Published
2 months agoon
By
Akkare Newsಪುತ್ತೂರು : ಪುತ್ತೂರಿನ ಗೌರವಾನ್ವಿತ ಮಾನ್ಯ ಶಾಸಕರಾದ ಶ್ರೀ ಅಶೋಕ್ ಕುಮಾರ್ ರೈ ಕೆ.ಯಸ್ ರೈ ಎಸ್ಟೇಟ್ ಕೋಡಿಂಬಾಡಿ ಇವರ “ರೈ ಎಸ್ಟೇಟ್ ಎಜ್ಯುಕೇಶನಲ್ & ಚಾರಿಟೇಬಲ್ ಟ್ರಸ್ಟ್ (ರಿ) ಪುತ್ತೂರು” ಇದರ ವತಿಯಿಂದ ದಿನಾಂಕ 02-11-2024 ರಂದು ಪುತ್ತೂರು-ಕೊಂಬೆಟ್ಟು, ತಾಲೂಕು ಕ್ರಿಡಾಂಗಣದಲ್ಲಿ ದೀಪಾವಳಿಯ ಪ್ರಯುಕ್ತ ನಡೆಯಲಿರುವ ವಸ್ತ್ರ ವಿತರಣಾ ಮತ್ತು ಟ್ರಸ್ಟ್ ನ ಫಲಾನುಭವಿಗಳ ವಾರ್ಷಿಕ ಸಮಾವೇಶ,ಗೂಡು ದೀಪ ಸ್ಪರ್ಧೆ ನಡೆಯಲಿದೆ,
ಈ ಸ್ಪರ್ಧೆ ಯಲ್ಲಿ ಸುಮಾರು 300ಕ್ಕೂ ಹೆಚ್ಚು ಗೂಡು ದೀಪ ಗಳು ಭಾಗವಹಿಸುವ ನಿರೀಕ್ಷೆ ಇದೆ, ಕಳೆದ ಬಾರಿ 250 ಹೆಚ್ಚು ಸ್ಪರ್ಧಾಲುಗಳು ಭಾಗವಹಿಸಿದ್ದರು, ಪ್ರಥಮ 10000, ದ್ವಿತೀಯ 7500,ತ್ತೃತೀಯ 5000 ಬಹುಮಾನ ವಿದೆ.