧ್ಯತೆ ದಟ್ಟವಾಗಿದೆ.
ಪಾದಯಾತ್ರೆಗೆ ಸಂಬಂಧಪಟ್ಟಂತೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಬಿ.ವೈ. ವಿಜಯೇಂದ್ರ, ಪಾದಯಾತ್ರೆಯಲ್ಲಿ ಪ್ರತೀ ದಿನ ಕನಿಷ್ಠ 8ರಿಂದ 10 ಸಾವಿರ ಜನರು ಪಾಲ್ಗೊಳ್ಳ ಲಿದ್ದಾರೆ. ರಾಜ್ಯದ ಮೂಲೆ ಮೂಲೆಯಿಂದ ಕಾರ್ಯಕರ್ತರು ಬರಲಿದ್ದಾರೆ. ಕಾಂಗ್ರೆಸ್ ಪಕ್ಷ- ಸರಕಾರದ ಭ್ರಷ್ಟಾಚಾರದ ವಿರುದ್ಧ ಹೋರಾಟವನ್ನು ತಾರ್ಕಿಕ ಅಂತ್ಯಕ್ಕೆ ಒಯ್ಯಲು ಬಿಜೆಪಿ ಮತ್ತು ಜೆಡಿಎಸ್ ಜಂಟಿಯಾಗಿ ಪಾದಯಾತ್ರೆ ಹಮ್ಮಿ ಕೊಂಡಿದ್ದೇವೆ ಎಂದರು.
ಹಳೇ ಮೈಸೂರು ಭಾಗದಲ್ಲಿ ಕಹಳೆ: ಹಳೆ ಮೈಸೂರು ಭಾಗ ದಲ್ಲಿ ಉಭಯ ಪಕ್ಷಗಳ ನೆಲೆ ಗಟ್ಟಿಗೊಳಿಸುವುದಕ್ಕೆ ಉಭಯ ಪಕ್ಷಗಳು ಸಜ್ಜಾಗಿವೆ. ಪ್ರೀತಂಗೌಡ ಕಾರಣಕ್ಕಾಗಿ ಪಾದಯಾತ್ರೆಗೆ ನೈತಿಕ ಬೆಂಬಲವೂ ಇಲ್ಲ ಎಂದು ಹೇಳಿದ್ದ ಕುಮಾರಸ್ವಾಮಿ ಬಿಜೆಪಿ ವರಿಷ್ಠರ ಮಧ್ಯಸ್ಥಿಕೆಯಿಂದ ತಮ್ಮ ನಿಲುವು ಬದಲಿಸಿದ್ದಾರೆ.
ವರಿಷ್ಠರ ಕರೆ: ಇವೆಲ್ಲದರ ಮಧ್ಯೆ ಬಿಜೆಪಿ ನಾಯಕರಿಗೆ ದಿಲ್ಲಿ ನಾಯಕರೇ ಕರೆ ಮಾಡಿ ಪಾದಯಾತ್ರೆಯಲ್ಲಿ ಸಕ್ರಿಯವಾಗಿ ಭಾಗವಹಿಸುವಂತೆ ಸೂಚನೆ ನೀಡಿದ್ದಾರೆ. ಇದು ವಿಜಯೇಂದ್ರ ನೀಡಿದ ಕರೆ ಎಂದು ಭಾವಿಸುವುದು ಬೇಡ. ಮುಡಾ ವಿಚಾರ
ದಲ್ಲಿ ರಾಷ್ಟ್ರಮಟ್ಟದಲ್ಲಿ ಚರ್ಚೆ ನಡೆಯುತ್ತಿರುವುದರಿಂದ ಈ ಬಗ್ಗೆ ಹೋರಾಟದ ಕಿಚ್ಚನ್ನು ಪ್ರದರ್ಶನ ಮಾಡಿ ಎಂದು ಸೂಚನೆ ನೀಡಲಾಗಿದೆ.
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ)ದಲ್ಲಿ ಸ್ವತಃ ಸಿಎಂ ಸಿದ್ದರಾಮಯ್ಯ ಹಗರಣ ನಡೆಸಿದ್ದಾರೆಂದು ಬಿಜೆಪಿ ಆರೋಪಿಸಿದೆ. ಮೈಸೂರಿನ ಕೆಸರೆ ಗ್ರಾಮದ ಸರ್ವೇ ನಂಬರ್ 464ರಲ್ಲಿ ದೇವನೂರು ಬಡಾವಣೆ 2001ರಲ್ಲಿ ನಿರ್ಮಾಣ ಆಗಿದೆ. ಇದರಲ್ಲಿ ನಿವೇಶನ, ರಸ್ತೆ, ಪಾರ್ಕ್‌ಗಳನ್ನು ಮಾಡಿ ಹಂಚಿಕೆ ಮಾಡಲಾಗಿದೆ. ಇದೇ ಬಡಾವಣೆಯ ಅದೇ ಸರ್ವೇ ನಂಬರ್ 464ರಲ್ಲಿ 3.16 ಎಕರೆ ಜಮೀನು 2004ರಲ್ಲಿ ಸಿದ್ದರಾಮಯ್ಯ ಅವರ ಭಾವಮೈದುನ ಮಲ್ಲಿಕಾರ್ಜುನ ಅವರಿಗೆ ಮಾರಾಟವಾಗಿದೆ. ಆ ಜಮೀನನ್ನು ಸಿದ್ದರಾಮಯ್ಯ ಪತ್ನಿಗೆ ನೀಡಲಾಗಿದೆ. ಇದಕ್ಕೆ ಬದಲಿಯಾಗಿ 14 ನಿವೇಶನಗಳನ್ನು ಮುಡಾದಿಂದ ಸಿದ್ದರಾಮಯ್ಯ ಪಡೆದಿದ್ದಾರೆ ಎಂದು ಆರೋಪಿಸಲಾಗಿದೆ.
