Published
2 months agoon
By
Akkare Newsಪುತ್ತೂರು: ನ2 ರಂದು ಪುತ್ತೂರಿನ ಕೊಂಬೆಟ್ಟು ತಾಲೂಕು ಕ್ರೀಡಾಂಗಣದಲ್ಲಿ ನಡೆಯಲಿರುವ ಪುತ್ತೂರು ಶಾಸಕ ಅಶೋಕ್ ರೈ ಅವರ ದೀಪಾವಳಿ ಕಾರ್ಯಕ್ರಮ ಅಶೋಕ ಜನಮನ ಈ ಬಾರಿ ರಾಷ್ಡ್ರಮಟ್ಟದಲ್ಲಿ ಸುದ್ದಿಯಾಗಲಿದೆ ಇದಕ್ಕೆ ಕಾರಣ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಭಾಗವಹಿಸುತ್ತಿರುವುದು.
ಕಳೆದ ವರ್ಷ ಬೆಂಗಳೂರು ಕಂಬಳಕ್ಕೆ ಆಗಮಿಸಿ ಶಾಸಕ ಅಶೋಕ್ ರೈ ಅವರ ಹವಾ ಕಂಡು ಮೂಕವಿಸ್ಮತರಾಗಿದ್ದ ಸಿದ್ದರಾಮಯ್ಯ ಅವರು ಈ ಬಾರಿಯ ಜನಮನ ಕಾರ್ಯಕ್ರಮಕ್ಕೆ ಆಗಮಿಸಿ ಮತ್ತೊಮ್ಮೆ ಪುತ್ತೂರು ಶಾಸಕರ ಹವಾ ಕಣ್ಣಾರೆ ಕಾಣಲಿದ್ದಾರೆ.ಡಿಕೆಶಿಮತ್ತು ಸಿದ್ದು ಅವರ ಆಗಮನದ ನಿರೀಕ್ಷೆಯಲ್ಲಿದ್ದ ಶಾಸಕರಿಗೆ ಭಾನುವಾರ ಖಚಿತತೆಯನ್ನು ಪಡೆದುಕೊಂಡಿದ್ದಾರೆ.ದೀಪಾವಳಿ ಕಾರ್ಯಕ್ರಮಕ್ಕೆ ಸಿದ್ದು,ಡಿಕೆಶಿಆಗಮನ ಪುತ್ತೂರಿನ ಜನಮನಕ್ಕೆ ಹೊಸ ಮೆರುಗನ್ನು ನೀಡಲಿರುವುದು ಸ್ಪಷ್ಟ.