Published
2 months agoon
By
Akkare Newsಕೊಪ್ಪಳ : ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರ ಅಪ್ಪಟ ಅಭಿಮಾನಿಯೋರ್ವ ಕೊಪ್ಪಳ ಜಿಲ್ಲೆಯ ಕುಕನೂರು ಪಟ್ಟಣದಲ್ಲಿ ಅವರ ಹೆಸರಿನಲ್ಲಿ ಚಿಕನ್ ಆ್ಯಂಡ್ ಮಟನ್ ಅಂಗಡಿ ಓಪನ್ ಮಾಡಿದ್ದಾರೆ.
ಯುವಕ ಖಾಧೀರ್ ಕಲಾಲ ಎಂಬುವರು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರ ಅಪ್ಪಟ ಅಭಿಮಾನಿಯಾಗಿದ್ದು, ಅವರ ಹೆಸರಿನಲ್ಲಿ ಈ ಅಂಗಡಿ ತೆರೆದಿದ್ದಾರೆ.
ಶೋಭಾ ಕರಂದ್ಲಾಜೆ ಮೇಲಿನ ಅಭಿಮಾನಕ್ಕೆ ಈ ರೀತಿ ಹೆಸರು ಇಟ್ಟಿದ್ದೇನೆ ಎಂದು ಖಾಧೀರ್ ಕಲಾಲ ತಿಳಿಸಿದ್ದಾರೆ. 2008ರಲ್ಲಿ ಚುನಾವಣೆಗೆ ಪ್ರಚಾರಕ್ಕಾಗಿ ಪಟ್ಟಣಕ್ಕೆ ಆಗಮಿಸಿದ್ದ ಶೋಭಾ ಕರಂದ್ಲಾಜೆ ಅವರನ್ನು ಭೇಟಿ ಆಗಿದ್ದರು. ಅವರ ರಾಜಕೀಯ ಮಾತುಗಳನ್ನು ಕೇಳಿ ಅಭಿಮಾನಿ ಆಗಿದ್ದೇನೆ ಎಂದಿದ್ದಾರೆ.
ಚಿಕನ್ ಆ್ಯಂಡ್ ಮಟನ್ ಅಂಗಡಿಗೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೆಸರು ಹಾಕಿಸಿರುವ ವಿಚಾರ ಸಾಕಷ್ಟು ವೈರಲ್ ಆಗಿದೆ.
ಅಪ್ಪಟ ಅಭಿಮಾನಿ ಆಗಿರುವ ಖಾಧೀರ್ ಕಲಾಲ್ ಕಳೆದ 5 ವರ್ಷಗಳ ಹಿಂದೆ ಶೋಭಾ ಕರಂದ್ಲಾಜೆ ಅವರ ಪೋಟೋವನ್ನು ಕೈಮೇಲೆ ಟ್ಯಾಟೋ ಹಾಕಿಸಿಕೊಂಡಿದ್ದಾರೆ.
ಈಗ ಹೊಸದಾಗಿ ಪ್ರಾರಂಭಿಸಿರುವ ಅಂಗಡಿಗೆ ಶೋಭಾ ಕರಂದ್ಲಾಜೆ ಮಟನ್ ಆ್ಯಂಡ್ ಚಿಕನ್ ಸೆಂಟರ್ ಹೆಸರು ಹಾಕಿಸಿದ್ದಾರೆ.