Published
2 months agoon
By
Akkare Newsಪುತ್ತೂರು ತೀಯಾ ಸಮಾಜ ಸೇವಾ ಸಮಿತಿ (ರಿ.) 2023-2024ನೇ ಸಾಲಿನ ವಾರ್ಷಿಕ ಮಹಾಸಭೆ ಹಾಗೂ ಶ್ರೀ ದುರ್ಗಾ ಪೂಜೆ ಕಾರ್ಯಕ್ರಮ ಪುತ್ತೂರು ಮಹಾದೇವಿ ಸಂಕೀರ್ಣ ಏಳ್ಮುಡಿಯಲ್ಲಿ ನಡೆಯಿತು.
ಬೆಳಿಗ್ಗೆ ಶ್ರೀ ದುರ್ಗಾ ಪೂಜೆ ನಡೆದು ಬಳಿಕ ಸಭಾ ಕಾರ್ಯಕ್ರಮ ನಡೆಯಿತು.
ಪುತ್ತೂರು ತೀಯಾ ಸಮಾಜ ಸೇವಾ ಸಮಿತಿ (ರಿ.) ನೂತನ ಸಮಿತಿಯ ಪದಾಧಿಕಾರಿಗಳ ನೇಮಕ ಮಾಡಲಾಯಿತು. ನೂತನ ಅಧ್ಯಕ್ಷರಾಗಿ ಜೆ.ಪಿ ಸಂತೋಷ್ ಕುಮಾರ್- (ಮುರ), ಉಪಾಧ್ಯಕ್ಷರುಗಳಾಗಿ ಯು. ಪಿ ರಾಜೇಶ್, ಪುರುಷೋತ್ತಮ ಕೇಪುಳು, ಶಶಿಧರ್ ಬೆಳ್ಳಾರೆ, ರಾಜೇಶ್ (ಭೂಮಿ ), ವಿಜಯಕುಮಾರ್, ಸತೀಶ್ ಕೆಎಸ್ಆರ್‌ಟಿಸಿ, ಪುರುಷೋತ್ತಮ ಕೊಯ್ಲಾ, ಗೌರವ ಸಲಹೆಗಾರರಾಗಿ ಪಿ.ಕೆ. ನಾರಾಯಣ ಸಾಲ್ಮರ, ಗೌರವ ಅಧ್ಯಕ್ಷರಾಗಿ ಗೋಪಾಲಕೃಷ್ಣ, ಪ್ರಧಾನ ಕಾರ್ಯದರ್ಶಿಯಾಗಿ ಸಂತೋಷ್ ಮುಕ್ರಂಪಾಡಿ , ಜೊತೆ ಕಾರ್ಯದರ್ಶಿಯಾಗಿ ದೀಪಕ್, ಸಂಘಟನಾ ಕಾರ್ಯದರ್ಶಿಗಳಾಗಿ ಟಿ ರಾಜೀವ, ರವೀಂದ್ರ, ರಾಘವ, ದಯಾನಂದ ಮುರ, ಆಶ್ಲೇಶ್, ಹಾಗೂ ಕೋಶಾಧಿಕಾರಿಯಾಗಿ ಬಿ.ಎಂ. ಶ್ರೀಧರ್ ನೇಮಕಗೊಂಡರು.
ಮಹಿಳಾ ಘಟಕದ ಪದಾಧಿಕಾರಿಗಳ ನೇಮಕ ಮಾಡಲಾಯಿತು. ನೂತನ ಅಧ್ಯಕ್ಷರಾಗಿ ವಿ ಪ್ರಭಾವತಿ, ಉಪಾಧ್ಯಕ್ಷರುಗಳಾಗಿ ಶಶಿಕಲಾ ತೆಂಕಿಲ, ವತ್ಸಲಾ ಶ್ರೀಧರ್, ಅನಿತಾ ಪುರುಷೋತ್ತಮ, ಗೌರವ ಸಲಹೆಗಾರರಾಗಿ ಸಂಧ್ಯಾ ರಾಜೇಶ್ (ಹಿಮ), ಕಾರ್ಯದರ್ಶಿಯಾಗಿ ಅಶ್ವಿನಿ ರಾಜೇಶ್, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಸುಶ್ಮಿತಾ, ಮಲ್ಲಿಕಾ ಗೋಪಾಲ್, ಸುವರ್ಣ ಚಂದ್ರಿಕಾ ಇವರನ್ನು ಆಯ್ಕೆ ಮಾಡಲಾಯಿತು.
ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನಡೆಯಿತು.