Published
4 months agoon
By
Akkare Newsಕೋಡಿಂಬಾಡಿ: ಕೋಡಿಂಬಾಡಿ ಗ್ರಾಮದ ಮಠಂತಬೆಟ್ಟು ಶ್ರೀ ಮಹಿಷಮರ್ದಿನಿ ದೇವಸ್ಥಾನದಲ್ಲಿ 14 ನೇ ವರ್ಷದ ಶ್ರೀ ವರಮಹಾಲಕ್ಷ್ಮೀ ವೃತ ಪೂಜೆಯು ವಿಜೃಂಭಣೆಯಿಂದ ನಡೆಯಿತು. ನೂರಾರು ಜನರು ಈ ಪುಣ್ಯ ಪೂಜೆಯಲ್ಲಿ ಪಾಲ್ಗೊಂಡು ಪ್ರಸಾದ ಪಡೆದುಕೊಂಡರು ಮತ್ತು ಮಹಾ ಪ್ರಸಾದ ಅನ್ನದಾನವನ್ನು ಸ್ವೀಕರಿಸಿ ಪುನೀತರಾದರು. ಪುತ್ತೂರಿನ ಶಾಸಕರಾದ ಅಶೋಕ್ ಕುಮಾರ್ ರೈಯವರೂ ಪೂಜೆಯಲ್ಲಿ ಭಾಗವಹಿಸಿ,ಪಾವನ ಪ್ರಸಾದ ಸ್ವೀಕರಿಸಿದರು.
ಬೆಳಿಗ್ಗೆ ಕಲಶ ಪ್ರತಿಷ್ಠೆ ಹಾಗೂ ಶ್ರೀ ವರಮಹಾಲಕ್ಷ್ಮಿ ಪೂಜೆ ಪ್ರಾರಂಭ, ಲಲಿತ ಸಹಸ್ರನಾಮ ಪಾರಾಯಣ, ಮಧ್ಯಾಹ್ನ ಮಹಾಪೂಜೆ, ಮಂಗಳಾರತಿ, ಪ್ರಸಾದ ವಿತರಣೆ ಮತ್ತು ಅನ್ನಸಂತರ್ಪಣೆ ಜರಗಿತು.
ಅರ್ಚಕ ಬಾಲಕೃಷ್ಣ ಐತಾಳ್ ನೇತೃತ್ವದಲ್ಲಿ ಧಾರ್ಮಿಕ ವಿಧಿವಿಧಾನ ನೆರವೇರಿತು. ವರಮಹಾಲಕ್ಷ್ಮಿ ಪೂಜಾ ಸಮಿತಿಯ ಗೌರವಾಧ್ಯಕ್ಷರಾದ ರೇಣುಕಾ ಮುರಳೀಧರ ರೈ ಮಠಂತಬೆಟ್ಟು, ಸೌಮ್ಯ ಶಿವಪ್ರಕಾಶ್ ಕೋಡಿ ಮೋನಡ್ಕ, ಅಧ್ಕಕ್ಷೆ ಶ್ರದ್ಧಾ ಸುದೇಶ್ ಶೆಟ್ಟಿ ಶಾಂತಿನಗರ, ಪ್ರಧಾನ ಕಾರ್ಯದರ್ಶಿ ವಿನುತಾ ಜಯಪ್ರಕಾಶ್ ಬದಿನಾರು, ಕೋಶಾಧಿಕಾರಿ ಪ್ರೇಮಲತಾ ದೇವದಾಸ ಪೂಜಾರಿ ಡೆಕ್ಕಾಜೆ, ಗೌರವ ಸಲಹೆಗಾರರಾದ ಪದ್ಮಲತಾ ಜಗನ್ನಾಥ ಶೆಟ್ಟಿ ನಡುಮನೆ, ಪೂರ್ಣಿಮಾ ಸೀತಾರಾಮ ಶೆಟ್ಟಿ ಹೆಗ್ಡೆಹಿತ್ಲು, ಭುವನೇಶ್ವರಿ ನಾಗೇಶ್ ಶರ್ಮ ಮಠದಬೆಟ್ಟು,
ರಾಧಿಕಾ ರಮೇಶ್ ಸಾಮಂತ್ ನೆಕ್ಕರಾಜೆ, ಅನುರಾಧ ರಮೇಶ್ ನಾಯಕ್ ನೆಕ್ಕರಾಜೆ, ಯಮುನಾ ಡೆಕ್ಕಾಜೆ, ಶಿಲ್ಪಾ ಆರ್. ಭಟ್, ಅಮಿತಾ ಗೌತಮ್, ಜೊತೆ ಕಾರ್ಯದರ್ಶಿಗಳಾದ ಸವಿತಾ ವಿಕ್ರಂ ಶೆಟ್ಟಿ ಅಂತರ, , ಪೂರ್ಣಿಮಾ ಯತೀಶ್ ಶೆಟ್ಟಿ ಬರಮೇಲು, ಪ್ರೇಮಲತಾ ವಿ. ಶೆಟ್ಟಿ ದೇಂತಾರು ಸಹಿತ ನೂರಾರು ಮಂದಿ ಭಾಗವಹಿಸಿದ್ದರು.