Published
2 months agoon
By
Akkare News
ಫೊಟೋಜರ್ನಲಿಸಂ ವಿಭಾಗದಲ್ಲಿ ಹೆಲ್ಪ್ ಲೆಸ್ ಹ್ಯಾಂಡ್ ಶೀರ್ಷಿಕೆಯಡಿ ಸೆರೆ ಹಿಡಿದ ಛಾಯಾಗ್ರಹಣಕ್ಕೆ ಪಿ ಎಂ ಪಿ ಸಿಲ್ವರ್ ಅವಾರ್ಡ್ ಹಾಗೂ ಓಪನ್ ಮೊನೋಕ್ರೋಮ್ ವಿಭಾಗದಲ್ಲಿ ಬ್ರೈಟ್ ಪ್ಯೂಚರ್ ಶೀರ್ಷಿಕೆಯಡಿ ಸೆರೆಹಿಡಿದ ಛಾಯಾಗ್ರಹಣವು ತೀರ್ಪುಗಾರರ ಮೆಚ್ಚುಗೆಗೆ ಪಾತ್ರವಾಗಿದೆ. ದಯಾನಂದ ಕುಕ್ಕಾಜೆಯವರು ಮಂಗಳೂರಿನ ಪ್ರಸಿದ್ಧ ಹಿರಿಯ ಛಾಯಾಗ್ರಾಹಕರಾಗಿದ್ದು, ಈ ಹಿಂದೆಯೂ ಹಲವಾರು ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಇವರು ಕಳೆದ 23 ವರ್ಷಗಳಿಂದ ದಾಯ್ಜಿ ವರ್ಲ್ಡ್ ಸಂಸ್ಥೆಯಲ್ಲಿ ಫೋಟೋ ಜರ್ನಲಿಸ್ಟ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.