Published
17 hours agoon
By
Akkare News
ಆದರೆ ಪ್ರಸ್ತುತ ದೇವಸ್ಥಾನದ ಅಭಿವೃದ್ಧಿ ಹಾಗೂ ಹೊಸ ರಸ್ತೆ ನಿರ್ಮಾಣಕ್ಕೆ ಸಂಬಂಧಿಸಿದಂತೆ ಯೋಜನೆಗಳು ರೂಪುಗೊಳ್ಳುತ್ತಿರುವ ಬಗ್ಗೆ ತಿಳಿದುಬರುತ್ತಿದೆ. ಇಂತಹ ಮಹತ್ವದ ಯೋಜನೆಗಳನ್ನು ಭಕ್ತರೊಂದಿಗೆ ಸಮಾಲೋಚನೆ ನಡೆಸದೆ ಹಾಗೂ ಅವರ ಅಭಿಪ್ರಾಯಗಳನ್ನು ಪಡೆದುಕೊಳ್ಳದೆ ರೂಪಿಸುವುದು ಸೂಕ್ತವಲ್ಲ ಎಂಬ ಅಭಿಪ್ರಾಯ ಭಕ್ತರಲ್ಲಿ ವ್ಯಕ್ತವಾಗುತ್ತಿದೆ. ದೇವಸ್ಥಾನದಂತಹ ಸಾರ್ವಜನಿಕ ಧಾರ್ಮಿಕ ಕ್ಷೇತ್ರಕ್ಕೆ ಸಂಬಂಧಿಸಿದ ಪ್ರಮುಖ ನಿರ್ಧಾರಗಳು ಪಾರದರ್ಶಕವಾಗಿ ಹಾಗೂ ಭಕ್ತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಾಮೂಹಿಕ ನಿರ್ಣಯದ ಮೂಲಕ ಕೈಗೊಳ್ಳುವುದು ಅತ್ಯಗತ್ಯವಾಗಿದೆ. 
ನಮ್ಮ ಅಗ್ರಹಗಳು ಈ ಕೆಳಗಿನಂತಿವೆ: 1)ದೇವಸ್ಥಾನದ ಅಭಿವೃದ್ಧಿ ಕಾರ್ಯಗಳಿಗೆ ನಮ್ಮ ಸಂಪೂರ್ಣ ಬೆಂಬಲವಿದೆ. 2)ಯಾವುದೇ ಅಭಿವೃದ್ಧಿ ಕಾಮಗಾರಿಯಿಂದ ಭಕ್ತರ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗದಂತೆ ಹಾಗೂ ದೇವಸ್ಥಾನದ ಪರಂಪರೆ ಮತ್ತು ಪಾವಿತ್ಯಕ್ಕೆ ಯಾವುದೇ ರೀತಿಯ ಹಾನಿಯಾಗದಂತೆ ಕ್ರಮವಹಿಸಬೇಕು. 3)ಹಿಂದೂ ಧಾರ್ಮಿಕ ದತ್ತಿ ಇಲಾಖೆ ವ್ಯಾಪ್ತಿಗೆ ಬರುವ ದೇವಸ್ಥಾನ ಜಾಗದಲ್ಲಿ ಯಾವುದೇ ಕಾರಣಕ್ಕೂ ಸಾರ್ವಜನಿಕ ಸಂಚಾರಕ್ಕಾಗಿ ರಸ್ತೆ ಮಾಡಬಾರದು. 4)ಹಿಂದೂ ಪರಿವಾರದ ಮನೆಗಳಿಗೆ ಮಡಿವಾಳಕಟ್ಟೆ ಬದಿಯಿಂದ ರಸ್ತೆ ನಿರ್ಮಾಣಕ್ಕೆ ನಮ್ಮ ವಿರೋಧವಿಲ್ಲ 5)ದೇವಸ್ಥಾನದ ಅಭಿವೃದ್ಧಿ ದೃಷ್ಟಿಯಿಂದ ರಸ್ತೆಯ ಪ್ರಸ್ತಾಪ ಇದ್ದರೆ ಭಕ್ತಾದಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮಾಡತಕ್ಕದ್ದು. 6)ದೇವಸ್ಥಾನದ ಅಭಿವೃದ್ಧಿ ಯೋಜನೆಗಳ ಕುರಿತು ಭಕ್ತರು, ಸ್ಥಳೀಯರು ಹಾಗೂ ಸಂಬಂಧಪಟ್ಟವರೊಂದಿಗೆ ಮುಕ್ತ ಸಮಾಲೋಚನೆ ನಡೆಸಲು ಸಾರ್ವಜನಿಕ ಸಭೆ ಅಥವಾ ಸಂವಾದ ವೇದಿಕೆಯನ್ನು ಆಯೋಜಿಸಬೇಕು.
