ನಮ್ಮೊಂದಿಗೆ ಸಂಪರ್ಕ ಸಾಧಿಸಿ

ಇಂದಿನ ಕಾರ್ಯಕ್ರಮ

ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ಕಬಕ ಬ್ಲಾಕ್ ಸಮಿತಿ ವತಿಯಿಂದ ಮರ್ಹೂಮ್ ಹಸೈನಾರ್ ಹಾಜಿ ಸ್ಮರಣಾರ್ಥ ರಕ್ತದಾನ ಕಾರ್ಯಕ್ರಮ :

Published

on

ಪುತ್ತೂರು :ಇತ್ತೀಚೆಗೆ ಅಗಲಿದ ಸಾಮಾಜಿಕ ಕಳಕಳಿಯ ನಾಯಕ ಮಾರ್ಹೂಂ ಹಸೈನಾರ್ ಹಾಜಿ ಮಿತ್ತೂರು ಇವರ ಸ್ಮರಣಾರ್ಥವಾಗಿ ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ಕಬಕ ಬ್ಲಾಕ್ ಸಮಿತಿ ಹಾಗೂ ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ ಇದರ ಆಶ್ರಯದಲ್ಲಿ ತೇಜಸ್ವಿನಿ ಆಸ್ಪತ್ರೆ ಲಯನ್ಸ್ ರಕ್ತ ನಿಧಿ ಇದರ ಸಹಯೋಗದೊಂದಿಗೆ ಸಾರ್ವಜನಿಕ ರಕ್ತದಾನ ಕಾರ್ಯಕ್ರಮವು ಮಿತ್ತೂರು ಜಂಕ್ಷನ್ ನಲ್ಲಿ ನಡೆಸಲಾಯಿತು.

 

ಕಾರ್ಯಕ್ರಮದ ಅಧ್ಯಕ್ಷತೆಯನ್ನು SDPI ಬ್ಲಾಕ್ ಅಧ್ಯಕ್ಷರಾದ ಸಿದ್ದೀಕ್ ಉರಿಮಜಲು ವಹಿಸಿದ್ದರು, ಕಾರ್ಯಕ್ರಮದ ದುವಾ ಆಶಿರ್ವಚನವನ್ನು ಸಯ್ಯದ್ ಹಂಝಾ ತಂಗಳ್ ಪಾಟ್ರಕೋಡಿ ನೆರವೇರಿಸಿದರು.

 

ಕಾರ್ಯಕ್ರಮದ ಉದ್ಘಾಟನೆಯನ್ನು ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ದಕ್ಷಿಣ ಕನ್ನಡ ಜಿಲ್ಲಾ ಅಧ್ಯಕ್ಷರಾದ ಅನ್ವರ್ ಸಾದತ್ ಬಜತ್ತೂರು ನಿರ್ವಹಿಸಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಮಿತ್ತೂರು ಸಿರಾಜುಲ್ ಹುದಾ ಜುಮಾ ಮಸೀದಿಯ ಗೌರವಾಧ್ಯಕ್ಷರಾದ ಖಾಸಿಂ ಹಾಜಿ ಮಿತ್ತೂರು ಮಾತಾಡಿ ಸಮಾಜಮುಖಿ ಕಾರ್ಯಕ್ರಮಗಳನ್ನು ಮಾಡುವ ಯಾವುದೇ ಪಕ್ಷ ಸಂಘಟನೆ ಗಳಿರಲಿ ಅವುಗಳಿಗೆ ಸಹಕರಿಸುವುದು ನಮ್ಮೆಲ್ಲರ ಸಾಮಾಜಿಕ ಜವಾಬ್ದಾರಿ ಆಗಿದೆ ಎಂದು ಸಂದರ್ಬೋಚಿತವಾಗಿ ಮಾತಾಡಿದರು..

 

 

ಕಾರ್ಯಕ್ರಮದ ಮುಖ್ಯ ಅಥಿತಿಗಳಾಗಿ ಆಗಮಿಸಿದ ಪಕ್ಷದ ಜಿಲ್ಲಾ ಸಮಿತಿ ಕಾರ್ಯದರ್ಶಿ ಶಾಕಿರ್ ಅಳಕೆ ಮಜಲು, ಜಿಲ್ಲಾ ಸಮಿತಿ ಸದಸ್ಯರಾದ ಹಾಜಿ ಇಬ್ರಾಹಿಂ ಸಾಗರ್, SDPI ಪುತ್ತೂರು ವಿಧಾನ ಸಭಾ ಕ್ಷೇತ್ರ ಸಮಿತಿ ಅಧ್ಯಕ್ಷರಾದ ಅಬೂಬಕ್ಕರ್ ಸಿದ್ದೀಕ್ ಕೆ ಮಾತಾಡಿ ಶುಭಹಾರೈಸಿದರು .
ವೇದಿಕೆಯಲ್ಲಿ ಕ್ಷೇತ್ರ ಸಮಿತಿ ಕಾರ್ಯದರ್ಶಿ ಉಸ್ಮಾನ್ ಎ.ಕೆ, ಜೊತೆ ಕಾರ್ಯದರ್ಶಿ ರಹೀಂ ಪುತ್ತೂರು, ಸಿರಾಜುಲ್ ಹುದಾ ಯಂಗ್ ಮೆನ್ಸ್ ಅಧ್ಯಕ್ಷರಾದ ಶರೀಫ್ ಕಂದಕ್, SDPI ಕೋಳ್ನಾಡು ಬ್ಲಾಕ್ ಅಧ್ಯಕ್ಷರಾದ ಖಲಂದರ್ ಪರ್ತಿಪ್ಪಾಡಿ, SDPI ಮಿತ್ತೂರು ಬ್ರಾಂಚ್ ಅಧ್ಯಕ್ಷರಾದ ಹಾಜಿ ರಝಾಕ್ ಕೆದುವಡ್ಕ, ಬ್ರಾಂಚ್ ಕಾರ್ಯದರ್ಶಿ ಸಲೀಂ ಮನಿಯಾರ್ ಉಪಸ್ಥಿತರಿದ್ದರು.

 

ಕಾರ್ಯಕ್ರಮದ ಸ್ವಾಗತವನ್ನು ಕಬಕ ಬ್ಲಾಕ್ ಕಾರ್ಯದರ್ಶಿ ಸದ್ದಾಂ ಮುರ ಮತ್ತು ನಿರೂಪಣೆ ಹಾಗೂ ಧನ್ಯವಾದವನ್ನು ಸಿದ್ದೀಕ್ ಬೀಟಿಗೆ ನೆರವೇರಿಸಿದರು. ಕಾರ್ಯಕ್ರಮದಲ್ಲಿ ಹಲವಾರು ರಕ್ತದಾನಿಗಳು ರಕ್ತದಾನ ಮಾಡಿದರು.

 

 

 

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version