Published
2 months agoon
By
Akkare Newsಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ನೇತೃತ್ವದ ರೈ ಎಸ್ಟೇಟ್ ಆ್ಯಂಡ್ ಎಜುಕೇಶನ್ರಿಚಾರಿಟೇಬಲ್ ಟ್ರಸ್ಟ್ ವತಿಯಿಂದ ದೀಪಾವಳಿಯ ಪ್ರಯುಕ್ತ ನ. 2 ರಂದು ಪುತ್ತೂರು ಹೊಂಬೆಟ್ಟು ತಾಲೂಕು ಕ್ರೀಡಾಂಗಣದಲ್ಲಿ ನಡೆಯಲಿರುವ ಅಶೋಕ ಜನಮನ ಕಾರ್ಯಕ್ರಮ ಯಶಸ್ವಿಗೊಳಿಸುವ ನಿಟ್ಟಿನಲ್ಲಿ ಮೊಟ್ಟೆತಡ್ಕ ಕಾಲೊನಿಯಲ್ಲಿ ಪೂರ್ವಭಾವಿ ಸಭೆಯು ನಡೆಯಿತು. ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದ ಬನ್ನೂರು ರೈತರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್ ರವರು ಮಾತನಾಡಿ ಅಶೋಕ್ ಕುಮಾರ್ ರೈ ರವರ ಹೃದಯಾಂತರಾಳದ ಈ ಕಾರ್ಯಕ್ರಮದಲ್ಲಿ ಎಲ್ಲರೂ ಪಾಲ್ಗೊಂಡು ಕಾರ್ಯಕ್ರಮಕ್ಕೆ ಇನ್ನಷ್ಟು ಶಕ್ತಿ ತುಂಬುವಂತಾಗಬೇಕು. ಎಲ್ಲರೂ ಒಟ್ಟಾಗಿ ಒದ್ಭುತ ದಿಂದ ದೀಪಾವಳಿ ಹಬ್ಬವನ್ನು ಆಚರಿಸುವಂತಾಗಬೇಕು ಎಂದು ಹೇಳಿದರು.
ಪುತ್ತೂರು ಭೂ ನ್ಯಾಯ ಮಂಡಳಿಯ ಸದಸ್ಯ ನಿರಂಜನ ರೈ ಮಠಂತಬೆಟ್ಟುರವರು ಮಾತನಾಡಿ ದೀಪಾವಳಿ ಅಶೋಕ್ ಕುಮಾರ್ ರೈ ರವರ ಪ್ರೀತಿಯ ಬೆಸುಗೆ, ಈ ಸಂದರ್ಭದಲ್ಲಿ ನಾವೆಲ್ಲರೂ ಒಂದೇ ಕುಟುಂಬದ ಸದಸ್ಯರಂತೆ ಒಟ್ಟಿಗೆ ಇದ್ದು ಸುಮಾರು 75 ಸಾವಿರ ಮಂದಿ ಒಟ್ಟಿಗೆ ಸೇರಿಕೊಂಡು ಪ್ರೀತಿ ವಿಶ್ವಾಸದಿಂದ ದೇಶದ ಏಕತೆ ಯನ್ನು ಆರಳಿಸೋಣ. ಇಂತಹ ಬೆಸುಗೆಯನ್ನು ಮುಂದಿನ ಜನಾಂಗಕ್ಕೂ ಪರಿಚಯಿಸುವಂತಾಗಬೇಕು ಎಂದು ಹೇಳಿದರು ವೇದಿಕೆಯಲ್ಲಿ ಸುರೇಶ್ ಪೂಜಾರಿ, ಶೀನಪ್ಪ ಉಪಸ್ಥಿತರಿದ್ದರು. ನಗರಸಭಾ ಸದಸ್ಯೆ ಶೈಲಾ ಹೈ ಸ್ವಾಗತಿಸಿ, ಉದ್ಯಮಿ ರಫೀಕ್ ವಂದಿಸಿದರು. ಸಭೆಯಲ್ಲಿ ನೂರಾರು ಸ್ಥಳೀಯರು ಪಾಲ್ಗೊಂಡಿದ್ದರು.