ನಮ್ಮೊಂದಿಗೆ ಸಂಪರ್ಕ ಸಾಧಿಸಿ

ಇತರ

ಪುತ್ತೂರು ಪೊಲೀಸರು ಮತ್ತು ನಾಗರಿಕರ ನಡುವೆ ಮಾತಿನ ಜಟಾಪಟಿ ಕರ್ನಾಟಕ ರಾಜ್ಯದಲ್ಲಿ ಇಲ್ಲದ ಕಾನೂನು ಪುತ್ತೂರಿನಲ್ಲಿ ಯಾಕೆ….? ಪ್ರಯಾಣಿಕರಿಗೆ ನಿರಂತರ ಕಿರುಕುಳ ನೀಡುತ್ತಿರುವ ಪೋಲಿಸ್ ಇಲಾಖೆ…? ಶಾಸಕರಿಗೆ ದೂರು ನೀಡಲು ಸಾರ್ವಜನಿಕರ ಆಗ್ರಹ

Published

on

ಕಬಕ; ನಿರಂತರ ಕಬಕ ಪೇಟೆ ಮದ್ಯೆ ಟ್ರಾಫಿಕ್ ಪೋಲಿಸರು   ಹೊಂಚು  ಹಾಕಿ ವಾಹನಗಳ  ತಪಾಸಣೆ ಯನ್ನು ಪ್ರಶ್ನಿಸಿ ರಹದಾರಿ ಗಸ್ತು ಪೋಲಿಸ್ ವಾಹನ ದ ಪೋಲಿಸ್ ರನ್ನು ಕಬಕ ದ ನಾಗರಿಕರು ತರಾಟೆಗೆ ತೆಗೆದು ಕೊಂಡ ಘಟನೆ ಶುಕ್ರವಾರ ಮದ್ಯಾಹ್ನ ಕಬಕ ಜಂಕ್ಷನ್ ನಲ್ಲಿ ನಡೆದಿದೆ.

 

ಇಂದು ರಹದಾರಿ ಗಸ್ತು ಪಡೆಯ ವಾಹನ ಕಬಕ ಪೇಟೆಯಲ್ಲಿ ತಪಾಸಣೆ ಗೆ ಬಂದಾಗ ಕಬಕ ದಲ್ಲಿ  ಸೇರಿದ  ಸರ್ವ ನಾಗರಿಕರು ಪೋಲಿಸ್ ವಾಹನಕ್ಕೆ ಮುತ್ತಿಗೆ ಹಾಕಿ ಪೋಲಿಸ್ ರನ್ನು ತರಾಟೆಗೆ ತೆಗೆದುಕೊಂಡರು, ಕಬಕ ಪೇಟೆಯಲ್ಲಿ ನಿರಂತರ ತಪಾಸಣೆ ನಿಂತರೆ ಎಲ್ಲಾ ನಾಗರಿಕರಿಗೆ ತೊಂದರೆ ಆಗುತದೆ, ಶಾಲಾ ಅವದಿಯಲ್ಲಿ ಮಕ್ಕಳ ನ್ನು ಶಾಲೆಗೆ ತಲುಪಿಸುವ ಜನರು ವಾಹನ ಕಬಕ ಪೇಟೆ ಮೂಲಕ ಹೋಗಲು ಹಿಂದೇಟು ಹಾಕುದರಿಂದ ಮಕ್ಕಳಿಗೆ ಸರಿಯಾದ ವೇಳೆಯಲ್ಲಿ ಶಾಲೆ ತಲುಪಲು ಸಾದ್ಯವಾಗುದಿಲ್ಲ,  ತುರ್ತು ಅರೋಗ್ಯ ಸಮಸ್ಯೆ  ಯಿಂದ  ಆಸ್ಪತ್ರೆ ತೆರಳುವ  ಜನರಿಗೂ  ಇದರಿಂದ ತೊಂದರೆ ಉಂಟಾಗುತದೆ, ವಾಹನ ತಪಾಸಣೆ ಯ. ನಿರಂತರ ಕಿರಿ ಕಿರಿ ಯದಾಗಿ  ನಾಗರಿಕರು ಪೇಟೆಗೆ ಬರಲು ಹಿಂಜರಿಯುದರಿಂದ ಅಂಗಡಿ ವ್ಯಾಪಾರಕ್ಕೂ ತೊಂದರೆ ಉಂಟಾಗುತದೆ, ಅದರಿಂದ ಪೇಟೆ ಮದ್ಯೆ ತಪಾಸಣೆ ಮಾಡಬಾರದು, ವಾಹನಗಳನ್ನು ಅಡ್ಡ ಹಾಕಿ ಅಪಾಯಕಾರಿ ರೀತಿಯಲ್ಲಿ ನಿಲ್ಲಿಸಲು ಪ್ರಯತ್ನ ಮಾಡಬಾರದು ಎಂದು ಇಲ್ಲಿನ ಸಾರ್ವಜನಿಕ ರ ಆಗ್ರಹ ವಾಗಿತ್ತು, ನಂತರ ಸಾರ್ವಜನಿಕ ರ ಸಮಸ್ಯೆ ಗಳನ್ನು ತಿಳಿದುಕೊಂಡ ಪೋಲಿಸ್ ತಂಡ  ವಾಹನ ಸವಾರರು ಕಾನೂನು ರೀತಿಯಲ್ಲಿ ಇದ್ದರೆ ತಪಾಸಣೆ ಯಿಂದ ತೊಂದರೆ ಆಗಲ್ಲ ಎಂದು ತಿಳಿಸಿದರು.

