Published
10 hours agoon
By
Akkare Newsನವದೆಹಲಿ: ಕಾಶ್ಮೀರದ ಪಹಲ್ಗಾಮ್ ನಲ್ಲಿ ನಡೆದ ಉಗ್ರರ ಗುಂಡಿನ ದಾಳಿಗೆ ಸಿಲುಕಿ 26 ಮಂದಿ ಅಮಾಯಕರು ಜೀವ ಕಳೆದುಕೊಂಡಿರುವ ಬೆನ್ನಲೇ ಪಾಕ್ ವಿರುದ್ಧ ಪ್ರತಿಕಾರಕ್ಕೆ ಭಾರತ ಮುಂದಾಗಿದೆ.
ಉಗ್ರರ ದಾಳಿಯ ಬೆನ್ನಲ್ಲೇ ಬುಧವಾರ ಸರ್ವಪಕ್ಷ ಸಮಿತಿ ಸಭೆ ನಡೆಸಿದ ಕೇಂದ್ರ, ಪಾಕ್ ವಿರುದ್ಧ ಐದು ಕಠಿಣ ನಿರ್ಣಯಗಳನ್ನು ತೆಗೆದುಕೊಳ್ಳಲಾಯಿತು ಇದರಲ್ಲಿ 1960ರ ಸಿಂಧೂ ನದಿ ಒಪ್ಪಂದಕ್ಕೆ ತಡೆ, ಪಾಕಿಸ್ಥಾನಕ್ಕೆ ನೀಡುತ್ತಿದ್ದ ವೀಸಾ ರದ್ದು, ಅಟ್ಟಾರಿ-ವಾಘಾ ಗಡಿ ರಸ್ತೆ ಬಂದ್, ಭಾರತದ ರಾಯಭಾರಿ ಗಳು ವಾಪಸ್, ಭಾರತದಲ್ಲಿರುವ ಪಾಕಿಗಳಿಗೆ ಹಿಂದಿರುಗಲು 48 ತಾಸು ಗಡುವು ನೀಡಲಾಯಿತು.
ಕಾಶ್ಮೀರದ ಪಹಲ್ಗಾಮ್ ದಾಳಿಯ ಯೋಜನೆ ಮತ್ತು ಅದನ್ನು ಕಾರ್ಯಗತಗೊಳಿಸುವಲ್ಲಿ ಪಾಕಿಸ್ತಾನವು ಭಾಗಿಯಾಗಿದೆ ಎಂಬುದಕ್ಕೆ ತಮ್ಮ ಬಳಿ ಪುರಾವೆಗಳಿವೆ ಎಂದ ಭಾರತ, ಗುರುವಾರ ಯುನೈಟೆಡ್ ಸ್ಟೇಟ್ಸ್, ಯುನೈಟೆಡ್ ಕಿಂಗ್‌ಡಮ್, ಇಟಲಿ, ಫ್ರಾನ್ಸ್, ಜರ್ಮನಿ, ರಷ್ಯಾ ಮತ್ತು ಚೀನಾದ ಹಿರಿಯ ವಿದೇಶಿ ರಾಜತಾಂತ್ರಿಕರಿಗೆ ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಶ್ರಿ ಈ ಪುರಾವೆಯನ್ನು ತೋರಿಸಿದೆ.