Published
2 months agoon
By
Akkare Newsಬೆಂಗಳೂರು : ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧಿತರಾದ ನಟ ದರ್ಶನ್ ತೂಗುದೀಪ ಅವರ ಜಾಮೀನು ಅರ್ಜಿ ವಿಚಾರಣೆ ಇಂದು(ಅ.14) ನಡೆದಿದೆ. ಜಾಮೀನು ಮಂಜೂರಾಗದ ಹಿನ್ನೆಲೆಯಲ್ಲಿ ದರ್ಶನ್ ಗೆ ಮತ್ತೆ ನಿರಾಸೆ ಆಗಿದೆ. A13 ದೀಪಕ್ ಗೆ ಮಾತ್ರ ಜಾಮೀನು ನೀಡಿ ಆದೇಶ ಹೊರಡಿಸಲಾಗಿದೆ. ಪವಿತ್ರಾ ಗೌಡ, ಲಕ್ಷ್ಮಣ್, ನಾಗರಾಜ್ ಅವರಿಗೂ ಜಾಮೀನು ನಿರಾಕರಿಸಲಾಗಿದೆ.
ದರ್ಶನ್ ಅವರ ಜಾರ್ಮಿನು ಅರ್ಜಿ ಸಂಬಂಧ ಬೆಂಗಳೂರಿನ 57 ನೇ ಸಿಸಿಎಚ್ ನ್ಯಾಯಾಲಯದಲ್ಲಿ ಸುದೀರ್ಘ ವಾದ – ಪ್ರತಿವಾದ ನಡೆದಿದ್ದು, ನ್ಯಾಯಾಧೀಶರು ಸೋಮವಾರಕ್ಕೆ ಅಂತಿಮ ಆದೇಶ ಕಾಯ್ದಿರಿಸಿದ್ದರು. ಆದರೆ, ಜಾಮೀನು ಮಂಜೂರಾಗಿಲ್ಲ.
ಅಭಿಮಾನಿಗಳು ದೌಡು :
ಇನ್ನು ನಟ ದರ್ಶನ್ ನೋಡಲು ಬಳ್ಳಾರಿ ಸೆಂಟ್ರಲ್ ಜೈಲ್ ಮುಂಭಾಗ ಅಭಿಮಾನಿಗಳ ದಂಡು ಹರಿದು ಬಂದಿದೆ. ಡಿ ಬಾಸ್ ಫೋಟೋ ಹಿಡಿದು, ಅಭಿಮಾನಿಗಳು ಘೋಷಣೆ ಕೂಗುತ್ತಿದ್ದಾರೆ. ಪೊಲೀಸರು ಬ್ಯಾರಿಕೇ ಡ್ ಅಳವಡಿಸಿ ಅಭಿಮಾನಿಗಳನ್ನು ನಿಯಂತ್ರಿಸಲು ಹರಸಾಹಸ ಪಡುತ್ತಿದ್ದಾರೆ.