Connect with us

ಇತ್ತೀಚಿನ ಸುದ್ದಿಗಳು

ಸಾರಿಗೆ ಇಲಾಖೆಯ ಸರ್ವರ್ ಸಮಸ್ಯೆಯಿಂದ ವಾಹನ ಮಾಲಕರ ಪರದಾಟ ಸರಿಪಡಿಸಲು ವಾಹನ ಮಾಲಕರ ಆಗ್ರಹ

Published

on

ಪುತ್ತೂರು: ರಾಜ್ಯದಾದ್ಯಂತ ಕಳೆದ ಒಂದು ವಾರದಿಂದ ಸಾರಿಗೆ ಕಚೇರಿಯಲ್ಲಿ ಮತ್ತು ಆನ್ಲೈನ್ ಅರ್ಜಿ ಸಲ್ಲಿಸುವವರಿಗೆ ಸರ್ವರ್ ಸಮಸ್ಯೆಯಿಂದ ವಾಹನ ಮಾಲಕತ್ತ ವರ್ಗಾವಣೆ, ಕಂತುಕರಾರು ರದ್ದತಿ, ಪರವಾನಿಗೆ ನವೀಕರಣ ಅಗತ್ಯ ಕೆಲಸಗಳು ಎಲ್ಲಾ ಕಚೇರಿಗಳಲ್ಲಿ ವಿಳಂಬವಾಗಿರುತ್ತದೆ.
ಸರಕಾರದ ಸೂಚನೆ ಮೇರೆಗೆ ಮಾಲಕರು ಆನ್ಲೈನ್ ಮುಖಾಂತರ ಅರ್ಜಿ ಸಲ್ಲಿಸಲು ಪರದಾಟ ಪಡುವಂತಾಗಿದೆ ವಾಹನ ಮಾಲೀಕರು ಕಚೇರಿಯಲ್ಲಿ ಅಲೆದಾಡುವ ಪರಿಸ್ಥಿತಿ ಬಂದಿದೆ. ತೆರಿಗೆ ಪಾವತಿ ಮತ್ತು ಹೊರರಾಜ್ಯ ಪರವಾನಿಗೆ ನವೀಕರಣವು ಸರಿಯಾದ ಸಮಯಕ್ಕೆ ಆಗುವುದಿಲ್ಲ. ರಾಜ್ಯ ಸರಕಾರ ಮತ್ತು ಸಾರಿಗೆ ಇಲಾಖೆ ಇದರ ಬಗ್ಗೆ ತಕ್ಷಣ ಕ್ರಮ ಕೈಗೊಂಡು ವಾಹನಮಾಲಕರ ಸ್ಪಂದನೆಗೆ ಸ್ಪಂದಿಸಬೇಕೆಂದು ವಾಹನ ಮಾಲಕರು ಆಗ್ರಹಿಸಿದ್ದಾರೆ. ಇದೇ ರೀತಿ ಸಮಸ್ಯೆಯಾದರೆ ವಾಹನ ಓಡಿಸಲು ಅನಾನುಕೂಲವಾಗುವ ಸಂಭವ ಬರಬಹುದು.

Continue Reading
Click to comment

Leave a Reply

Your email address will not be published. Required fields are marked *

Advertisement