7)ಅಭಿವೃದ್ಧಿ ಯೋಜನೆಗಳ ಸಂಪೂರ್ಣ ವಿವರ, ನಕ್ಷೆ ಹಾಗೂ ಅಂದಾಜು ವೆಚ್ಚವನ್ನು ಸಾರ್ವಜನಿಕರಿಗೆ ತಿಳಿಸಬೇಕು. 8)ನಟರಾಜ ವೇದಿಕೆ ಹಾಗೂ ಸಂಬಂಧಿತ ಕಟ್ಟಡ ತೆರವು ಕಾರ್ಯ ಯಾವ ನಿಯಮಗಳಡಿ ನಡೆಯಿತು, ಟೆಂಡರ್ ಪ್ರಕ್ರಿಯೆ ನಡೆದಿತೇ ಹಾಗೂ ತೆರವುಗೊಳಿಸಿದ ವಸ್ತುಗಳಿಂದ ಬಂದ ಆದಾಯವನ್ನು ದೇವಸ್ಥಾನದ ಖಾತೆಗೆ ಜಮೆ ಮಾಡಿರುವ ವಿವರವನ್ನು ಸಾರ್ವಜನಿಕರಿಗೆ ತಿಳಿಸಬೇಕು. 9)ದೇವಸ್ಥಾನದಲ್ಲಿದ್ದ ನಾಗದೇವರಿಗೆ ಪ್ರತಿದಿನ ತ್ರಿಕಾಲ ಪೂಜೆ ನಿಯಮಿತವಾಗಿ ನಡೆಯುವಂತೆ ಅಗತ್ಯ ಕ್ರಮ ಕೈಗೊಳ್ಳಬೇಕು. 10)ಅಯ್ಯಪ್ಪ ಸ್ವಾಮಿಗೆ ಆರು ತಿಂಗಳೊಳಗೆ ದೇವಸ್ಥಾನ ನಿರ್ಮಾಣದ ಕಾರ್ಯವನ್ನು ಪೂರ್ಣಗೊಳಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು ಹಾಗೂ ಅದರ ಕಾರ್ಯಯೋಜನೆಯನ್ನು ಭಕ್ತರಿಗೆ ತಿಳಿಸಬೇಕು. 11)ನವಗ್ರಹ ದೇವತೆಗಳಿಗೆ ಪ್ರತಿದಿನ ತ್ರಿಕಾಲ ಪೂಜೆ ನಡೆಯುವಂತೆ ವ್ಯವಸ್ಥೆ ಮಾಡಬೇಕು.
12)ನವಗ್ರಹಕ್ಕೆ ಬರುವ ಭಕ್ತರಿಗೆ ದಿನಪೂರ್ತಿ ತೀರ್ಥ-ಪ್ರಸಾದ ಲಭ್ಯವಾಗುವಂತೆ ಶಾಶ್ವತ ವ್ಯವಸ್ಥೆಯನ್ನು ಕಲ್ಪಿಸಬೇಕು. 13)ದೇವಸ್ಥಾನದ ಭವಿಷ್ಯಕ್ಕೆ ಸಂಬಂಧಿಸಿದ ಪ್ರಮುಖ ನಿರ್ಧಾರಗಳನ್ನು ಭಕ್ತರನ್ನು ವಿಶ್ವಾಸಕ್ಕೆ ತೆಗೆದುಕೊಂಡು. ಸಾಮೂಹಿಕ ನಿರ್ಣಯದ ಆಧಾರದ ಮೇಲೆ ಕೈಗೊಳ್ಳಬೇಕು ಎಂದು ವಿಶ್ವ ಹಿಂದೂ ಪರಿಷದ್ ಪ್ರಮುಖರ ನಿಯೋಗದಿಂದ ಇಂದು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಮಂಡಳಿಗೆ ಮನವಿ ಸಲ್ಲಿಸಲಾಯಿತು.




