Published
2 days agoon
By
Akkare Newsಪುತ್ತೂರು: ಮೆಸ್ಕಾಂ ಸವಣೂರು ಉಪಕೇಂದ್ರ ವ್ಯಾಪ್ತಿಯಲ್ಲಿ ನಿರಂತರ ವಿದ್ಯುತ್ ಸಮಸ್ಯೆ ತಲೆದೋರಿದ್ದು ವಿದ್ಯುತ್ ಬಳಕೆದಾರರು ತೀವ್ರ ತೊಂದರೆಗೆ ಸಿಲುಕಿದ್ದಾರೆ. ಕೆಲವು ಸಮಯಗಳ ಹಿಂದೆಯೇ ವಿದ್ಯುತ್ ಕಡಿತ ಸಮಸ್ಯೆಯಿದ್ದು ಇದೀಗ ಮಳೆ ಪ್ರಾರಂಭವಾದ ಬಳಿಕ ಜನರು ಕತ್ತಲೆಯಲ್ಲೇ ಕಾಲ ಕಳೆಯುವಂತಾಗಿದೆ. ಸರ್ವೆ, ಸೊರಕೆ, ಕಲ್ಪಣೆ, ರೆಂಜಲಾಡಿ, ಭಕ್ತಕೋಡಿ ಮತ್ತಿತರ ಪ್ರದೇಶಗಳಲ್ಲಿ ನಿರಂತರ ವಿದ್ಯುತ್ ಸಮಸ್ಯೆ ಉಂಟಾಗಿದ್ದು ರಾತ್ರಿ ವೇಳೆಯಲ್ಲಂತೂ ವಿದ್ಯುತ್ ಇರುವುದೇ ಇಲ್ಲ ಎಂದು ಆ ಭಾಗದ ಜನರು ತಿಳಿಸಿದ್ದಾರೆ.
ಪದೇ-ಪದೇ ವಿದ್ಯುತ್ ಕಡಿತ ಸಮಸ್ಯೆಯಿಂದ ಜನರು ರೋಸಿ ಹೋಗಿದ್ದು ಮೆಸ್ಕಾಂ ವಿರುದ್ದ ಪ್ರತಿಭಟನೆ ಮಾಡುವ ಬಗ್ಗೆಯೂ ಚರ್ಚೆ ನಡೆಸಿದ್ದಾರೆ ಎಂದು ತಿಳಿದು
ಈ ಹಿಂದೆ ಇಂತಹ ಸಮಸ್ಯೆ ಇರಲಿಲ್ಲ, ಇತ್ತೀಚೆಗೆ ವಿಪರೀತ ವಿದ್ಯುತ್ ಸಮಸ್ಯೆ ಉಂಟಾಗಿದ್ದು ಕತ್ತಲೆಯಲ್ಲೇ ಕಾಲ ಕಳೆಯುವಂತಾಗಿದೆ, ವಿದ್ಯುತ್ ಬಿಲ್ ಕಟ್ಟದಿದ್ದರೆ ಕೂಡಲೇ ವಿದ್ಯುತ್ ಕಡಿತಗೊಳಿಸುವ ಮೆಸ್ಕಾಂ ಇಲಾಖೆ ಈಗ ವಿದ್ಯುತ್ ಸರಿಯಾಗಿ ನೀಡದಿದ್ದರೆ ಇದಕ್ಕೇನು ಪರಿಹಾರ ಎಂದು ಆ ಭಾಗದ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಮೆಸ್ಕಾಂ ಇಲಾಖೆಯ ಜೆ. ಇ ಅವರನ್ನು ಕೇಳಿದರೆ ನಮ್ಮಲ್ಲಿ ಸಿಬ್ಬಂದಿ ಲೈನ್‌ಮೆನ್ ಕೊರತೆ ಎನ್ನುವ ಉತ್ತರ ನೀಡುತ್ತಿದ್ದು ಸಿಬ್ಬಂದಿ ಕೊರತೆಯ ನೆಪ ಹೇಳಿ ಜನರಿಗೆ ವಿದ್ಯುತ್ ಸರಿಯಾಗಿ ನೀಡದೇ ಇರುವುದು ಎಷ್ಟು ಸರಿ ಎಂದು ಜನರು ಪ್ರಶ್ನಿಸಿದ್ದಾರೆ. ವಿದ್ಯುತ್ ಸಮಸ್ಯೆ ವಿಪರೀತವಾಗಿದ್ದು ಇನ್ವರ್ಟ‌್ರಗೆ ಚಾರ್ಜ್ ಆಗುವಷ್ಟು ಹೊತ್ತು ಕೂಡಾ ವಿದ್ಯುತ್
ಇರುವುದಿಲ್ಲ, ರಾತ್ರಿ ವೇಳೆ ಕ್ಯಾಂಡಲ್ ಹೊತ್ತಿಸಿ ಇರಬೇಕಾದ ಪರಿಸ್ಥಿತಿ ಬಂದಿದೆ ಎಂದು ಬಳಕೆದಾರರೊಬ್ಬರು ‘ ತಿಳಿಸಿದ್ದಾರೆ.
ಈ ಹಿಂದಿನಂತೆ ಕೋವಿಡ್ ಪರೀಕ್ಷೆಯಲ್ಲಿ ರೆಮಿಡೆಸಿವಿರ್, RTPCR ಪ್ರಕ್ಯೂರ್ ಮಾಡ್ತಿದ್ದೇವೆ. ಯಾರಿಗೂ ಕಡ್ಡಾಯವಾಗಿ ಟೆಸ್ಟಿಂಗ್ ಇಲ್ಲ. ಯಾರಿಗೆ ತೀವ್ರ ಅನಾರೋಗ್ಯ ಇರುತ್ತದೆಯೋ ಅವರು ಟೆಸ್ಟಿಂಗ್ ಮಾಡಿಸಿಕೊಳ್ಳಬೇಕು. ಇದು ಕೋವಿಡ್-19 ರೂಪಾಂತರಿ ಹಳೆಯ ಓಮಿಕ್ರಾನ್ ತಳಿ ಆಗಿರುವುದರಿಂದ ಇದರ ದುಷ್ಪರಿಣಾಮ ಹೆಚ್ಚಾಗಿ ಬೀರುವುದಿಲ್ಲ. ಇದೀಗ ಸೋಂಕು ಹರಡುತ್ತಿದ್ದು, ಮುಂದಿನ ದಿನಗಳಲ್ಲಿ ಪರಿಣಾಮವನ್ನು ಕಾದು ನೋಡಿ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ. ಇನ್ನು ವಿದೇಶದ ದಿಂದ ಬಂದವರಿಗೆ ಕಡ್ಡಾಯ ಟೆಸ್ಟಿಂಗ್ ಇಲ್ಲ ಎಂದು ತಿಳಿಸಿದರು.