ನಮ್ಮೊಂದಿಗೆ ಸಂಪರ್ಕ ಸಾಧಿಸಿ

ಇಂದಿನ ಕಾರ್ಯಕ್ರಮ

ಆಟೋ ಚಾಲಕರು ಕಾರ್ಮಿಕ ಇಲಾಖೆ ವ್ಯಾಪ್ತಿಗೆ ಕಾಂಗ್ರೆಸ್ಬಸರಕಾರದ ಮಹತ್ತರ ಆದೇಶ: ಶಾಸಕ ಅಶೋಕ್ ರೈ

Published

on

ಪುತ್ತೂರು: ಆಟೋ ಚಾಲಕರ ಬಹು ಕಾಲದ ಬೇಡಿಕೆಯನ್ನು ಕರ್ನಾಟಕದ ಕಾಂಗ್ರೆಸ್ ಸರಕಾರ ಈಡೇರಿಸಿದ್ದು ಶೀಘ್ರವೇ ಆಟೋ ಚಾಲಕರು ಕಾರ್ಮಿಕ ಇಲಾಖೆ ವ್ಯಾಪ್ತಿಗೆ ಸೇರ್ಪಡೆಯಾಗಲಿದೆ ಎಂದು ಶಾಸಕ ಅಶೋಕ್ ರೈ ಹೇಳಿದರು.

 

ಅವರು ಉಪ್ಪಿನಂಗಡಿ ನೇತ್ರಾವತಿ ಆಟೋ ಚಾಲಕರ ಸಂಘದ ಸಮಾವೇಶದಲ್ಲಿ ಮಾತನಾಡಿದರು.
ಬಡ ಆಟೋ ಚಾಲಕರು ನಿತ್ಯವೂ ತಮ್ಮ ಕುಟುಂಬವನ್ನು ಸಲಹುವ ಉದ್ದೇಶದಿಂದ ಹಗಲಿರುಳು ಕೆಲಸ ಮಾಡುತ್ತಿದ್ದಾರೆ . ಆಟೋ ಚಾಲಕರು ಸಮಾಜದ ಮುಖ್ಯ ವಾಹಿನಿಯಲ್ಲಿ ಗುರುತಿಸಿಕೊಂಡವರು ಅವರಿಗೆ ಸರಕಾರದಿಂದ ಸಿಗುವ ಸವಲತ್ತುಗಳು ದೊರೆಯಬೇಕು ಎಂದು ನಾನು ವಿಧಾನಸಭಾ ಅಧಿವೇಶನದಲ್ಲಿ ಚರ್ಚೆ ಮಾಡಿದ್ದೆ, ಇದರ ಫಲವಾಗಿ ಸರಕಾರ ದಿಟ್ಟ ನಿರ್ಧಾರವನ್ನು ಕೈಗೊಂಡಿದೆ ಎಂದು ಹೇಳಿದರು.

 

ಏನೇನು ಸೌಲಭ್ಯಗಳು:
ಆಟೋ ಚಾಲಕರು ಕಾರ್ಮಿಕ ಇಲಾಖೆ ವ್ಯಾಪ್ತಿಗೆ ಸೇರ್ಪಡೆಯಾದಲ್ಲಿ ಈ ಸೌಲಭ್ಯಗಳು ದೊರೆಯುತ್ತದೆ.

ಚಾಲಕರು ಅಪಘಾತದಿಂದ ಮೃತಪಟ್ಟಲ್ಲಿ 5 ಲಕ್ಷ ಪರಿಹಾರ

ಸಾಮಾನ್ಯ ಸಾವು ಸಂಭವಿಸಿದ್ದಲ್ಲಿ 10 ಸಾವಿರ ಪರಿಹಾರ

ಚಿಕಿತ್ಸಾ ಸೌಲಭ್ಯ 1 ಲಕ್ಷ

ಮಕ್ಕಳ ವಿದ್ಯಾಬ್ಯಾಸಕ್ಕೆ 3000

ಉನ್ನತ ಶಿಕ್ಷಣಕ್ಕೆ 11000

ಪತ್ನಿ ಹೆರಿಗೆ ಭತ್ಯೆ 10000

 

ಪತ್ನಿ ಅಕಸ್ಮಿಕ ಅಥವಾ ಅಪಘಾತದಿಂದ ಮರಣಹೊಂದಿದರೆ 5 ಲಕ್ಷ
ಹಾಗೂ ಮಕ್ಕಳ ಮದುವೆಗೆ ಆರ್ಥಿಕ ನೆರವು ನೀಡಲಾಗುತ್ತದೆ.

ಶಾಸಕರ ಕಚೇರಿಯಲ್ಲಿ ಉಚಿತ ನೋಂದಣಿ
ಆಟೋ ಚಾಲಕ ಈ ಸೌಲಭ್ಯವನ್ನು ಪಡೆಯಲು ಶಾಸಕರ ಕಚೇರಿಯಲ್ಲಿ ಉಚಿತ ನೋಂದಣಿ ವ್ಯವಸ್ಥೆಯನ್ನು ಮಾಡಲಾಗುವುದು ಎಂದು ಶಾಸಕರು ಹೇಳಿದರು.

 

 

 

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version