ಮುಂದೆ ನಾಗರಿಕರಿಗೆ ಸಮಸ್ಯೆ ಆಗದ ರೀತಿಯಲ್ಲಿ ತಮ್ಮ ಕರ್ತವ್ಯ ನಿರ್ವಹುಸತ್ತೇವೆ, ವಾಹನ ತಪಾಸಣೆ ಗೆ ಸೂಕ್ತ ಸ್ಥಳವನ್ನೇ ಆಯ್ಕೆ ಮಾಡುತ್ತೇವೆ ಎಂದು ಭರವಸೆ ನೀಡಿದರು. 

 

ನಂತರ ಪೋಲಿಸ್ ವಾಹನವನ್ನು ಜನ ಮುಂದೆ ಬಿಟ್ಟರು,ಟ್ರಾಫಿಕ್ ಪೋಲಿಸ್ ವಾಹನಕ್ಕೆ ಮುತ್ತಿಗೆ ಹಾಕಿದ ನಂತರ ಕೆಲವು ಜನರು ತಮ್ಮ ತಮ್ಮ ರಾಜಕೀಯ ನಾಯಕರಿಗೆ  ಕರೆ ಮಾಡಿ ವಿಷಯ ತಿಳಿಸಿದಾಗ ವಿಷಯದ ಬಗ್ಗೆ ಅಧಿಕಾರಿ ಗಳಲ್ಲಿ ಮಾತನಾಡಿ ಸಮಸ್ಯೆ ಗೆ ಪರಿಹಾರ ನೀಡುವ ಭರವಸೆ ದೊರೆಯಿತು. 

ಕಬಕ ಇತಿಹಾಸ ದಲ್ಲಿ ಎಲ್ಲಾ ಪಕ್ಷಗಳು, ಎಲ್ಲಾ ಸಮುದಾಯದ ಜನರು ಒಂದೇ ವೇದಿಕೆ ಯಲ್ಲಿ ಒಂದೇ ಧ್ವನಿ ಯಲ್ಲಿ  ಒಂದು ವಿಷಯದ ಬಗ್ಗೆ ಒಂದು ಸೇರಿದ  ಘಟನೆ ಇದು ಪ್ರಥಮ ಎಂದು ಜನ ಹೇಳಿ ಕೊಳ್ಳುತಿದ್ದರು. ಕಬಕದ ಪ್ರಮುಖ ಸಂಘಟನೆಯಾದ ಯೂತ್ ಪ್ರೆಂಡ್ ಕಬಕ  ಮತ್ತು ಮಹಾದೇವಿ ಯುವಕ ಮಂಡಲ ಸದಸ್ಯರು ಸಾರ್ವಜನಿಕ ರೊಂದಿಗೆ ಈ ಸಂಧರ್ಭದಲ್ಲಿ ಸಹಕರಿಸಿದರು. ಬಳಿಕ ಪುತ್ತೂರು ಸಂಚಾರಿ ಪೋಲಿಸ್ ತಂಡ ಸ್ಥಳಕ್ಕೆ ಆಗಮಿಸಿ  ಸೇರಿದ ಜನರ ಮದ್ಯೆ ಮಾತುಕತೆ ನಡೆದು   ಸೇರಿದ ಜನರ ಮನವೊಲಿಸಿ ಚದುರುವಂತೆ ಮಾಡಿದರು

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version