Connect with us

ಇತರ

ಸರ್ವಾಧಿಕಾರಿ ಆಡಳಿತ ಸಂವಿಧಾನದ ತತ್ವ, ಸಿದ್ದಾಂತಗಳನ್ನು ಹಾಳುಗೆಡವಿದೆ : ಮಲ್ಲಿಕಾರ್ಜುನ ಖರ್ಗೆ

Published

on

ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಭಾನುವಾರ (ಜನವರಿ 26, 2025) ತೀವ್ರ ವಾಗ್ದಾಳಿ ನಡೆಸಿದ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, “ಧಾರ್ಮಿಕ ಮೂಲಭೂತವಾದದಲ್ಲಿ ಮುಳುಗಿರುವ ದ್ವೇಷಪೂರಿತ ಕಾರ್ಯಸೂಚಿಯು, ಕಳೆದ 10 ವರ್ಷಗಳಿಂದ ಸಮಾಜವನ್ನು ವಿಭಜಿಸಲು ಪ್ರಯತ್ನಿಸುತ್ತಿದೆ. ಸಂವಿಧಾನದ ಪ್ರತಿಯೊಂದು ಪವಿತ್ರ ತತ್ವಗಳನ್ನು ‘ಸರ್ವಾಧಿಕಾರಿ ಆಡಳಿತ’ ಚೂರು, ಚೂರು ಮಾಡಿದೆ ಎಂದಿದ್ದಾರೆ.

 

ಆಡಳಿತಾರೂಢ ಬಿಜೆಪಿ ಹಿಂದುಳಿದ ಯುವಕರನ್ನು ‘ರಾಷ್ಟ್ರೀಯತೆ’ ಮತ್ತು ‘ಧಾರ್ಮಿಕ ಪಾರಮ್ಯ’ದ ಧ್ವಜವನ್ನು ಹಿಡಿಯುವಂತೆ ಮಾಡುವ ಮೂಲಕ ಹುಸಿ-ರಾಷ್ಟ್ರೀಯತೆಯನ್ನು ಅಭ್ಯಾಸವನ್ನು ಮಾಡಿಸುತ್ತಿದೆ. ಅವರಿಗೆ ಉದ್ಯೋಗ ದೊರಕಿಸಿಕೊಡಲು ಏನನ್ನೂ ಮಾಡುತ್ತಿಲ್ಲ ಎಂದು ಅವರು ಎಕ್ಸ್ ಪೋಸ್ಟ್‌ನಲ್ಲಿ ಖರ್ಗೆ ಕಿಡಿಕಾರಿದ್ದಾರೆ.

76ನೇ ಗಣರಾಜ್ಯೋತ್ಸವದ ಪ್ರಯುಕ್ತ ದೇಶದ ಜನರಿಗೆ ಶುಭಾಷಯ ತಿಳಿಸಿರುವ ಮಲ್ಲಿಕಾರ್ಜುನ ಖರ್ಗೆ, ಸಂವಿಧಾನದ ವಿಚಾರಗಳು ಮತ್ತು ಆದರ್ಶಗಳಾದ ನ್ಯಾಯ, ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವವನ್ನು ಜನರು ಸಂರಕ್ಷಿಸುವ ಮತ್ತು ರಕ್ಷಿಸುವ ಸಮಯ ಬಂದಿದೆ ಎಂದಿದ್ದಾರೆ.

“ನಮ್ಮ ಸಂಸ್ಥಾಪಕರು ಪ್ರತಿಪಾದಿಸಿದ ಮೌಲ್ಯಗಳನ್ನು ನಾವು ಎತ್ತಿಹಿಡಿಯುತ್ತೇವೆ. ಸಂವಿಧಾನವನ್ನು ರಕ್ಷಿಸಲು ಯಾವುದೇ ತ್ಯಾಗಕ್ಕೂ ಸಿದ್ಧರಾಗಿರಿ. ಇದು ನಮ್ಮ ಪೂರ್ವಜರಿಗೆ ಸಲ್ಲಿಸುವ ನಿಜವಾದ ಗೌರವವಾಗಿರುತ್ತದೆ. ದೇಶವು ಸಂವಿಧಾನದ ಮೇಲೆ ನಿರಂತರ ದಾಳಿಗಳನ್ನು ಹೇಗೆ ನೋಡುತ್ತಿದೆ ಎಂಬುವುದರ ಕುರಿತು ಚಿಂತಿಸುವ ಸಮಯ ಬಂದಿದೆ ಎಂದು ಎಂದು ಖರ್ಗೆ ಹೇಳಿದ್ದಾರೆ.

