ನಮ್ಮೊಂದಿಗೆ ಸಂಪರ್ಕ ಸಾಧಿಸಿ

ಇಂದಿನ ಕಾರ್ಯಕ್ರಮ

ಬೆಂಗಳೂರಿನಲ್ಲಿ ಪ್ರಥಮ ಬಾರಿಗೆ ಸೀನಿಯರ್ ’ಕುಸ್ತಿ’ ರಾಷ್ಟ್ರೀಯ ಚಾಂಪಿಯನ್ ಶಿಪ್

Published

on

ಕರ್ನಾಟಕ ಕುಸ್ತಿ ಸಂಘದ ಅಧ್ಯಕ್ಷ ಬಿ. ಗುಣರಂಜನ್ ಶೆಟ್ಟಿಯವರಿಂದ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ವಿಶೇಷ ಪ್ರಾರ್ಥನೆ

ಬೆಂಗಳೂರಿನಲ್ಲಿ ಪ್ರಥಮ ಬಾರಿಗೆ ೨೦೨೪ ರ ಸೀನಿಯರ್ ’ಕುಸ್ತಿ’ ರಾಷ್ಟ್ರೀಯ ಚಾಂಪಿಯನ್‌ಶಿಪ್ ಡಿಸೆಂಬರ್ ೫ ರಿಂದ ೮ ರವರೆಗೆ ಕೋರಮಂಗಲ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯಲಿದೆ.

ಈ ಕುಸ್ತಿ ಪಂದ್ಯಾಟವನ್ನು ರಾಜ್ಯದಲ್ಲಿ ಪ್ರಥಮವಾಗಿ ಆಯೋಜನೆ ಮಾಡಲು ಅವಕಾಶ ಕಲ್ಪಿಸಿಕೊಟ್ಟ ಹಿನ್ನೆಲೆ ಮತ್ತು ಮುಂದೆ ನಡೆಯುವ ತಯಾರಿಗೆ ಸಂಬಂಧಿಸಿ ಕರ್ನಾಟಕ ಕುಸ್ತಿ ಸಂಘದ ಅಧ್ಯಕ್ಷರು ಮತ್ತು ಭಾರತೀಯ ಕುಸ್ತಿ ಒಕ್ಕೂಟದ ಜಂಟಿ ಕಾರ್ಯದರ್ಶಿಯಾಗಿರುವ ಮತ್ತು ಇಂಡಿಯನ್ ಬೀಚ್ ಕುಸ್ತಿ ಫೆಡರೇಶನ್ ಅಧ್ಯಕ್ಷರಾದ ಪುತ್ತೂರಿನ ಬೆಳ್ಳಿಪ್ಪಾಡಿ ಗುಣರಂಜನ್ ಶೆಟ್ಟಿಯವರು ಇತಿಹಾಸ ಪ್ರಸಿದ್ದ ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.

 

ಈ ಸಂದರ್ಭದಲ್ಲಿ ಸ್ಪರ್ಧಾ ಪಟ್ಟಿಯನ್ನು ಶ್ರೀ ದೇವರ ಸತ್ಯ ಧರ್ಮ ನಡೆಯಲ್ಲಿಟ್ಟು ಪ್ರಾರ್ಥನೆ ಮಾಡಲಾಯಿತು.

ಶ್ರೀ ದೇವರ ಸತ್ಯಧರ್ಮ ನಡೆಯಲ್ಲಿ ಇರಿಸಿ ಪ್ರಾರ್ಥನೆ ಬಳಿ ಬಳಿಕ ಮಾದ್ಯಮದ ಮುಂದೆ ಬಿಡುಗಡೆಗೊಳಿಸಿದರು. ದೇವಳದ ಪ್ರಧಾನ ಅರ್ಚಕ ವೇ ಮೂ ವಿ.ಎಸ್ ಭಟ್ ಪ್ರಾರ್ಥನೆ ಸಲ್ಲಿಸಿದರು.