ಪಾದಯಾತ್ರೆ ವೇಳಾಪಟ್ಟಿ
-ಆ. 3-ಕೆಂಗೇರಿಯಿಂದ 16 ಕಿ.ಮೀ. ನಡಿಗೆ
-ಆ. 4-ಬಿಡದಿಯಿಂದ 22 ಕಿ.ಮೀ. ನಡಿಗೆ
-ಆ. 5-ಕೆಂಗಲ್‌ನಿಂದ 20 ಕಿ.ಮೀ.
-ಆ. 6-ನಿಡಘಟ್ಟದಿಂದ 20 ಕಿ.ಮೀ.
-ಆ. 7-ಮಂಡ್ಯದಿಂದ 16 ಕಿ.ಮೀ.
-ಆ. 8-ತೂಬಿನಕೆರೆ ಬಳಿ ಆರಂಭ
-ಆ. 9- ಶ್ರೀರಂಗಪಟ್ಟಣದಲ್ಲಿ ಆರಂಭ
-ಆ. 10-ಮೈಸೂರಿನಲ್ಲಿ ಸಮಾರೋಪ
ಅಹಿಂದ ಹೆಸರಿನಿಂದ ಅಧಿಕಾರ ನಡೆಸು ತ್ತಿರುವ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರವು ಆ ಎಲ್ಲ ಸಮುದಾಯಗಳಿಗೆ ಮೋಸ ಮಾಡಿದೆ. ಪರಿಶಿಷ್ಟರ ಹಣ ಲೂಟಿ ಮಾಡಿದೆ. ಬಿಜೆಪಿ- ಜೆಡಿಎಸ್ ಜತೆಗೂಡಿ ಸದನದ ಒಳಗೆ ಮತ್ತು ಹೊರಗೆ ನಾವು ಇದರ ವಿರುದ್ಧ ಹೋರಾಟ ಮಾಡಿ, ಸರಕಾರವನ್ನು ಒಂಟಿಗಾಲಿನಲ್ಲಿ ನಿಲ್ಲುವಂತೆ ಮಾಡಿದ್ದೇವೆ.
–ಬಿ.ವೈ. ವಿಜಯೇಂದ್ರ,
ಬಿಜೆಪಿ ರಾಜ್ಯಾಧ್ಯಕ್ಷ
ಮೈಸೂರು ಚಲೋ ಪಾದಯಾತ್ರೆ ಭ್ರಷ್ಟಾಚಾರದ ವಿರುದ್ಧದ ದಂಡ ಯಾತ್ರೆ. ಆರೂವರೆ ಕೋಟಿ ಕನ್ನಡಿಗರ ಜನಾ ಕ್ರೋಶಕ್ಕೆ ದನಿ ಗೂಡಿ ಸುವ ಪ್ರಜಾಯಾತ್ರೆ. ಅನೈತಿಕತೆಯ ವಿರುದ್ಧ ನೈತಿಕತೆಯ ಮೌನಯಾತ್ರೆ. ಸಿದ್ದ ರಾಮಯ್ಯನವರೇ ತಮಗೆ ಕಿಂಚಿ ತ್ತಾದರೂ ನೈತಿಕತೆ, ಆತ್ಮಸಾಕ್ಷಿ,ಅಂತಃಕರಣ ಇದ್ದರೆ ಕೂಡಲೇ ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಡಿ.
-ಆರ್. ಅಶೋಕ್,
ವಿಧಾನಸಭೆ ವಿಪಕ್ಷ ನಾಯಕ
ಬಿಜೆಪಿ-ಜೆಡಿಎಸ್ ಪಾದ ಯಾತ್ರೆಗೆ ಅನುಮತಿ ಕೊಡಲು ಸರಕಾರ ನಿರ್ಧರಿಸಿದೆ. ಶಾಂತಿ ಯುತ ಪಾದಯಾತ್ರೆ ನಡೆಸುತ್ತೇವೆ ಎಂದಿರುವ ಹಿನ್ನೆಲೆಯಲ್ಲಿ ಅನುಮತಿ ಕೊಡಲು ನಾವು ನಿರ್ಧರಿಸಿದ್ದೇವೆ.
-ಡಾ| ಪರಮೇಶ್ವರ, ಗೃಹಸಚಿವ