Published
11 months agoon
By
Akkare News
ಉಪ್ಪಿನಂಗಡಿ : ನೆಕ್ಕಿಲಾಡಿ ಮಾಂಡೋವಿ ಮೋಟಾರ್ಸ್ ನಲ್ಲಿ ಸುಝುಕಿ ಕಂಪೆನಿಯ ಹೊಸ ಕಾರು ವಿಕ್ಟರೀಸ್ ನ್ನು ಶಾಸಕ ಅಶೋಕ್ ರೈ ಮಾರುಕಟ್ಟೆಗೆ ಬಿಡುಗಡೆ ಮಾಡಿದರು. ಈ ಸಂದರ್ಭದಲ್ಲಿ ಸುಜುಕಿ ಕಂಪನಿಯು ಮಾರುಕಟ್ಟೆಯಲ್ಲಿ ಗ್ರಾಹಕರಿಗೆ ಒಳ್ಳೆಯ ಸರ್ವಿಸ್ ಮತ್ತು ಕಡಿಮೆ ದರ ಕ್ಕೆ ಒಳ್ಳೆಯ ಕಾರನ್ನು ಕೊಟ್ಟು ಹೆಸರುವಾಸಿಯಾಗಿದೆ ಎಂದು ಹೇಳಿ,ಶುಭ ಕೋರಿದರು. 
ಈ ಸಂದರ್ಭದಲ್ಲಿ ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ತೌಸೀಫ್,ಸಿದ್ದಿಕ್ ಮತ್ತು ಶಶಿದರ್ ಕಾರಂತ್ ಜನರಲ್ ಮೆನೇಜರ್, ಸುಜಿತ್ ಗ್ರಾಮಾಂತರ ಸೇಲ್ಸ್ ಹೆಡ್,ಸುಮಿತ್ ನಾಯಕ್ ಟೀಮ್ ಮೆನೇಜರ್, ಶ್ರೀ ಹರ್ಷ ರೈ ಟೀಮ್ ಮೆನೇಜರ್,ಸುಧೆಶ್ ಸರ್ವಿಸ್ ಮೆನೇಜರ್ ಮತ್ತು ಮಂಡವಿ ಉಪ್ಪಿನಂಗಡಿ ಸೇಲ್ಸ್ ಮತ್ತು ಸರ್ವಿಸ್ ಟೀಮ್ ನವರು ಉಪಸ್ಥಿತರಿದ್ದರು.







