Published
3 weeks agoon
By
Akkare Newsಪುತ್ತೂರು: ಬಂಟ್ವಾಳ ಕಂದಾಯ ಇಲಾಖೆ ಕಚೇರಿಯಲ್ಲಿ ಯಾವುದೇ ಕೆಲಸಗಳು ಆಗುತ್ತಿಲ್ಲ, ಹೇಳಿದ ಕೆಲಸವನ್ನು ಮಾಡುತ್ತಿಲ್ಲ, ನೀವಾಗಿ ಯಾವುದೇ ಕೆಲಸಗಳು ಮಾಡುತ್ತಿಲ್ಲ ಏನು ಕಥೆ ಬಂಟ್ವಾಳ ಕಂದಾಯ ಕಚೇರಿಗೆ ಯಾರಾದ್ರು ಮಾಟ ಮಾಡಿದ್ದಾರ ಎಂದು ಶಾಸಕ ಅಶೋಕ್ ರೈ ಅವರು ಕೆಡಿಪಿ ಸಭೆಯಲ್ಲಿ ವಿಟ್ಲ ಹೋಬಳಿ ಉಪತಹಶಿಲ್ದಾರ್ ಗೆ ಪ್ರಶ್ನಿಸಿದರು.
94,ಸಿ ಮಾಡಿಲ್ಲ, 94 ಸಿ ಸಿ ಮಾಡಿಲ್ಲ, ಅಕ್ರಮ ಸಕ್ರಮ ಕಡತ ಮುಟ್ಟಿಯೇ ಇಲ್ಲ, ಸೈಟ್ ಗುರುತಿಸಿ ಎಂದು ಹೇಳಿದ್ದೆ ಆದನ್ನೂ ಮಾಡಿಲ್ಲ ಏನ್ರಿನೀವು ಕಚೇರಿಯಲ್ಲಿ ಕುಳಿತು ಏನು ಮಾಡುತ್ತೀರಿ? ಕಚೇರಿಗೆ ಬರುವ ಬಡವರನ್ನು ಕುಣಿಸಲುನಿಮಗೆ ಚೆನ್ನಾಗಿ ಗೊತ್ತಿದೆ, ಹೀಗಾದರೆ ಹೇಗೆ ನಿಮ್ಮ ಕಥೆ ಏನು ಅರ್ಥವೇ ಆಗುತ್ತಿಲ್ಲ. ಹೀಗೇ ಮುಂದುವರೆದರೆ ಅರ್ಥ ಮಾಡಿಸಬೇಕಾಗುತ್ತದೆ. ಬಂಟ್ವಾಳ ಕಂದಾಯ ಇಲಾಖೆ ಡೆಡ್ ಆಗಿದೆ .ಇದಕ್ಕೆ ಮರುಜೀವ ಕೊಡುವ ಮುನ್ನ ಈಗ ಇದ್ದ ನೀವು ಎಚ್ಚೆತ್ತುಕೊಳ್ಳಿ ಎಂದು ಶಾಸಕರು ಎಚ್ಚರಿಸಿದರು.