Published
4 months agoon
By
Akkare Newsಪುತ್ತೂರು: ನಗರ ಸ್ಥಳಿಯ ಸಂಸ್ಥೆಗಳ -2024ರ 10ನೇ ಅವಧಿಯ ಅಧ್ಯಕ್ಷ/ಉಪಾಧ್ಯಕ್ಷ ಹುದ್ದೆಗಳಿಗೆ ಚುನಾವಣೆಯನ್ನು ನಡೆಸುವ ಕುರಿತು ಸಹಾಯಕ ಆಯುಕ್ತರು ಹಾಗೂ ಉಪ ವಿಭಾಗೀಯ ದಂಡಾಧಿಕಾರಿಯವರ ಕಾರ್ಯಾಲಯ ಪುತ್ತೂರು ಉಪ ವಿಭಾಗದಿಂದ ವೇಳಾಪಟ್ಟಿಯನ್ನು ಪ್ರಕಟಿಸಿದ್ದಾರೆ.
ಈ ಆದೇಶದಂತೆ, ಸೆ.03ರ ಮಂಗಳವಾರದಂದು ನಾಮಪತ್ರ ಸಲ್ಲಿಕೆಯಿಂದ ಅಗತ್ಯ ಬಿದ್ದರೆ ಚುನಾವಣೆ ನಡೆಸಲು ದಿನಾಂಕ ನಿಗದಿಯಾಗಿದ್ದು, ವಿವರಗಳು
ಹೀಗಿವೆ:
ಸೆ.03ರ ಅಪರಾಹ್ನ 12.30 ರಿಂದ 01.30ರವರೆಗೆ ನಾಮಪತ್ರ ಸಲ್ಲಿಸಲು ಅವಕಾಶವಿದ್ದು, ಅದೇ ದಿನ ಅಪರಾಹ್ನ 2.30 ರಿಂದ 3.00 ಗಂಟೆಯವರೆಗೆ ನಾಮಪತ್ರಗಳ ಪರಿಶೀಲನೆ ನಡೆಯಲಿದೆ.
ಅಪರಾಹ್ನ 3.00 ರಿಂದ 3.15ರವರೆಗೆ ಕ್ರಮಬದ್ಧವಾಗಿ ಕಣದಲ್ಲಿರುವ ಅಭ್ಯರ್ಥಿಗಳ ಘೋಷಣೆ ನಡೆಯಲಿದೆ. ಅಪರಾಹ್ನ 3.15 ರಿಂದ 3.30ರವರೆಗೆ ನಾಮಪತ್ರ ವಾಪಸಾತಿಗೆ ಅವಕಾಶವಿದ್ದು, ಅವಶ್ಯಕತೆ ಇದ್ದಲ್ಲಿ ಅಪರಾಹ್ನ 3.30ರ ಬಳಿಕ ಚುನಾವಣೆ ನಡೆಯಲಿದೆ.
ಎಲ್ಲಾ ಪ್ರಕ್ರಿಯೆಗಳು ಪುತ್ತೂರು ನಗರಸಭೆ ಸಭಾಂಗಣದಲ್ಲಿ ನಡೆಯಲಿದೆ ಎಂದು ಚುನಾವಣಾಧಿಕಾರಿಗಳೂ ಆಗಿರುವ ಪುತ್ತೂರು ಉಪವಿಭಾಗದ ಸಹಾಯಕ ಆಯುಕ್ತರು ಅಧಿಕೃತ ಪ್ರಕಟನೆಯಲ್ಲಿ ತಿಳಿಸಿದ್ದಾರೆ.