Published
4 months agoon
By
Akkare Newsಪುತ್ತೂರು: ಕೋಡಿಂಬಾಡಿಯ ಶಾಂತಿನಗರ ಪೂಜಾ ಮೈದಾನದಲ್ಲಿ ಶಾಂತಿನಗರ ಶ್ರೀ ಸತ್ಯನಾರಾಯಣ ಪೂಜಾ ಸಮಿತಿಯ ವತಿಯಿಂದ ನಡೆದ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಕೋಡಿಂಬಾಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಮಲ್ಲಿಕಾ ಅಶೋಕ್ ಧ್ವಜಾರೋಹಣ ನೆರವೇರಿಸಿ ನೂತನ ಧ್ಥಜಸ್ಥಂಭವನ್ನು ಲೋಕಾರ್ಪಣೆಗೊಳಿಸಿದರು.
ಮುಖ್ಯ ಅತಿಥಿಗಳಾಗಿದ್ದ ಗ್ರಾ.ಪಂ. ಉಪಾಧ್ಯಕ್ಷ ಜಯಪ್ರಕಾಶ್ ಬದಿನಾರು ಮತ್ತು ಶಾಂತಿನಗರ ಶ್ರೀ ಮಹಾವಿಷ್ಣು ದೇವಸ್ಥಾನದ ಹಿರಿಯ ಮೊಕ್ತೇಸರ ಯು.ಜಿ. ರಾಧಾ ಶುಭ ಹಾರೈಸಿದರು.
ಪೂಜಾ ಸಮಿತಿಯ ಗೌರವಾಧ್ಯಕ್ಷ ರಾಜೇಶ್, ಅಧ್ಯಕ್ಷ ಉಮೇಶ್ ಪನಿತೋಟ, ಕಾರ್ಯದರ್ಶಿ ಗುರುಪ್ರಸಾದ್ ಅಮೀನ್, ಕೋಶಾಧಿಕಾರಿ ಸೇಸಪ್ಪ ಎಸ್. ಮತ್ತಿತರರು ಸಹಕರಿಸಿದರು.
ಶಾಂತಿನಗರ ಸರಕಾರಿ ಪ್ರೌಢಶಾಲಾ ವಿದ್ಯಾರ್ಥಿಗಳು ಧ್ವಜಗೀತೆ ಹಾಡಿದರು.
ಪತ್ರಕರ್ತರಾದ ಸಂತೋಷ್ ಕುಮಾರ್ ಶಾಂತಿನಗರ ಕಾರ್ಯಕ್ರಮ ನಿರೂಪಿಸಿದರು.