Published
2 months agoon
By
Akkare Newsಪುತ್ತೂರು :ತಾಲ್ಲೂಕಿನ ಪಡುವನ್ನೂರು ಗ್ರಾಮದ ಪಡುಮಲೆಯ ಪೂಮಾಣಿ-ಕಿನ್ನಿಮಾಣಿ, ರಾಜನ್ (ವ್ಯಾಘ್ರ ಚಾಮುಂಡಿ) ದೈವಸ್ಥಾನದಲ್ಲಿ ಕ್ಷೇತ್ರದ ದೈವಗಳಿಗೆ ನವಾನ್ನ ‘ಪುದ್ವಾರ್’ ಸಮರ್ಪಣೆ ಮತ್ತು ರಾಜನ್ ದೈವದ ಪುದ್ವಾರ್ ಮೆಚ್ಚಿ ನೇಮೋತ್ಸವ ಗುರುವಾರ ದೈವಸ್ಥಾನದ ನಿಕಟಪೂರ್ವ ವ್ಯವಸ್ಥಾಪನಾ ಸಮಿತಿ ನೇತೃತ್ವದಲ್ಲಿ ನಡೆಯಿತು.
ಪುರೋಹಿತ ಗಣೇಶ್ ಭಟ್ ನೇತೃತ್ವದಲ್ಲಿ ಗಣಪತಿ ಹವನ, ದೈವ ಸಾನ್ನಿಧ್ಯಗಳಿಗೆ ನವಕ ಕಲಶಾಭಿಷೇಕ, ದೈವಗಳಿಗೆ ತಂಬಿಲ ಸೇವೆ, ನವಾನ್ನ ಸಮರ್ಪಣೆ ನಡೆಯಿತು.
ಕ್ಷೇತ್ರದ ಅರ್ಚಕ ಮಹಾಲಿಂಗ ಭಟ್ ಅವರು ದೈವ ಸಾನ್ನಿಧ್ಯಗಳ ಮುಂದೆ ಪ್ರಾರ್ಥನೆ ನೆರವೇರಿಸಿದರು. ಬಳಿಕ ರಾಜನ್ ದೈವದ ಪುದ್ವಾರ್ ಮೆಚ್ಚಿ ನೇಮೋತ್ಸವ ನಡೆಯಿತು, ಪ್ರಸಾದ ವಿತರಣೆ ಬಳಿಕ ಅನ್ನಸಂತರ್ಪಣೆ ನಡೆಯಿತು.
ಪೂಮಾಣಿ-ಕಿನ್ನಿಮಾಣಿ, ರಾಜನ್ (ವ್ಯಾಘ್ರ ಚಾಮುಂಡಿ) ದೈವಸ್ಥಾನದ ನಿಕಟಪೂರ್ವ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ರವಿರಾಜ್ ಶೆಟ್ಟಿ ಅಣಿಲೆ, ಸದಸ್ಯರಾದ ರವಿರಾಜ್ ರೈ ಸಜಂಕಾಡಿ, ದಯಾ ವಿ.ರೈ ಬೆಳ್ಳಿಪ್ಪಾಡಿ, ಶಶಿಧರ್ ರೈ ಕುತ್ಯಾಳ, ಶ್ರೀಧರ್ ಎನ್.ನೇರ್ಲಂಪಾಡಿ, ವಿಶ್ವನಾಥ ಪೂಜಾರಿ ಪಡುಮಲೆ, ಪ್ರೇಮಾ ಕುದ್ಕಾಡಿ, ಕೂವೆ ಶಾಸ್ತಾರ ವಿಷ್ಣುಮೂರ್ತಿ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಶ್ರೀನಿವಾಸ ಭಟ್ ಚಂದುಕೂಡ್ಲು, ವ್ಯವಸ್ಥಾಪನಾ ಸಮಿತಿಯ ಮಾಜಿ ಅಧ್ಯಕ್ಷ ಕೆ.ಪಿ.ಸಂಜೀವ ರೈ, ಗುತ್ತು-ಬಾರಿಕೆ ಪ್ರಮುಖರಾದ ಜಯಂತ ರೈ ಕುದ್ಕಾಡಿ, ಕೃಷ್ಣ ರೈ ಕುದ್ಕಾಡಿ, ಪುರಂದರ ರೈ ಕುದ್ಕಾಡಿ, ದೇವದಾಸ ರೈ ಅಣಿಲೆ, ಮೋಹನ್ ರೈ ಮೂನಡ್ಕ, ಸುರೇಶ್ ರೈ ಪಲ್ಲತಾರು, ರಮೇಶ್ ರೈ ಕೊಲ, ಸ್ಥಳೀಯ ಪ್ರಮುಖರಾದ ರಾಮಣ್ಣ ಗೌಡ ಕರ್ಪುಡಿಕಾನ, ಚಂದ್ರಶೇಖರ್ ಆಳ್ವ ಗಿರಿಮನೆ, ರಾಮಣ್ಣ ಗೌಡ ಬಸವಹಿತ್ಲು, ಜನಾರ್ದನ ಪೂಜಾರಿ ಪದಡ್ಕ, ಮಹಾಲಿಂಗ ಪಾಟಾಳಿ ಕುದ್ಕಾಡಿ ಭಾಗವಹಿಸಿದ್ದರು.