Published
12 hours agoon
By
Akkare News


ಶಾಲಾಭಿವೃದ್ಧಿ ಸಮಿತಿಯಲ್ಲಿ ತೆರವಾಗಿದ್ದ ಸೇತು, ಅಬ್ದುಲ್ ಗಫೂರ್, ವಿನಿತಾ ಹಾಗೂ ಸುರೇಶ್ ರೈ ಪಡ್ಡಂಬೈಲು ಇವರ ನಾಲ್ಕು ಸ್ಥಾನಗಳಿಗೆ ನೂತನ ಸದಸ್ಯರುಗಳಾಗಿ ಪ್ರಾಣೇಶ್, ಸುಚರಿತಾ, ಅನಿಲ್ ಜಿ.ಪಾಯಸ್ ಹಾಗೂ ರಮೇಶ್ ಇವರನ್ನು ಆಯ್ಕೆಮಾಡಲಾಯಿತು. ಶಾಲಾಭಿವೃದ್ಧಿ ಸಮಿತಿಯ ನೂತನ ಅಧ್ಯಕ್ಷರಾಗಿ ಭಾಸ್ಕರ ರಾವ್ ಎಸ್. ಇವರನ್ನು ಆಯ್ಕೆ ಮಾಡಲಾಯಿತು.
ಶಾಲಾಭಿವೃದ್ಧಿ ಸಮಿತಿಯಲ್ಲಿ ಆರು ವರ್ಷಗಳ ಕಾಲ ಸೇವೆ ಸಲ್ಲಿಸಿ ಅಧ್ಯಕ್ಷ ಸ್ಥಾನದಿಂದ ನಿರ್ಗಮಿಸಿದ ಸುರೇಶ್ ರೈ ಇವರನ್ನು ಸನ್ಮಾನಿಸಲಾಯಿತು. ನಿವೃತ್ತ ಉಪಪ್ರಾಂಶುಪಾಲರಾದ ವಸಂತ ಮೂಲ್ಯರವರು ತಮ್ಮ ಸಾರ್ಥಕ ಬೀಳ್ಕೊಡುಗೆ ನಿಮಿತ್ತ ಹಮ್ಮಿಕೊಂಡ ವಸಂತಾಭಿವಂದನಮ್ ಕಾರ್ಯಕ್ರಮವನ್ನು ಅಭೂತಪೂರ್ವವಾಗಿ ಯಶಸ್ಸುಗೊಳಿಸುವಲ್ಲಿ ಶ್ರಮಿಸಿದ ಶಾಲಾ ಶಿಕ್ಷಕವೃಂದದವರನ್ನು ಶಾಲು,ಸ್ಮರಣಿಕೆಯೊಂದಿಗೆ ಗೌರವಿಸಿದರು. ಜೊತೆಯಲ್ಲಿ ನಿರ್ಗಮಿತ ಸದಸ್ಯರಾದ ಸೇತು ಇವರನ್ನೂ ಅಭಿನಂದಿಸಲಾಯಿತು. ಸಹಶಿಕ್ಷಕಿ ಮಧುರಾರವರು ಮಾತೆಯರ ಸಮಿತಿ ರಚನೆಯ ಕಾರ್ಯವನ್ನು ನಿರ್ವಹಿಸಿದರು. ಆರಂಭದಲ್ಲಿ ಶಾಲಾಶಿಕ್ಷಕ ವೃಂದದವರು ಸೇರಿದ ಪೋಷಕ ಸಮೂಹಕ್ಕೆ ತಮ್ಮ ಸ್ವಪರಿಚಯವನ್ನು ಮಾಡಿಕೊಂಡರು.
ವೇದಿಕೆಯಲ್ಲಿ ಶಾಲಾಭಿವೃದ್ಧಿ ಸಮಿತಿಯ ಸದಸ್ಯರು, ಶಿಕ್ಷಣ ತಜ್ಞ ಬಾಲಕೃಷ್ಣ ಗೌಡ ಬಿ.ಟಿ.ಹಾಗೂ ಶಿಕ್ಷಕವೃಂದದವರು ಉಪಸ್ಥಿತರಿದ್ದರು.


