Published
2 days agoon
By
Akkare Newsವಿಟ್ಲ ಶ್ರೀ ಪಂಚಲಿಂಗೇಶ್ವರ ದೇವರ ಕಾಲಾವಧಿ ಜಾತ್ರೆಯ ಅಂಗವಾಗಿ ಶ್ರೀ ದೇವರ ಬಯ್ಯದ ಬಲಿ ಉತ್ಸವದಂದು ದಿನಾಂಕ – 18-01-2025 ನೇ ಶನಿವಾರದಂದು ಸಮರ್ಪಣ್ ವಿಟ್ಲ ಇವರ ವತಿಯಿಂದ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಸಮರ್ಪಣ್ ಕಲೋತ್ಸವ -2025 ಅಂಗವಾಗಿ ಬೆನಕ ಆರ್ಟ್ಸ್ ಮಂಗಳೂರು ಇವರಿಂದ ಪೊರಿಪುದಪ್ಪೆ ಜಲದುರ್ಗೆ ಎಂಬ ತುಳು ಸಿನಿ ನಾಟಕ ವಿಶೇಷ ದೃಶ್ಯ ಸಂಯೋಜನೆಯೊಂದಿಗೆ ನಡೆಯಲಿದೆ ಅಲ್ಲದೆ ಸಾಧಕರಿಗೆ ಗೌರವಾರ್ಪಣೆ, ಸಮರ್ಪಣ್ ಸೇವಾ ಪ್ರಕಲ್ಪದಲ್ಲಿ ನಿರ್ಮಿಸಿದ ಮನೆ ಹಸ್ತಾಂತರ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ವಿಟ್ಲ ಗ್ರಾಮೀಣ ಸಹಕಾರಿ ಬ್ಯಾಂಕ್ ನ ಅಧ್ಯಕ್ಷರಾದ ಶ್ರೀ ಜಗನ್ನಾಥ ಸಾಲ್ಯಾನ್ ರವರು ಬಿಡುಗಡೆ ಮಾಡಿದರು.
ಸಮರ್ಪಣ್ ಸೇವಾ ಪ್ರಕಲ್ಪದಲ್ಲಿ ವಿಟ್ಲ ಕಸಬಾ ಗ್ರಾಮದ ಇರಂದೂರು ನಲ್ಲಿ ಬಡ ಕುಟುಂಬಕ್ಕೆ ಸಮರ್ಪಣ್ ಸೇವಾ ಪ್ರಕಲ್ಪದಲ್ಲಿ ನಿರ್ಮಿಸಿದ ಮನೆ ಹಸ್ತಾಂತರ ಈ ಸಂದರ್ಭ ನಡೆಯಲಿದೆ.
ಈ ಸಂದರ್ಭ ಸಮರ್ಪಣ್ ವಿಟ್ಲ ದ ಅಧ್ಯಕ್ಷರಾದ ಯಶವಂತ . ಎನ್ ,ಗೌರವಾಧ್ಯಕ್ಷರಾದ ಕೃಷ್ಣಯ್ಯ ಕೆ ವಿಟ್ಲ ಅರಮನೆ , ಉಪಾಧ್ಯಕ್ಷ ರಾದ ಯಾದವ ಮಡಿವಾಳಕೋಡಿ , ಸೂರಜ್ ಕೋಟ್ಯಾನ್ , ರವಿವರ್ಮ ವಿಟ್ಲ ಅರಮನೆ,ಕಾರ್ಯದರ್ಶಿಗಳಾದ ರೋಹಿತ್ ಕಟ್ಟೆ ,ಜತೆ ಕಾರ್ಯದರ್ಶಿ ಪ್ರಕಾಶ್ ಮಾಸ್ತರ್ , ಕೋಶಾಧಿಕಾರಿ ನಿಖಿಲ್ ಸಾಲ್ಯಾನ್ , ಗೌರವ ಸಲಹೆಗಾರರಾದ ವಿಶ್ವನಾಥ ನಾಯ್ತೋಟ್ಟು , ಸಂಘಟನಾ ಕಾರ್ಯದರ್ಶಿ ರವಿಶಂಕರ್ ,ಸಂಚಾಲಕರಾದ ಹರೀಶ್ ಕೆ ವಿಟ್ಲ, ಸದಸ್ಯರುಗಳಾದ ದೀಪಕ್ ಕಟ್ಟೆ , ಪವನ್ ಕಟ್ಟೆ, ಧನಂಜಯ ನಾಯ್ಕ್ ,ಪೂಜಿತ್ ಸಾಲ್ಯಾನ್ , ಧನಂಜಯ ನೆಕ್ಕರೆ ಕಾಡು , ಪವನ್ ಶಿವಾಜಿನಗರ , ಪ್ರಮುಖರಾದ ಜಯರಾಮ ಬಲ್ಲಾಳ್ , ಸಂಜೀವ ಮಂಕುಡೆ ,ರವಿ ಕಟ್ಟೆ , ಯೋಗಿಶ್ ದೇವಸ್ಯ , ಪ್ರಕಾಶ್, ಭಾರತಿ ಪ್ರಕಾಶ್ , ಸುನಿಲ್ ಮುಂತಾದವರು ಉಪಸ್ಥಿತರಿದ್ದರು.