Published
1 month agoon
By
Akkare Newsಪುತ್ತೂರು: ಚಿನ್ನ, ವಜ್ರಾಭರಣಗಳಲ್ಲಿ ಸದಾ ಹೊಸತನವನ್ನು ಪರಿಚಯಿಸುವ ಮೂಲಕ ಗ್ರಾಹಕರ ಪ್ರೀತಿಗೆ ಪಾತ್ರವಾಗಿರುವ ಮುಳಿಯ ಜ್ಯುವೆಲ್ಸ್‌ನಲ್ಲಿ ಈ ವರ್ಷದ ಡೈಮಂಡ್ ಫೆಸ್ಟ್‌ಗೆ ಮಾ.3ರಂದು ಚಾಲನೆ ನೀಡಲಾಯಿತು.
ಸಂಗೀತ ಶಿಕ್ಷಕಿ ಚೈತ್ರಿಕಾ ಕೋಡಿಬೈಲು ಮಾತನಾಡಿ ವಜ್ರ ಅಂದರೆ ಬಲ, ಹೊಳಪು, ಸುಂದರ ಆಭರಣಗಳು ರಾಜ್ಯದಾದ್ಯಂತ ಮನೆಮಾತಾಗಿರುವ ಬ್ರಾಂಡ್ ಆಗಿದೆ. ಮುಳಿಯ ಸಂಸ್ಥೆ ವಜ್ರದಂತೆ ಮತ್ತಷ್ಟು ಬಲಶಾಲಿಯಾಗಿ ಬೆಳೆಯಲಿ. ಈ ಫೆಸ್ಟ್ ಯಶಸ್ಸನ್ನು ತರಲಿ ಎಂದು ಹಾರೈಸಿದರು.
ಮಹಾಲಕ್ಷ್ಮಿ ಗ್ಲಾಸ್ ಮತ್ತು ಪ್ರೈವುಡ್ಸ್‌ನ ಮಾಲಕಿ ಋತ್ವಿಕಾ ಭರತ್ ಮಾತನಾಡಿ, ಮುಳಿಯ ಡೈಮಂಡ್ ಫೆಸ್ಟ್ ಒಂದು ತಿಂಗಳು ನಡೆಯಲಿದೆ.ಫೆಸ್ಟ್‌ಗೆ ಉತ್ತಮ ಸ್ಪಂದನೆ ಸಿಗಲಿ, ಗ್ರಾಹಕರು ಯಶಸ್ವಿಗೊಳಿಸಲಿ ಎಂದು ಹಾರೈಸಿದರು.
ಆಡಳಿತ ನಿರ್ದೇಶಕಿ ಅಶ್ವಿನಿಕೃಷ್ಣ ಮುಳಿಯ ಮಾತನಾಡಿ, ವಜ್ರಾಭರಣಗಳ ಉತ್ಸವ ಆಯೋಜನೆ ಮಾಡಿದ್ದೇವೆ. ಮಹಿಳೆಯರು ಇಷ್ಟಪಡುವ ಪರಂಪರಾಗತವಾದ ವಜ್ರಾಭರಣಗಳ ಸಂಗ್ರಹ ಇದೆ. ಮಹಿಳಾ ದಿನಾಚರಣೆಯ ಸಂದರ್ಭದಲ್ಲಿ ಹಲವು ವೈಶಿಷ್ಟ್ಯಗಳ ಆಭರಣ ಒದಗಿಸುತ್ತಿದ್ದೇವೆ. ರೂ. 9000 ದಿಂದ 15000 ದವರೆಗಿನ ವಜ್ರಾಭರಣಗಳಿವೆ. ಗ್ರಾಹಕರು ಇದನ್ನು ಯಶಸ್ಸುಗೊಳಿಸಿ ಎಂದರು.
ಆಡಳಿತ ನಿರ್ದೇಶಕಿ ಕೃಷ್ಣವೇಣಿ ಮುಳಿಯ ಮಾತನಾಡಿ ಬಂಗಾರ ಜೀವನದ ಆಧಾರ, ವಜ್ರವೂ ಜೀವನಕ್ಕೆ ಆತ್ಮವಿಶ್ವಾಸ ತುಂಬಿ ಭದ್ರತೆ ತರುತ್ತದೆ. ವಜ್ರ ಅಂದರೆ ಪ್ರಭಲತೆ ಹೊಂದಿರುತ್ತದೆ. ಆಭರಣ ಪ್ರಿಯರು ವಿಶೇಷತೆ ಪರಿಶೀಲಿಸಿ ಧರಿಸಿದಾಗ ಆಭರಣ ದೀರ್ಘಬಾಳ್ವಿಕೆ ಬರುತ್ತದೆ. ಗ್ರಾಹಕರಿಗಾಗಿ ಆಯೋಜನೆ ಮಾಡಿದ ಈ ಹಬ್ಬವನ್ನು ಗ್ರಾಹಕರು ಪ್ರೀತಿಸಿ ಯಶಸ್ವಿಗೊಳಿಸಿ ಎಂದರು.
ಶೋರೂಮ್ ಮ್ಯಾನೇಜರ್ ರಾಘವೇಂದ್ರ ಪಾಟೀಲ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಿಬ್ಬಂದಿ ರಾಜೇಶ್ ಸ್ವಾಗತಿಸಿ ಪ್ರಭಾಕರ ಭಟ್ ವಂದಿಸಿದರು. ಪ್ಲೋರ್ ಮ್ಯಾನೇಜರ್ ಪ್ರವೀಣ್ ಕಾರ್ಯಕ್ರಮ ನಿರೂಪಿಸಿದರು.