Published
4 months agoon
By
Akkare News
ಬಿಹಾರ ಚುನಾವಣೆ ಫಲಿತಾಂಶ ಹೊರಬಿದ್ದ ನಂತರ ದೇಶದಲ್ಲಿ ಮತ್ತೆ ಎನ್ಡಿಎ ಮೈತ್ರಿಕೂಟದ ಹವಾ ಇರೋದು ಕನ್ಫರ್ಮ್ ಆಗಿದೆ. ಹೇಗಾದರೂ ಮಾಡಿ, ಬಿಹಾರ ವಿಧಾನಸಭೆಯ ಚುನಾವಣೆ ಗೆಲ್ಲಬೇಕು ಅನ್ನೋದು ವಿರೋಧ ಪಕ್ಷಗಳ ಒನ್ಲೈನ್ ಅಜೆಂಡಾ ಆಗಿತ್ತು. ಹೀಗಿದ್ದಾಗ ತಿಕ್ಕಾಟ & ಹೋರಾಟ ಕೂಡ ಜೋರಾಗಿತ್ತು. ಇಷ್ಟೆಲ್ಲಾ ತಿಕ್ಕಾಟದ ನಡುವೆ ಕೂಡ ವಿರೋಧ ಪಕ್ಷಗಳ ನಾಯಕರ ತಪ್ಪು ತಪ್ಪು ನಿರ್ಧಾರಗಳು ಇದೀಗ ವಿಪಕ್ಷಗಳ ಒಕ್ಕೂಟವನ್ನು ಹೀನಾಯವಾಗಿ ಸೋಲು ಕಾಣುವಂತೆ ಮಾಡಿಸಿದೆ ಎಂಬ ಅರೋಪ ಕೇಳಿ ಬಂದಿದೆ.

243 ಸ್ಥಾನಗಳನ್ನು ಹೊಂದಿರುವ ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಭಾರಿ ಜಿದ್ದಾಜಿದ್ದಿನಿಂದ ಹೋರಾಟ ನಡೆದಿತ್ತು. ಅಲ್ಲದೆ ಈ ಹೋರಾಟದಲ್ಲಿ ಎಲ್ಲಾ ಪಕ್ಷಗಳ ನಾಯಕರು ಕೂಡ ಆರೋಪ ಮತ್ತು ಪ್ರತ್ಯಾರೋಪ ಮಾಡಿದ್ದರು. ಅದರಲ್ಲೂ ಬಿಹಾರದಲ್ಲಿ ಆಡಳಿತ ವಿರೋಧಿ ಅಲೆ ಇದೆ ಎಂಬ ವಾದ ಮಾಡಿದ್ದ ಕಾಂಗ್ರೆಸ್ ಮತ್ತು ಆರ್ಜೆಡಿ ನಾಯಕರು ಚುನಾವಣೆಯನ್ನು ಸೂಕ್ತವಾಗಿ ಎದುರಿಸಿ ನಿಲ್ಲುವಲ್ಲಿ ಸೋತು ಹೋದರಾ? & ನಾಯಕರು ಮಾಡಿಕೊಂಡ ತಪ್ಪು ಹಾಗೇ ಎಡವಟ್ಟು ಎಡವಟ್ಟು ನಿರ್ಧಾರಗಳ ಪರಿಣಾಮ ಪಕ್ಷಕ್ಕೆ ದೊಡ್ಡ ಪೆಟ್ಟು ಬಿದ್ದಿದೆಯಾ? ಅಂತಾ ಕಾರ್ಯಕರ್ತರು ಹೀನಾಯ ಸೋಲಿನ ನಂತರ ಚರ್ಚೆ ಶುರು ಮಾಡಿದ್ದಾರೆ.

ರಾಹುಲ್ ಗಾಂಧಿ ನಾಯಕತ್ವಕ್ಕೆ ಮತ್ತೆ ಸೋಲು? ಅಂದಹಾಗೆ ಕಾಂಗ್ರೆಸ್ ಪಕ್ಷದಲ್ಲಿ ಉನ್ನತ ಮಟ್ಟದ ನಾಯಕರೇ ಮಾಡಿಕೊಂಡ ಎಡವಟ್ಟು ನಿರ್ಧಾರ ಈಗ ಹೊಸ ಸಮಸ್ಯೆ ಸೃಷ್ಟಿಸಿರುವ ಆರೋಪ ಕೇಳಿ ಬಂದಿದೆ. ಯಾಕಂದ್ರೆ ಸೂಕ್ತವಾಗಿ ಎಲೆಕ್ಷನ್ ಎದುರಿಸಿದ್ದರೆ ಇಂತಹ ಪರಿಸ್ಥಿತಿ ಬರುತ್ತಿರಲಿಲ್ಲ, ಅದರಲ್ಲೂ ಹೀನಾಯ ಸೋಲು ಎದುರಾಗುತ್ತಾ ಇರಲಿಲ್ಲ ಎಂಬುದು ಸ್ವತಃ ಕಾರ್ಯಕರ್ತರ ಮಾತಾಗಿದೆ. ಈ ಮೂಲಕ ಬಿಹಾರದಲ್ಲಿ ಚುನಾವಣೆ ಸೋಲು ಈಗ ಕಾರ್ಯಕರ್ತರ ಮನಸ್ಸಿನಲ್ಲಿ ಹೊಸ ಆತಂಕ ಹಾಗೂ ಭಯ ಹುಟ್ಟು ಹಾಕುತ್ತಿದೆ.


ಕಾಂಗ್ರೆಸ್ ಪಕ್ಷದ ಭವಿಷ್ಯಕ್ಕೆ ಕಂಟಕ? ಇದನ್ನೆಲ್ಲಾ ನೋಡುತ್ತಿದ್ದರೆ ಈಗಾಗಲೇ ಸಂಕಷ್ಟದಲ್ಲಿ ಇರುವ ಕಾಂಗ್ರೆಸ್ ಪಕ್ಷಕ್ಕೆ ಮತ್ತಷ್ಟು ಸಮಸ್ಯೆ ಗ್ಯಾರಂಟಿ. ಸಾಲು ಸಾಲು ಚುನಾವಣೆ ಸೋಲು ಹಾಗೂ ಚುನಾವಣೆಯಲ್ಲಿ ಬಲಿಷ್ಠವಾದ ನಾಯಕನ ಕೊರತೆ ಈಗ ಎದ್ದು ಕಾಣುತ್ತಿದೆ. ಇಷ್ಟೆಲ್ಲದರ ನಡುವೆ ಮತ್ತೊಂದು ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಸೋತು ಹೋಗಿರುವುದು ಭಾರಿ ಚರ್ಚೆಗೆ ಕೂಡ ವೇದಿಕೆ ಒದಗಿಸಿದೆ. ಇನ್ನುಳಿದಂತೆ ಅತ್ತ ರಾಹುಲ್ ಗಾಂಧಿ ಮುಂದೆ ಏನು ಮಾಡ್ತಾರೆ? ಎಂಬ ಚರ್ಚೆ ಕೂಡ ಜೋರಾಗಿದೆ.






