Published
2 months agoon
By
Akkare Newsಪುತ್ತೂರು : ಮುಂಡೂರು ಗ್ರಾಮ ಪಂಚಾಯಿತಿಗೆ ಒಳಪಟ್ಟ ನೈತಾಡಿ ರಸ್ತೆಯಲ್ಲಿ ಸಾರ್ವಜನಿಕರು ತ್ಯಾಜ್ಯ ವಸ್ತುಗಳನ್ನು ರಸ್ತೆಯ ಬದಿಯಲ್ಲಿ ಬಿಸಾಡುವುದು ಕಂಡುಬಂದಿದ್ದು ಹಲವು ವಾಹನಗಳಿಗೆ ದಂಡ ವಿಧಿಸಿದ ಕಾರಣ ಇನ್ನು ಕೂಡ ಜನ ಎಚ್ಚೆತ್ತುಕೊಳ್ಳದ ಪರಿಣಾಮ ಮುಂಡೂರು ಪಂಚಾಯಿತಿನ ಸದಸ್ಯರ ಕೋರಿಕೆ ಮೇರೆಗೆ ತ್ಯಾಜ್ಯ ವಸ್ತು ಬಿಸಾಡುವುದನ್ನು ಮತ್ತು ದಂಡ ವಿಧಿಸುವ ಉದ್ದೇಶಕ್ಕಾಗಿ ರಸ್ತೆಯಲ್ಲಿ ಸಿಸಿ ಕ್ಯಾಮೆರಾ ಅಳವಡಿಸಲಾಗಿದೆ.
ಇನ್ನು ಮುಂದೆ ಮನೆಯಲ್ಲಿ ಉಪಯೋಗಿಸಿದ ತ್ಯಾಜ್ಯ ವಸ್ತುವನ್ನು ರಸ್ತೆಯಲ್ಲಿ ಬಿಸಾಡಿದರೆ ತಂಡ ವಿಧಿಸಿ ಕಾನೂನು ಕ್ರಮ ಕೈಗೊಳ್ಳಲಾಗುದೆಂದುಮುಂಡೂರು ಗ್ರಾಮ ಪಂಚಾಯತ್ ಅಧ್ಯಕ್ಷರು ಮತ್ತು ಅಭಿವೃದ್ಧಿ ಅಧಿಕಾರಿ ತಿಳಿಸಿರುತ್ತಾರೆ.