Published
2 months agoon
By
Akkare Newsಬೆಂಗಳೂರು::ಜನವರಿ 27: ಕರ್ನಾಟಕ ರಾಜ್ಯದಲ್ಲಿ ಉಂಟಾಗಿದ್ದ ಚಳಿ ವಾತಾವರಣ ಇನ್ನೇನು ಕಡಿಮೆ ಆಯಿತು ಎನ್ನುವಷ್ಟರಲ್ಲಿ ಭಾರತೀಯ ಹವಾಮಾನ ಇಲಾಖೆ ಸಾಧಾರಣದಿಂದ ಭಾರೀ ಮಳೆಯ ಎಚ್ಚರಿಕೆ ನೀಡಿದೆ. ಇಂದಿನಿಂದ ಮುಂದಿನ ಕೆಲವು ದಿನಗಳ ಒಣಹವೆ ಮುಂದುವರಿಯಲಿದೆ. ಮುಂದಿನ 5ರಿಂದ 7ದಿನಗಳ ಮುನ್ಸೂಚನೆ ವರದಿಯಲ್ಲಿ ಎರಡು ದಿನ 20 ಜಿಲ್ಲೆಗಳಲ್ಲಿ ವ್ಯಾಪಕ ಮಳೆ ಸುರಿಯುವು ನಿರೀಕ್ಷೆ ಇದೆ ಎಂದು ಐಎಂಡಿ ತಿಳಿಸಿದೆ.
ಸದ್ಯ ರಾಜ್ಯದಲ್ಲಿ ಒಣಹವೆ ಪ್ರಮಾಣ ಏರಿಕೆ ಆಗುತ್ತಿದ್ದು, ಬೆಂಗಳೂರು ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಚಳಿ ಪ್ರಮಾಣ ಕೊಂಚ ತಗ್ಗಿದೆ. ಹೀಗಾಗಿ ಈ ವಾತಾವರಣವೇ ಮುಂದಿನ ನಾಲ್ಕರಿಂದ ಐದು ದಿನ ಇರಲಿದೆ. ಆದರೆ ನಂತರ ಫೆಬ್ರವರಿ 1 ಮತ್ತು 2 ರಂದು ಒಟ್ಟು ಸುಮಾರು 20 ಜಿಲ್ಲೆಗಳಲ್ಲಿ ವ್ಯಾಪಕ ಮಳೆ ಆಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆಯ ಬೆಂಗಳೂರು ಪ್ರಾದೇಶಿಕ ಕಚೇರಿ ಮುಖ್ಯಸ್ಥರು, ವಿಜ್ಞಾನಿ ಡಾ. ಎನ್. ಪುವಿಯರಸನ್ ಮಾಹಿತಿ ನೀಡಿದ್ದಾರೆ.
ಮಳೆ ಮುನ್ಸೂಚನೆಯ ಜಿಲ್ಲೆಗಳು
ಇಂದಿನಿಂದ ಮುಂದಿನ ನಾಲ್ಕು ಚಳಿಯಲ್ಲಿ ಏರಿಳಿತ ಮುಂದುವರಿಯಲಿದೆ. ನಂತರ ಡಿಸೆಂಬರ್ 31 ರಿಂದಲೇ ವಾತಾವರಣದಲ್ಲಿ ತೀವ್ರ ರೂಪದಲ್ಲಿ ಬದಲಾವಣೆ ಆಗಲಿದೆ. ಅಂದು ಸಹ ಬೆಂಗಳೂರು ಸೇರಿದಂತೆ ಐದಾರು ಜಿಲ್ಲೆಗಳಲ್ಲಿ ಮಳೆ ಆಗಲಿದೆ. ನಂತರ ಫೆಬ್ರವರಿ 1 ಮತ್ತು 2ರಂದು ಬಾಗಲಕೋಟೆ, ಧಾರವಾಡ, ಹಾವೇರಿ, ವಿಜಯಪುರ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ಚಿಕ್ಕಮಗಳೂರು, ಹಾಸನ, ಕೊಡಗು, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ಶಿವಮೊಗ್ಗ, ತುಮಕೂರು, ಚಿತ್ರದುರ್ಗ, ಉಡುಪಿ, ಉತ್ತರ ಕನ್ನಡ ಹಾಗೂ ದಕ್ಷಿಣ ಜಿಲ್ಲೆಗಳಲ್ಲಿ ಎರಡು ಸಾಧಾರಣದಿಂದ ಭಾರೀ ಮಳೆ ಆಗುವ ಸಾಧ್ಯತೆ ಇದೆ.
