Published
4 months agoon
By
Akkare News
ಬಸ್ ವ್ಯವಸ್ಥೆ ಇಲ್ಲದೆ ಅಳಿಕೆ ಗ್ರಾಮಸ್ಥರು ತೀವ್ರ ತೊಂದರೆಯನ್ನು ಅನುಭವಿಸುತ್ತಿದ್ದರು. ಕಳೆದ ವಾರದ ಹಿಂದೆ ಅಳಿಕೆ ಗ್ರಾಮಸ್ಥರು ಶಾಸಕ ಅಶೋಕ್ ರೈ ಬಳಿ ಬಂದು ಮನವಿ ಮಾಡಿ ಬಸ್ ಸಂಚಾರ ಇಲ್ಲದೆ ಕೂಲಿ ಕಾರ್ಮಿಕರು, ವಿದ್ಯಾರ್ಥಿಗಳಿಗೆ ಮತ್ತು ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ ಎಂದು ತಿಳಿಸಿದ್ದರು. ತಕ್ಷಣವೇ ಕೆಎಸ್‌ಆರ್‌ಟಿಸಿ ಅದಿಕಾರಿಗೆ ಕರೆ ಮಾಡಿ ವಾರದೊಳಗೆ ಬಸ್ ವ್ಯವಸ್ಥೆ ಪುನರಾರಂಭಿಸುವಂತೆ ಸೂಚನೆಯನ್ನು ನೀಡಿದ್ದರು.
ಟೈಮಿಂಗ್ಸ್
ಬೆಳಿಗ್ಗೆ 10.20 ವಿಟ್ಲದಿಂದ ಅಳಿಕೆಗೆ, 10.35 ಅಳಿಕೆಯಿಂದ ವಿಟ್ಲಕ್ಕೆ ಮಧ್ಯಾಹ್ನ 1.25 ಕ್ಕೆ ಪುತ್ತೂರಿನಿಂದ ಅಳಿಕೆಗೆ ಹಾಗೂ 2.15 ಕ್ಕೆ ಅಳಿಕೆಯಿಂದ ಪುತ್ತೂರಿಗೆ ಬಸ್ ಸೇವೆ ಆರಂಭಗೊಂಡಿದ್ದು ಇದರ ಪ್ರಯೋಜನಪಡೆದುಕೊಳ್ಳುವಂತೆ ಶಾಸಕರು ಮನವಿ ಮಾಡಿದ್ದಾರೆ.