Connect with us

ಇಂದಿನ ಕಾರ್ಯಕ್ರಮ

ಸಾಮೆತ್ತಡ್ಕ: ರಸ್ತೆ ಅಭಿವೃದ್ಧಿ, ತಡೆಗೋಡೆ ರಚನೆಗೆ ಶಂಕುಸ್ಥಾಪನೆ

Published

on

ಪುತ್ತೂರು : ಕರ್ನಾಟಕ ಸರಕಾರ ಲೋಕೋಪಯೋಗಿ ಇಲಾಖೆಯ ಅಪೆಂಡಿಕ್ಸ್‌-ಇ ಯೋಜನೆಯಡಿಯಲ್ಲಿ ಪುತ್ತೂರು ನಗರಸಭೆಯ ಸಾಮೆತ್ತಡ್ಕ ವಾರ್ಡ್ 23ರ ಅಭಿವೃದ್ಧಿಗೆ ರೂ.60 ಲಕ್ಷ ಅನುದಾನದಲ್ಲಿ ಸಾಮೆತ್ತಡ್ಕ ರೈಲ್ವೇ ಟ್ರ್ಯಾಕ್ ಬಳಿಯ ರಸ್ತೆ ನಿರ್ಮಾಣ ಹಾಗೂ ತಡೆಗೋಡೆ ನಿರ್ಮಾಣಕ್ಕೆ ಫೆ.15 ರಂದು ಪುತ್ತೂರು ಶಾಸಕ ಅಶೋಕ್ ಕುಮಾರ್ ರೈಯವರಿಂದ ಶಂಕುಸ್ಥಾಪನೆ ನೆರವೇರಿತು.



ತೆಂಗಿನಕಾಯಿ ಒಡೆಯುವ ಮೂಲಕ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಶಾಸಕ ಅಶೋಕ್ ಕುಮಾ‌ರ್ ರೈಯವರು, ಸಾಮೆತ್ತಡ್ಕ ಈ ಭಾಗದ ವಿನಂತಿ ಮೇರೆಗೆ ರೂ.60 ಲಕ್ಷ ಅನುದಾನ ಬಂದಿದೆ. ಕಾಂಗ್ರೆಸ್‌ ಸರಕಾರ ಅಧಿಕಾರಕ್ಕೆ ಬಂದ ನಂತರ ಅಭಿವೃದ್ಧಿಯ ವಿಚಾರವಾಗಿ ಎಲ್ಲರೂ ಕೊಂಡಾಡುವಂತಹ ಸಂಗತಿಗಳು ಬಾ ಇವೆ. ಪುತ್ತೂರು-ಉಪ್ಪಿನಂಗಡಿ ರಸ್ತೆ ಇರಬಹುದು, ಉದ್ಯಮಗಳು ಇರಬಹುದು, ಕುಡಿಯುವ ನೀರಿನ ಯೋಜನೆ ಇರಬಹುದು, ಪುತ್ತೂರಿನ ಸಮಗ್ರ ಅಭಿವೃದ್ಧಿಗೆ ಸಂಬಂಧಪಟ್ಟಂತೆ ಜನಸಾಮಾನ್ಯರು ನೆನಪಿನಲ್ಲಿಡುವಂತಹ ಬೆಂಚ್‌ಮಾರ್ಕ್ ಅಭಿವೃದ್ಧಿ ಕಾಮಗಾರಿಗಳು ಹಂತ ಹಂತವಾಗಿ ಇಂದು ನಡೆಯುತ್ತಿದ್ದು ಪುತ್ತೂರಿನಲ್ಲಿ ಮೆಡಿಕಲ್ ಕಾಲೇಜ್ ಆರಂಭಿಸುವ ಬಗ್ಗೆ ನಿರಂತರ ಸಂಪರ್ಕದಲ್ಲಿದ್ದೇವೆ ಎಂದ ಅವರು ಮುಂದಿನ ದಿನಗಳಲ್ಲಿ ಮತ್ತಷ್ಟು ಅಭಿವೃದ್ಧಿ ಕಾಮಗಾರಿಗಳು ನಡೆಯಲಿದ್ದು, ನಡೀತಾ ಇದೆ. ಕಾಮಗಾರಿಗಳನ್ನು ಹೊಗಳಿಕೆಗಾಗಿ ಕೇವಲ ಬಾಯಿ ಮಾತಿನಲ್ಲಿ ಕೊಡುವುದಲ್ಲ, ಪಕ್ಷಾತೀತವಾಗಿ ಎಲ್ಲರ ಮನಸ್ಸನ್ನು ಗೆಲ್ಲುವ ಮೂಲಕ ಮಾಡಿ ತೋರಿಸುತ್ತೇವೆ, ತೋರಿಸುತ್ತಿದ್ದೇವೆ. ಅಭಿವೃದ್ಧಿ ಒಂದೇ ನಮ್ಮ ಗುರಿ, ಎಲ್ಲಾ ಪಕ್ಷದ ಕಾರ್ಯಕರ್ತರ ಮನಸ್ಸನ್ನು ಗೆಲ್ಲುವುದೇ ನಮ್ಮ ಗುರಿ. ನಾವು ಏನನ್ನಾದರೂ ತಪ್ಪು ಮಾಡಿದರೆ ತಿಳಿಸಿ, ಇಲ್ಲವೇ ಆಶೀರ್ವದಿಸಿ ಎಂದು ಅವರು ಹೇಳಿದರು.

