Connect with us

ಶಾಲಾ ಚಟುವಟಿಕೆ

ಎವಿಜಿ ಶಾಲೆಯಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆ

Published

on

“ಶಾರೀರಿಕ ,ಬೌದ್ಧಿಕ ,ಮಾನಸಿಕ ಸ್ವಾಸ್ಥ್ಯಕ್ಕೆ ಯೋಗ ಅತಿ ಅವಶ್ಯಕ”-ಕರುಣಾಕರ ಉಪಾಧ್ಯಾಯ
ಬನ್ನೂರು : ಯೋಗ ಎನ್ನುವುದು ಮಾನವನ ಶಾರೀರಿಕ ,ಬೌದ್ಧಿಕ ,ಮತ್ತು ಮಾನಸಿಕ ವಿಕಾಸಕ್ಕೆ ಅತಿ ಅವಶ್ಯಕವಾಗಿದ್ದು .ಅದು ಅತಿ ಹಿಂದಿನ ಕಾಲದಲ್ಲಿ ರೂಢಿಯಲ್ಲಿತ್ತು ಎಂದು ಓಂಕಾರ ಯೋಗ ಕೇಂದ್ರದ ಪುತ್ತೂರು ಇದರ ಮುಖ್ಯಸ್ಥರಾದ ಕರುಣಾಕರ ಉಪಾಧ್ಯಾಯರು ಹೇಳಿದರು.

ಅವರು ಇಲ್ಲಿನ ಎವಿಜಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಜೂನ್ 21ರಂದು ನಡೆದ ಅಂತರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ದೀಪ ಪ್ರಜ್ವಲನೆ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಆರೋಗ್ಯವೆಂದರೆ ಏಕ ಸೂತ್ರದಲ್ಲಿ ಕೆಲಸ ಮಾಡುವುದು. ನಾವು ಮಾಡುವ ಕರ್ಮಗಳಲ್ಲಿ ಏಕ ಚಿತ್ತದಿಂದ ತಲ್ಲಿನರಾದಾಗ ನಮ್ಮ ಮನಸ್ಸು ಆರೋಗ್ಯ ಸದೃಢವಾಗಲು ಸಾಧ್ಯ .ಈ ಹಿನ್ನೆಲೆಯಲ್ಲಿ ಅಷ್ಟಾಂಗ ಯೋಗದ ಬಗ್ಗೆ ಪ್ರತಿಯೊಬ್ಬರು ತಿಳಿದುಕೊಂಡು ಯೋಗಭ್ಯಾಸವನ್ನು ನಮ್ಮ ದಿನನಿತ್ಯದಲ್ಲಿ ರೂಢಿಸಿಕೊಂಡು ಮುಂದುವರಿಯಬೇಕೆಂದು ವಿದ್ಯಾರ್ಥಿಗಳಿಗೆ ಈ ಸಂದರ್ಭದಲ್ಲಿ ಕಿವಿ ಮಾತನ್ನು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷರಾದ ವೆಂಕಟರಮಣ ಗೌಡ ಕಳುವಾಜೆ ವಹಿಸಿದ್ದು ಸಣ್ಣ ಮಕ್ಕಳಿಂದ ಹಿಡಿದು ವೃದ್ಧರವರೆಗೂ ಯೋಗ ಹಾಗೂ ಪ್ರಾಣಯಾಮ ಅತ್ಯಂತ ಅಗತ್ಯ ಇದರಿಂದ ಒತ್ತಡರಹಿತ ಬದುಕನ್ನು ಸಾಧಿಸಲು ಸಾಧ್ಯ ಎನ್ನುತ್ತಾ ನಾವೆಲ್ಲರೂ ದಿನನಿತ್ಯ ಯೋಗ ಅಭ್ಯಾಸವನ್ನು ಮಾಡೋಣ ಎನ್ನುವ ಸಲಹೆಯನ್ನು ನೀಡಿದರು. ಸಂಚಾಲಕರಾದ ಎ ವಿ ನಾರಾಯಣ್ ರವರು ಯೋಗ ದಿನಾಚರಣೆಯ ಬಗ್ಗೆ ಪ್ರಾಸ್ತಾವಿಕವಾಗಿ ಮಾತನಾಡಿದರು. ವೇದಿಕೆಯಲ್ಲಿ ಉಪಾಧ್ಯಕ್ಷರಾದ ಉಮೇಶ್ ಮಲುವೇಲು,ಶಾಲಾ ಆಡಳಿತ ಅಧಿಕಾರಿಯಾದ ಗುಡ್ಡಪ್ಪ ಗೌಡ ಬಲ್ಯ, ಹಾಗೂ ಶಿಕ್ಷಕರಕ್ಷಕ ಸಂಘದ ಅಧ್ಯಕ್ಷರಾದ ಶ್ರೀಮತಿ ಸೌಮ್ಯಶ್ರೀ ಹೆಗಡೆ ಹಾಗೂ ಶಾಲಾ ನಿರ್ದೇಶಕರಾದ ಗಂಗಾಧರ ಗೌಡ ಮತ್ತು ಸೀತಾರಾಮ ಪೂಜಾರಿ, ಹಾಗೂ ಶಾಲೆಯ ಪ್ರಾಂಶುಪಾಲರಾದ ಅಮರನಾಥ್ ಬಿ.ಪಿ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಆಡಳಿತ ಮಂಡಳಿಯ ನಿರ್ದೇಶಕರು ಬೋಧಕ -ಬೋಧಕೇತರ ವೃಂದ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಸಭಾ ಕಾರ್ಯಕ್ರಮದ ಬಳಿಕ ಯೋಗ ಶಿಕ್ಷಕಿ ಶ್ರೀಮತಿ ಯಶುಭ ರೈ ರವರ ಮಾರ್ಗದರ್ಶನದಲ್ಲಿ ಹಾಗೂ ಶಿಕ್ಷಕ ವೃಂದದ ಸಹಕಾರದೊಂದಿಗೆ ವಿದ್ಯಾರ್ಥಿಗಳಿಂದ ಯೋಗ ಪ್ರದರ್ಶನ ನಡೆಯಿತು.

 

 

ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿಯರಾದ ಕುಮಾರಿ ಆದ್ಯ ,ಶಿವಾನಿ,ಜೋಶ್ನ ಅದ್ವಿತಿ ಚಾರ್ವಿ.ಡಿ ರವರು ಪ್ರಾರ್ಥಿಸಿದರು. ಶಿಕ್ಷಕಿ ಶ್ರೀಮತಿ ಸವಿತಾ ಕುಮಾರಿ ಸ್ವಾಗತಿಸಿದರು. ಶಿಕ್ಷಕಿ ಕುಮಾರಿ ಪ್ರಕ್ಷುತ ಅತಿಥಿ ಪರಿಚಯ ಮಾಡಿದರು. ಶಿಕ್ಷಕಿ ಶ್ರೀಮತಿ ಸುಚಿತ ರವರು ವಂದನಾರ್ಪಣೆಗೈದು, ಶಿಕ್ಷಕಿ ಶ್ರೀಮತಿ ರಂಜಿತ ರೈ ರವರು ಕಾರ್ಯಕ್ರಮವನ್ನು ನಿರೂಪಿಸಿದರು.

 



 

Continue Reading
Click to comment

Leave a Reply

Your email address will not be published. Required fields are marked *

Advertisement