Published
2 months agoon
By
Akkare Newsಬಂಟ್ವಾಳ : ಮಕ್ಕಳ ಕಲಾಲೋಕ ಕನ್ನಡ ಸಾಹಿತ್ಯ ಪರಿಷತ್ತು ಬಂಟ್ವಾಳ ತಾಲೂಕು ನೇತೃತ್ವ ಮತ್ತು ದ.ಕ.ಜಿ.ಪಂ. ಹಿರಿಯ ಪ್ರಾಥಮಿಕ ಶಾಲೆ ಶಂಭೂರು ಇವರ ಆಶ್ರಯದಲ್ಲಿ ಜರಗಲಿರುವ ಮಕ್ಕಳ 18ನೇ ಸಾಹಿತ್ಯ ಸಮ್ಮೇಳನದ ಪೂರ್ವಭಾವಿ ಸಭೆಯು ಬಂಟ್ವಾಳ ತಾಲೂಕಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಶಂಭೂರು ಇಲ್ಲಿ ಬುಧವಾರ ಜರಗಿತು.
ನವಂಬರ್ ತಿಂಗಳ ಮಧ್ಯಭಾಗದಲ್ಲಿ ಸಮ್ಮೇಳನ ಜರಗಿಸಲು ಯೋಜಿಸಲಾಗಿದೆ ಎಂದು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಶಂಭೂರು ಶಾಲಾ ಎಸ್.ಡಿ, ಎಂ.ಸಿ ಅಧ್ಯಕ್ಷರಾದ ಹೇಮಚಂದ್ರ ಭಂಡಾರದ ಮನೆ ತಿಳಿಸಿದರು.
ಸಾಹಿತ್ಯ ಸಮ್ಮೇಳನದ ಸ್ವರೂಪ ಮತ್ತು ಕೈಗೊಳ್ಳಬೇಕಾದ ವ್ಯವಸ್ಥೆಗಳ ಸಂಪೂರ್ಣ ಮಾಹಿತಿಗಳನ್ನು ಮಕ್ಕಳ ಕಲಾ ಲೋಕದ ಅಧ್ಯಕ್ಷರಾದ ರಮೇಶ ಎಂ ಬಾಯಾರು ಸಭೆಗೆ ವಿವರಿಸಿ
ಸಮ್ಮೇಳನವನ್ನು ಯಶಸ್ವಿಗೊಳಿಸುವಲ್ಲಿ ಗ್ರಾಮಸ್ಥರ ಸಹಕಾರ, ಸ್ಥಳೀಯ ಗಣ್ಯರ ಸಂಘ ಸಂಸ್ಥೆಗಳ ತನು ಮನದ ನೆರವು ಮತ್ತು ತಾಲೂಕಿನ ವಿದ್ಯಾರ್ಥಿಗಳ ಮತ್ತು ಶಿಕ್ಷಕರ ಸಹಯೋಗ ಅತೀ ಅಗತ್ಯವೆಂದೂ ತಿಳಿಸಿದರು.
ಪೂರ್ವಭಾವಿ ಸಭಾ ವೇದಿಕೆಯಲ್ಲಿ ಶಂಭೂರು ಶಾಲಾ ಎಸ್.ಡಿ.ಎಂ.ಸಿ ಉಪಾಧ್ಯಕ್ಷೆ ವಿಮಲ, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ರಾಜೇಶ ಶಾಂತಿಲ. ಮಕ್ಕಳ ಕಲಾಲೋಕ ಕನ್ನಡ ಸಾಹಿತ್ಯ ಪರಿಷತ್ತು ಬಂಟ್ವಾಳ ತಾಲೂಕು ಮಾಧ್ಯಮ ಪ್ರಮುಖ್ ಚಿನ್ನಾ ಕಲ್ಲಡ್ಕ ಉಪಸ್ಥಿತರಿದ್ದು ಸಮ್ಮೇಳನವನ್ನು ಯಶಸ್ವಿಗೊಳಿಸಲು ಕ್ರಮಿಸಬೇಕಾದ ವಿಚಾರಗಳ ಬಗ್ಗೆ ಸಲಹೆ ನೀಡಿದರು.
ಹೆನ್ರಿ ಬುಕೆಲ್ಲೋ, ದಯಾನಂದ ಅಡೆಪ್ಪಿಲ, ಶಿವರಾಮ ಮಡಿಮುಗೇರು, ಮೋನಪ್ಪ ಮುಗೇರ ಪಡ್ಪು, ಹರೀಶ ಕೆಲೆಂಜಿಗುರಿ, ರಮೇಶ ಬರ್ಕೆ, ಜಗನ್ನಾಥ ಸಣ್ಣ ಕುಕ್ಕು, ನಾಗರಾಜ ಅಡೆಪ್ಪಿಲ ಮೊದಲಾದವರು ಸಮ್ಮೇಳನದ ಪೂರ್ವ ಸಿದ್ಧತೆಗಳ ಬಗ್ಗೆ ಸೂಚನೆಗಳನ್ನು ನೀಡಿದರು.
ಶಂಭೂರು ಶಾಲಾ ಮುಖ್ಯೋಪಾಧ್ಯಾಯ ಜಯರಾಮ ಡಿ ಪಡ್ರೆ ಸ್ವಾಗತಿಸಿ ವಂದಿಸಿದರು.