 

 

ದಶಕಗಳಿಂದ ಎಚ್ಚರಿಕೆಯಿಂದ ಕಟ್ಟಿ ಬೆಳೆಸಿರುವ ಭಾರತದ ಸಂಸ್ಥೆಗಳು ನಿರಂತರ ಅವನತಿ ಕಾಣುತ್ತಿದೆ. ಸ್ವಾಯತ್ತ ಸಂಸ್ಥೆಗಳಲ್ಲಿ ರಾಜಕೀಯ ಹಸ್ತಕ್ಷೇಪ ಒಂದು ರೂಢಿಯಾಗಿದೆ. ಅವುಗಳ ಸ್ವಾತಂತ್ರ್ಯದ ಮೇಲೆ ನಿಯಂತ್ರಣ ಸಾಧಿಸುವುದನ್ನು ಅಧಿಕಾರದ ಸದ್ಗುಣವೆಂದು ನೋಡಲಾಗುತ್ತಿದೆ. ಒಕ್ಕೂಟ ವ್ಯವಸ್ಥೆಯನ್ನು ದಿನನಿತ್ಯ ತುಳಿದು ವಿರೋಧ ಪಕ್ಷಗಳ ಆಡಳಿತವಿರುವ ರಾಜ್ಯಗಳ ಹಕ್ಕುಗಳನ್ನು ಮೊಟಕುಗೊಳಿಸಲಾಗುತ್ತಿದೆ” ಎಂದು ಖರ್ಗೆ ಬರೆದುಕೊಂಡಿದ್ದಾರೆ.

 

 

ಆಡಳಿತ ಸರ್ಕಾರದ ದಬ್ಬಾಳಿಕೆಯ ಪ್ರವೃತ್ತಿಯಿಂದಾಗಿ ಸಂಸತ್ತಿನ ಕಾರ್ಯಚಟುವಟಿಕೆಯು ಭಾರೀ ಹಿನ್ನಡೆಯನ್ನು ಕಂಡಿದೆ. ವಿಶ್ವವಿದ್ಯಾನಿಲಯಗಳು ಮತ್ತು ಸ್ವ-ಆಡಳಿತ ಸಂಸ್ಥೆಗಳು ನಿರಂತರ ಕುಗ್ಗುತ್ತಿವೆ ಎಂದು ಖರ್ಗೆ ಹೇಳಿದ್ದಾರೆ.

 

ಮಾಧ್ಯಮದ ಬಹುಪಾಲು ಭಾಗವು ಆಡಳಿತ ಪಕ್ಷದ ಪ್ರಚಾರ ಸಾಧನವಾಗಿ ಪರಿವರ್ತನೆಗೊಂಡಿದೆ. ವಿರೋಧ ಪಕ್ಷದ ನಾಯಕರನ್ನು ಬೇಟೆಯಾಡುವ ಮೂಲಕ ಭಿನ್ನಾಭಿಪ್ರಾಯವನ್ನು ಕತ್ತು ಹಿಸುಕುವುದು ಅಧಿಕಾರದಲ್ಲಿರುವವರ ಏಕೈಕ ನೀತಿಯಾಗಿದೆ. ಧಾರ್ಮಿಕ ಮೂಲಭೂತವಾದದಲ್ಲಿ ಮುಳುಗಿರುವ ಕೆಟ್ಟ, ದ್ವೇಷಪೂರಿತ ಕಾರ್ಯಸೂಚಿಯು ನಮ್ಮ ಸಮಾಜವನ್ನು ವಿಭಜಿಸಲು ಪ್ರಯತ್ನಿಸುತ್ತಿದೆ ಎಂದು ಖರ್ಗೆ ಕಿಡಿಕಾರಿದ್ದಾರೆ.

 

 

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version