 

ಕರ್ನಾಟಕ ಕುಸ್ತಿ ಸಂಘದ ಅಧ್ಯಕ್ಷರು ಮತ್ತು ಭಾರತೀಯ ಕುಸ್ತಿ ಒಕ್ಕೂಟದ ಜಂಟಿ ಕಾರ್ಯದರ್ಶಿಯಾಗಿರುವ ಪುತ್ತೂರಿನ ಬಿ ಗುಣರಂಜನ್ ಶೆಟ್ಟಿ ಮಾತನಾಡಿ ‘ಕರ್ನಾಟಕದಲ್ಲಿ ಸೀನಿಯರ್ ಕುಸ್ತಿ ಚಾಂಪಿಯನ್‌ಶಿಫ್ ಮಾಡಲು ಅವಕಾಶ ಕಲ್ಪಿಸಿಕೊಟ್ಟ ಹಿನ್ನೆಲೆ ಮತ್ತು ಮುಂದೆ ನಡೆಯುವ ತಯಾರಿಗೆ ಸಂಬಂಧಿಸಿ ಮಹಾಲಿಂಗೇಶ್ವರ ದೇವರ ಸಂಪೂರ್ಣ ಅಶೀರ್ವಾದ ಬೇಡಲು ಬಂದಿದ್ದೇನೆ. ಈ ಪ್ರಮುಖವಾದ ಸ್ಪರ್ಧೆಯಲ್ಲಿ ಗೆಲುವು ಸಾಧಿಸಿದವರು ಮುಂದೆ ವಿಶ್ವಚಾಂಪಿಯನ್ ಶಿಪ್‌ನಲ್ಲಿ ಸ್ಪರ್ಧಿಸುವ ಅವಕಾಶ ಕಲ್ಪಿಸಲಾಗುತ್ತದೆ. ಕರ್ನಾಟಕದಲ್ಲಿ ಈ ಪಂದ್ಯಾಟವನ್ನು ಆಯೋಜನೆ ಮಾಡುವುದರಿಂದ ದಕ್ಷಿಣ ಭಾರತದ ಎಲ್ಲಾ ಕ್ರೀಡಾಪಟುಗಳಿಗೆ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮನ್ನಣೆ ಸಿಗುತ್ತದೆ. ಕರ್ನಾಟಕದಲ್ಲಿರುವ ಎಲ್ಲಾ ಕುಸ್ತಿ ಪಟಗಳು, ಗರಡಿ ಮನೆಗಳು ಸಹಿತ ಎಲ್ಲರು ಭಾಗವಹಿಸುವಂತೆ ಗುಣರಂಜನ್ ಶೆಟ್ಟಿ ಮನವಿ ಮಾಡಿದರು. ಇದೇ ಸಂದರ್ಭ ಬೆಂಗಳೂರಿನಲ್ಲಿ ಕಂಬಳಕ್ಕೆ ಪೇಟಾದಿಂದ ಆಗಿರುವ ತೊಂದರೆಗೆ ಸಂಬಂಧಿಸಿ ಯಾವುದೇ ಸಮಸ್ಯೆ ಆಗುವುದಿಲ್ಲ. ನ್ಯಾಯಾಲಯದಿಂದ ಉತ್ತಮ ತೀರ್ಪು ಬರಲಿದೆ. ಬೆಂಗಳೂರಿನಲ್ಲಿ ಕಂಬಳ ನಡೆಯುತ್ತದೆ ಎಂದರು.

 

ಈ ಸಂದರ್ಭದಲ್ಲಿ ಸಂದರ್ಭ ದಕ್ಷಿಣ ಕನ್ನಡ ಜಿಲ್ಲಾ ಕುಸ್ತಿ ಸಂಘದ ಉಸ್ತುವಾರಿಗಳಾದ ಸುಜಿತ್ ರೈ, ಕರ್ನಾಟಕ ರಾಜ್ಯ ಕುಸ್ತಿ ಸಂಘದ ಕಾರ್ಯಕಾರಿಣಿ ಸಮಿತಿ ಸದಸ್ಯ ರಾಮದಾಸ್ ಶೆಟ್ಟಿ, ಜಯಕರ್ನಾಟಕ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಕಾರ್ತಿಕ್ ರೈ, ಸಿಝ್ಲರ್ ಪ್ರಸನ್ನ ಕುಮಾರ್ ರೈ, ಯು.ಆರ್ ಪಾರ್ಪಟೀಸ್‌ನ ಮಾಲಕ ಉಜ್ವಲ್ ಪ್ರಭು, ತಿಲಕ್‌ರಾಜ್ ಶೆಟ್ಟಿ ಸಹಿತ ಹಲವಾರು ಮಂದಿ ಉಪಸ್ಥಿರಿದ್ದರು.

 

 

 

 

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version