 

ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣಪ್ರಸಾದ್ ಆಳ್ವ, ಕಾರ್ಯದರ್ಶಿ ಶರೂನ್ ಸಿಕ್ವೆರಾ, ನಗರ ಕಾಂಗ್ರೆಸ್‌ ಅಧ್ಯಕ್ಷ ಎಚ್‌.ಮಹಮದ್ ಆಲಿ, ಯುವ ಕಾಂಗ್ರೆಸ್ ಅಧ್ಯಕ್ಷ ಅಖಿಲ್‌ ಕಲ್ಲಾರೆ, ಮಾಜಿ ಅಧ್ಯಕ್ಷ ಆರ್ಶದ್ ದರ್ಬೆ, ಕಾಂಗ್ರೆಸ್‌ ಮುಖಂಡ ಪ್ರಸನ್ನ ಕುಮಾರ್ ಶೆಟ್ಟಿ ಸಿಝರ್, ಸಾಮೆತ್ತಡ್ಕ ಕಾಂಗ್ರೆಸ್ ಬೂತ್ ಅಧ್ಯಕ್ಷ ಸಿರಾಜ್, ಪ್ರಮುಖರಾದ ಸುರೇಶ್ ಸಾಲಿಯಾನ್, ನಾರಾಯಣ ಕುಡ್ವ, ಸತ್ಯಶಂಕ‌ರ್, ಭೀಮಯ್ಯ ಭಟ್, ರೋಶನ್ ರೆಬೆಲ್ಲೊ, ರೋಶನ್ ಡಾಯಸ್, ಜೋನ್ ಪೀಟ‌ರ್ ಡಿ’ಸಿಲ್ವ, ಅಂಚಿತ್ ಕಲ್ಲಾರೆ, ಸಿನಾನ್ ದರ್ಬೆ, ಪಾವ್ ಮಸ್ಕರೇನ್ಹಸ್ ಕಲ್ಲಾರೆ, ಹಕೀಂ ಬೊಳ್ವಾರು, ಸಮರ್ಥ್ ಸಾಮೆತ್ತಡ್ಕ, ನವೀನ್ ಸಾಮೆತ್ತಡ್ಕ, ಆಶಿಕ್ ಸಾಮೆತ್ತಡ್ಕ, ಸಂದೀಪ್ ಸಾಮೆತ್ತಡ್ಕ, ಮೇಗಸ್ ಮಸ್ಕರೇನ್ಹಸ್, ಡೇವಿಡ್ ಪಿರೇರಾ ಸಹಿತ ಹಲವರು ಉಪಸ್ಥಿತರಿದ್ದರು. ಕಾಂಗ್ರೆಸ್ ಮುಖಂಡ ಹಾಗೂ ವಾರ್ಡ್ ೨೩ರ ಬೂತ್ ಸಮಿತಿ ಅಧ್ಯಕ್ಷ ಮೌರಿಸ್ ಮಸ್ಕರೇನ್ಹಸ್ ಸ್ವಾಗತಿಸಿದರು.

 

 

 

 

 

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version