ನಮ್ಮೊಂದಿಗೆ ಸಂಪರ್ಕ ಸಾಧಿಸಿ

ಇಂದಿನ ಕಾರ್ಯಕ್ರಮ

ಮೆಸ್ಕಾಂ ಪುತ್ತೂರು ನಗರ ಉಪವಿಭಾಗ ಪುತ್ತೂರು 2 ಶಾಖೆ ವತಿಯಿಂದ ಕೃಷಿ ಪಂಪ್ ಆಧಾರ್ ಜೋಡಣೆ ಕಾರ್ಯಕ್ರಮ

Published

on

ಮೆಸ್ಕಾಂ ಪುತ್ತೂರು ನಗರ ಉಪವಿಭಾಗದ ಪುತ್ತೂರು 2 ಶಾಖಾ ವತಿಯಿಂದ ವಿದ್ಯುತ್ ಕೃಷಿ ಪಂಪು ಸೆಟ್ ಸ್ಥಾವರಗಳ RR ನಂಬ್ರ ಗಳಿಗೆ ಪ್ರಸ್ತುತ ಮಾಲೀಕರ/ಬಳಕೆದಾರರ ಆಧಾರ್ ನಂಬ್ರಗಳನ್ನು ಕಡ್ಡಾಯ ಲಿಂಕ್ ಮಾಡುವ ಕಾರ್ಯಕ್ಕೆ ಗ್ರಾಹಕರಿಗೆ ಅನೂಕೂಲವಾಗುವಂತೆ ಸಂಬಂಧಿಸಿದ ಧಾಖಲೆಗಳನ್ನು ಸಂಗ್ರಹಿಸುವ ಉಚಿತ ವಿಶೇಷ ಶಿಬಿರವನ್ನು ಅಯೋಜಿಸಿದ್ದು ಗ್ರಾಹಕರು ಸದುಪಯೋಗ ಪಡೆದುಕೊಳ್ಳಲು ಮೆಸ್ಕಾಂ ಪ್ರಕಟಣೆಯಲ್ಲಿ ಕೋರಲಾಗಿದೆ..

ದಿನಾಂಕ. 22.08.2024
ಸ್ಥಳ :ಧನಲಕ್ಷ್ಮೀ ಎಲೆಕ್ಟ್ರಿಕಲ್ ಅಂಗಡಿ ಹತ್ತಿರ
ಮುಲಾರ್ ಕಾಂಪ್ಲೆಕ್ಸ್, ಮುಂಡೂರು
ಸಮಯ ಬೆಳಿಗ್ಗೆ 10.30 ರಿಂದ

ದಿನಾಂಕ. 23.08.2024
ಸ್ಥಳ : ಬಲ್ನಾಡು ಗ್ರಾಮ ಪಂಚಾಯತ್ ಕಚೇರಿ ಬಿಳಿಯೂರುಕಟ್ಟೆ.
ಸಮಯ ಬೆಳಿಗ್ಗೆ 10.30 ರಿಂದ

ಅಗತ್ಯ ಧಾಖಲೆಗಳು
1. ಹೆಸರು ಬದಲಾವಣೆಗೆ ಅರ್ಜಿ
2. ಕೃಷಿ ಜಾಗದ RTC ಪ್ರತಿ
3. ಪ್ರಸ್ತುತ ಮಾಲೀಕರ/ಬಳಕೆದಾರರ ಆಧಾರ್ ಪ್ರತಿ (ಅದರಲ್ಲಿ ಸ್ಪಷ್ಟವಾಗಿ ಕೃಷಿ ಪಂಪ್ ಸೆಟ್ ನ RR ನಂಬ್ರ ಮತ್ತು ಫೋನ್ ನಂಬರ್ ನಮೂದಿಸುವುದು)
4. ಇಂಡೆಮ್ನಿಟಿ ಬಾಂಡ್ (ಅಗ್ರಿಮೆಂಟ್) (ಶಾಖೆಯಿಂದಲೇ ಒದಗಿಸಲಾಗುವುದು)
5. ಪೂರ್ವ ಗ್ರಾಹಕರು ಮರಣ ಹೊಂದಿದ್ದಲ್ಲಿ ಮರಣ ಪ್ರಮಾಣ ಪತ್ರ, ಸಂತತಿ ನಕ್ಷೆ (ಪಿತ್ರಾರ್ಜಿತ ಪ್ರಕರಣಗಳಲ್ಲಿ)
6. ಕ್ರಯಕ್ಕೆ ತೆಗೆದುಕೊಂಡ ಪ್ರಕರಣಗಳಲ್ಲಿ ಕ್ರಯ ಪತ್ರ

 

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version