Published
3 hours agoon
By
Akkare News
ಕಲ್ಲಡ್ಕ : ಸ್ವಚ್ಛ ಪರಿಸರ ನಮ್ಮ ಧ್ಯೇಯ, ಹಸಿರು ಬದುಕೆ ನಮ್ಮ ಶ್ರೇಯ, ಮಾನವನ ಆಸೆ ದುರಾಸೆಗಳೆ ಸರಮಾಲೆಯಿಂದ ಪರಿಸರವನ್ನು ನಾಶಪಡಿಸುತ್ತಾ ಸ್ವಾರ್ಥ ಜೀವನವನ್ನು ನಡೆಸುತ್ತಿದ್ದಾನೆ, ಅಕ್ಷರದಿಂದ ಸಂಸ್ಕಾರ ಬರಬೇಕು ಅಂಧಕಾರ ಹೋಗಬೇಕು ಆದರೆ ಅಹಂ ಭಾವನೆ ಬರಬಾರದು, ತಮ್ಮ ಜನ್ಮದಿನಕ್ಕೆ ಗಿಡವನ್ನು ನೆಟ್ಟು ಬೆಳೆಸಿ ಜೀವನದಿದ್ದಕ್ಕೂ ಪೋಷಿಸುವುದರಿಂದ ಜೀವನಕ್ಕೂ ಒಂದು ಅರ್ಥ ಸಿಗುತ್ತದೆ ಪರಿಸರಕ್ಕೆ ನಾವು ಎಷ್ಟೇ ಕೊಟ್ಟರೂ ಅದು ಅಲ್ಪವೇ ಏಕೆಂದರೆ ಪರಿಸರದಿಂದ ನಾವು ಹೊರತು ನಮ್ಮಿಂದ ಪರಿಸರ ಅಲ್ಲ, ಪರಿಸರವು ಮುನಿದರೆ ನಮ್ಮ ಬಾಳು ನಿಮಿಷದಲ್ಲೇ ಮುಗಿದುಹೋಗುತ್ತದೆ ಎಂಬುದಾಗಿ ಸಂಸ್ಕಾರ ಭಾರತಿ ಇದರ ಜಿಲ್ಲಾ ಉಪಾಧ್ಯಕ್ಷರಾದ ಅನಿಲ್ ಪಂಡಿತ್ ರವರು ಹೇಳಿದರು.

ಅವರು ಜೂನ್ 15 ಶನಿವಾರ ವಾತ್ಸಲ್ಯಮಯಿ ಮಹಿಳಾ ಅಭಿವೃದ್ಧಿ ಮತ್ತು ಸಂಶೋಧನಾ ಸಂಸ್ಥೆ (ರಿ)ಹಾಗೂ ಜವಾಹರ ಬಾಲ್ ಮಂಚ್ ಮಂಗಳೂರು ದಕ್ಷಿಣ ಕನ್ನಡ ಇದರ ಸಂಯುಕ್ತ ಆಶ್ರಯದಲ್ಲಿ ದ.ಕ.ಜಿ.ಪಂ.ಹಿ.ಪ್ರಾ.ಶಾಲೆ.ಮಜಿ.ವೀರಕಂಭ ಇಲ್ಲಿ ನಡೆದ ವಿಶ್ವ ಪರಿಸರ ದಿನಾಚರಣೆ, ವನಮಹೋತ್ಸವ ಹಾಗೂ ಬಾಲಕಾರ್ಮಿಕ ವಿರೋಧಿ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು. 
ಈ ಸಂದರ್ಭದಲ್ಲಿ ಸ್ಪರ್ಧೆಯಲ್ಲಿ ವಿಜೇತ ಮಕ್ಕಳಿಗೆ ಬಹುಮಾನ ನೀಡಿ ಗೌರವಿಸಲಾಯಿತು. ಕಾರ್ಯಕ್ರಮದ ವೇದಿಕೆಯಲ್ಲಿ ವಾತ್ಸಲ್ಯ ಮಹಿಳಾ ಅಭಿವೃದ್ಧಿ ಮತ್ತು ಸಂಶೋಧನಾ ಸಂಸ್ಥೆಯ ಸದಸ್ಯ ಇಂದಿರಾ, ಶಾಲಾ ನಾಯಕ ಮೊಹಮ್ಮದ್ ಹಾರೂನ್ ಫರ್ಹಾನ್, ಹಿರಿಯ ವಿದ್ಯಾರ್ಥಿ ಲಿಖಿತಾ, ಉಪಸ್ಥಿತರಿದ್ದರು. ಶಾಲಾ ವಿದ್ಯಾರ್ಥಿಗಳು ಪ್ರಾರ್ಥಿಸಿದರು, ಮುಖ್ಯ ಶಿಕ್ಷಕಿ ಬೆನಡಿಕ್ಟಾ ಆಗ್ನೇಸ್ ಮಂಡೋನ್ಸ ಸ್ವಾಗತಿಸಿದರು, ಶಿಕ್ಷಕಿ ಸಂಪ್ರಿಯ ವಂದಿಸಿದರು. ಹಿರಿಯ ಶಿಕ್ಷಕಿ ಸಂಗೀತ ಶರ್ಮ ಪಿ ಜಿ ಕಾರ್ಯಕ್ರಮ ನಿರೂಪಿಸಿದರು. ಶಾಲಾ ಶಿಕ್ಷಕರು ಸಹಕರಿಸಿದರು. 




