Published
2 days agoon
By
Akkare Newsಪುತ್ತೂರು: ದ.ಕ ಜಿಲ್ಲೆಯ ಪುತ್ತೂರು ತಾಲೂಕು ಗಡಿನಾಡ ಪ್ರದೇಶವಾದ ಪಾಣಾಜೆ ಆರ್ಲಪದವಿನಲ್ಲಿ ಸರಕಾರಿ ಪಾಲಿಟೆಕ್ನಿಕ್ (ಡಿಪ್ಲೊಮಾ) ಕಾಲೇಜು ಬಹಳ ಅತ್ಯಗತ್ಯವಾಗಿ ಆಗಬೇಕಿದೆ.ಪುತ್ತೂರು ತಾಲೂಕಿನಲ್ಲೆ ಸರಕಾರಿ ಪಾಲಿಟೆಕ್ನಿಕ್ ಕಾಲೇಜು ಇರುವದಿಲ್ಲ.ನಮ್ಮ ಪರಿಸರದಲ್ಲಿ ಅದೆಷ್ಟೋ ವಿದ್ಯಾರ್ಥಿಗಳು ಕಡು ಬಡತನದಲ್ಲಿ ಇರುವವರಾಗಿದ್ದಾರೆ ಭವಿಷ್ಯತ್ ನಿರ್ಮಾಣದ ವಿದ್ಯಾರ್ಥಿಗಳಿಗೆ ತಾಂತ್ರಿಕ ವಿದ್ಯಾಭ್ಯಾಸ ಮಾಡಬೇಕೆಂಬ ಇರಾದೆ ಇದ್ದರೂ, ಖಾಸಗೀ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡಲು ಕಬ್ಬಿಣದ ಕಡಲೆ ಕಾಯಿಯಂತಾಗಿದೆ. ಅದಕ್ಕೆ ಬೇಕಾದಷ್ಟು ಶುಲ್ಕ ಭರಿಸಲು ಅಸಕ್ತರಾದವರೇ ಆಗಿರುತ್ತಾರೆ.
ಹೀಗಿರುವಲ್ಲಿ ಸರಕಾರಿ ಪಾಲಿಟೆಕ್ನಿಕ್ ಕಾಲೇಜು ನಿರ್ಮಾಣವಾದರೆ ಸದ್ರಿ ಪರಿಸರದ ಮಾತ್ರವಲ್ಲ ಹತ್ತಿರದ ಗಡಿನಾಡ ಪ್ರದೇಶದ ವಿದ್ಯಾರ್ಥಿಗಳಿಗೂ ಬಲು ದೊಡ್ಡ ವರದಾನವಾಗಲಿದೆ ಎಂಬುದರಲ್ಲಿ ಸಂಶಯವಿಲ್ಲ.
ಪುತ್ತೂರು ಆಧುನಿಕ ಯುಗದಲ್ಲಿ ತಾಂತ್ರಿಕ ವಿದ್ಯಾಭ್ಯಾಸದ ಅಗತ್ಯತೆ ಹೆಚ್ಚಾಗಿದ್ದು ಅದರ ಈಡೇರಿಕೆಗೆ ತಾಂತ್ರಿಕ ಕಾಲೇಜು ನಿರ್ಮಾಣ ಅಗತ್ಯವಾಗಿದ್ದು ಅದಕ್ಕೆ ಸೂಕ್ತವಾದ ಸ್ಥಳ ಗಡಿ ಪ್ರದೇಶವಾದ ಪಾಣಾಜೆ ಗ್ರಾಮವೇ ಆಗಿದೆ.ಈ ಹಿನ್ನೆಲೆಯಲ್ಲಿ ಎಲ್ಲಾ ರಂಗದಲ್ಲೂ ಮುಂಚೂಣಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಜನಪರ ಕಾಳಜಿಯುಳ್ಳ ವಿದ್ಯಾರ್ಥಿಗಳ ಆಶಾಕಿರಣರೂ ಆಗಿರುವ ಗೌರವಾನ್ವಿತ ಶಾಸಕರಾದ ತಾವುಗಳು ಪಾಣಾಜೆಯ ಆರ್ಲಪದವಿನಲ್ಲಿ ಸರಕಾರಿ ಪಾಲಿಟೆಕ್ನಿಕ್ ಕಾಲೇಜು ನಿರ್ಮಾಣ ಮಾಡುವಲ್ಲಿ ಮುತುವರ್ಜಿ ವಹಿಸಿ ದಯಪಾಲಿಸಬೇಕೆಂದು ಮಾನ್ಯ ಶಾಸಕರಾದ ಅಶೋಕ ಕುಮಾರ್ ರೈ ಯವರಿಗೆ ಗಡಿನಾಡ ಶ್ರೇಯೋಭಿವೃದ್ಧಿ ಟ್ರಸ್ಟ್ ಅಧ್ಯಕ್ಷ ರಾದ ಡಾ.ಹಾಜಿ.ಯಸ್.ಅಬೂಬಕ್ಕರ್ ಆರ್ಲಪದವು ಪಾಣಾಜೆ ನಾಗರಿಕ ಸಮಿತಿ ಅಧ್ಯಕ್ಷರಾದ ಬಾಬು ರೈ ಕೋಟೆ ಜಂಟಿಯಾಗಿ ಮನವಿ ಸಲ್ಲಿಸಿದರು ಈ ಸಂದರ್ಭದಲ್ಲಿ ಯುವ ಕಾಂಗ್ರೆಸ್ ರಾಜ್ಯ ಕಾರ್ಯದರ್ಶಿ ಶ್ರೀ ಪ್ರಸಾದ್ ಪಾಣಾಜೆ , ಪಾಣಾಜೆ ಗ್ರಾಮ ಪಂಚಾಯತ್ ಸದಸ್ಯ ನಾರಾಯಣ ನಾಯಕ್ ಮತ್ತಿತರರು ಉಪಸ್ಥಿತರಿದ್ದರು.