Published
10 months agoon
By
Akkare Newsಪುತ್ತೂರು ನಗರ ವಲಯದ ಚೆಸ್ ಪಂದ್ಯಾಟವು ದಿನಾಂಕ 7/8/2024 ರಂದು ಸ. ಹಿ. ಪ್ರಾ. ಶಾಲೆ ಕೋಡಿ0ಬಾಡಿ ಇಲ್ಲಿ ನಡೆಯಿತು. ಕೋಡಿ0ಬಾಡಿ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಜಯಪ್ರಕಾಶ್ ಬದಿನಾರು ದೀಪ ಪ್ರಜ್ವಲನೆ ಮಾಡುವ ಮೂಲಕ ಸಭಾ ಕಾರ್ಯಕ್ರಮ ಉದ್ಘಾಟಿಸಿದರು.
ಶ್ರೀ ನರೇಶ್ ಲೋಬೋ ಪುತ್ತೂರು ನಗರ ವಲಯದ ಪ್ರೌಢ ಶಾಲೆಯ ನೋಡೆಲ್ ಅಧಿಕಾರಿಯವರು ಚದುರಂಗದ ಹಾಸಿನ ಕಾಯಿಯನ್ನು ಮುನ್ನಡೆಸುವ ಮೂಲಕ ಚೆಸ್ ಪಂದ್ಯಾಟಕ್ಕೆ ಚಾಲನೆ ನೀಡಿದರು.
ಶಾಲಾ ಎಸ್. ಡಿ. ಎಂ. ಸಿ. ಅಧ್ಯಕ್ಷರಾದ ಶ್ರೀಯುತ ಶೇಖರ ಪೂಜಾರಿ ಯವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಶುಭ ಹಾರೈಸಿದರು.
ಗಣ್ಯ ಅತಿಥಿಗಳಾಗಿ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ಯಾದ ಸ್ಟ್ಯಾನಿ ಮ ಸ್ಕರೇನಸ್ , ಪುತ್ತೂರು ನಗರ ವಲಯದ ಪ್ರಾಥಮಿಕ ಶಾಲೆಯ ನೋಡೆಲ್ ಅಧಿಕಾರಿ ಶ್ರೀಮತಿ ಕುಸುಮಾವತಿ, ಕೋಡಿ0ಬಾಡಿ ಕ್ಲಸ್ಟರ್ ನ ಸಿ. ಆರ್. ಪಿ. ಶ್ರೀ ಅಶ್ರಫ್,ಶಾಲಾ ಎಸ್.ಡಿ. ಎಂ. ಸಿ. ಉಪಾಧ್ಯಕ್ಷರಾದ ಶ್ರೀ ಸುರೇಶ್ ಶೆಟ್ಟಿ, ಶಾಲಾ ಮುಖ್ಯ ಗುರುಗಳು ಶ್ರೀ ಬಾಲಕೃಷ್ಣ ಎನ್ ಮತ್ತು ದೈಹಿಕ ಶಿಕ್ಷಣ ಶಿಕ್ಷಕಿ ಶ್ರೀಮತಿ ವಿಜಯ ಪ್ರಭು ಎಂ ವೇದಿಕೆಯಲ್ಲಿ ಉಪಸ್ಥಿತರಿದ್ದು ಶುಭ ಹಾರೈಸಿದರು.
ಪುತ್ತೂರು ತಾಲೂಕಿನ ಪ್ರಭಾರ ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಶ್ರೀಯುತ ಚಕ್ರಪಾಣಿ ಯವರು ಆಗಮಿಸಿ ಚೆಸ್ ಪಂದ್ಯಾಟಕ್ಕೆ ಶುಭ ಹಾರೈಸಿದರು.ಶಾಲಾ ಸಹ ಶಿಕ್ಷಕಿಯರು, ಎಸ್. ಡಿ. ಎಂ. ಸಿ. ಪದಾಧಿಕಾರಿಗಳು, ಪೋಷಕರುಮತ್ತು ಹಿರಿಯ ವಿದ್ಯಾರ್ಥಿಗಳು ಕಾರ್ಯಕ್ರಮಕ್ಕೆ ಸಹಕರಿಸಿದರು.