Karnataka Rains: ಈ ಜಿಲ್ಲೆಗಳಿಗೆ ಭಾರೀ ಚಳಿ ಎಚ್ಚರಿಕೆ, ಕರ್ನಾಟಕ ಹವಾಮಾನ ವರದಿ, ಮುನ್ಸೂಚನೆ
ಮಳೆಯ ಬೀಳುವ ದಿನದ ಹೊತ್ತಿಗೆ ಇಂದಿರುವ ಒಣಹವೆ ವಾತಾವರಣ ಕಡಿಮೆ ಮೋಡ ಕವಿದ ವಾತಾವರಣ ಸೃಷ್ಟಿಯಾಗಲಿದೆ. ಚಳಿ ಇಳಿಕೆ ಆಗುವ ಸಾಧ್ಯತೆ ಇದ್ದು, ತಾತ್ಕಾಲಿಕವಾಗಿ ಮಳೆಗಾಲ ರೀತಿಯಲ್ಲಿ ಭಾಸವಾಗಲಿದೆ.
ಬಂಗಾಳಕೊಲ್ಲಿಯಲ್ಲಿ ಉಂಟಾಗಿದ್ದ ಹವಾಮಾನ ವೈಪರಿತ್ಯ, ಚಂಡಮಾರುತ ಪರಿಚಲನೆ ತೀವ್ರತೆ ಇಳಿಕೆ ಆಗಿದೆ. ಒಂದು ವೇಳೆ ಮುಂದಿನ ನಾಲ್ಕೈ ದಿನಗಳಲ್ಲಿ ಅರಬ್ಬಿ ಸಮುದ್ರ ಇಲ್ಲವೇ ಬಂಗಾಳಕೊಲ್ಲಿಯಲ್ಲಿರುವ ಸುಳಿಗಾಳಿ, ಸ್ಟ್ರಪ್ ತೀವ್ರ ಸ್ವರೂಪ ಪಡೆದರೆ ರಾಜ್ಯದಲ್ಲಿ ಇನ್ನಿಲ್ಲದಂತೆ ಮಳೆ ಆವರಿಸು ಸಾಧ್ಯತೆ ಇದೆ.
ಇದರ ಪ್ರಭಾವ ಕೇವಲ ಕರ್ನಾಟಕ ಮಾತ್ರವಲ್ಲದೇ, ನೆರೆಯ ತಮಿಳುನಾಡು, ಆಂಧ್ರ ಪ್ರದೇಶ, ಓಡಿಶಾ ಸೇರಿ ಕರಾವಳಿ ರಾಜ್ಯಗಳ ಮೇಲೂ ಆಗುವ ಸಾಧ್ಯತೆ ಇದೆ ಎನ್ನಲಾಗಿದೆ.
ಬೆಂಗಳೂರಲ್ಲಿ ಚಳಿ ಏರಿಳಿತ: ಮಳೆ ಎಚ್ಚರಿಕೆ
ರಾಜಧಾನಿ ಬೆಂಗಳೂರಿನಲ್ಲಿ ಒಂದು ದಿನ ಹೆಚ್ಚಿನ ಚಳಿ, ಮತ್ತೊಂದು ದಿನ ಕೊಂಚ ಚಳಿ ಇಳಿಕೆಯು ಮುಂದುವರಿದಿದೆ. ಭಾನುವಾರ ಬೆಳಗ್ಗೆ ನಗರದಲ್ಲಿ 14 ಡಿಗ್ರಿ ಸೆಲ್ಸಿಯಸ್‌ವರೆಗೆ ಕುಸಿತ ಕಂಡಿತ್ತು. ಮಧ್ಯಾಹ್ನ ಒಣ ಹವೆ ಕಂಡು ಬಂತಾದರೂ ಸೋಮವಾರ ಬೆಳ್ಳಂಬೆಳಗ್ಗೆ ಮತ್ತೆ ಥಂಡಿ ಹೆಚ್ಚಾಗಿದೆ. ನಗರಕ್ಕೂ ಎರಡು ದಿನ ಮಳೆ ಮುನ್ಸೂಚನೆ ಇದೆ ಎಂದು ಐಎಂಡಿ ಮುನ್ಸೂಚನೆ ನೀಡಿದೆ.