Connect with us

ಶಾಲಾ ಚಟುವಟಿಕೆ

ಸಾಂದೀಪನಿ ಗ್ರಾಮೀಣ ಆಂಗ್ಲ ಮಾಧ್ಯಮ ವಿದ್ಯಾಸಂಸ್ಥೆಯಲ್ಲಿ ವಿದ್ಯಾರ್ಥಿ ನಾಯಕರ ಆಯ್ಕೆ :

Published

on

​

ನರಿಮೊಗರಿನ ಸಾಂದೀಪನಿ ಗ್ರಾಮೀಣ ವಿದ್ಯಾ ಸಂಸ್ಥೆಯ ಶಾಲಾ ಮಕ್ಕಳಿಗೆ ಚುನಾವಣಾ ಅರಿವು ಮೂಡಿಸುವ ನಿಟ್ಟಿನಲ್ಲಿ ವಿದ್ಯಾರ್ಥಿ ಚುನಾವಣೆಯ ಮೂಲಕ ಶಾಲಾ ವಿದ್ಯಾರ್ಥಿ ನಾಯಕರ ಆಯ್ಕೆ ಪ್ರಕ್ರಿಯೆ ನಡೆಯಿತು. ಈ ಚುನಾವಣೆಯಲ್ಲಿ ಶಾಲಾ ನಾಯಕನಾಗಿ 10 ನೇ ತರಗತಿಯ ವಿದ್ಯಾರ್ಥಿಯಾದ ಪ್ರತೀಕ್ .ಟಿ (ಶ್ರೀ ತನಿಯಪ್ಪ ನಾಯ್ಕ್ ಶ್ರೀಮತಿ ವಿಶಾಲಾಕ್ಷಿ ಕಟ್ಟತ್ತಾರು ಇವರ ಪುತ್ರ )

ಉಪನಾಯಕನಾಗಿ 9ನೇ ತರಗತಿ ವಿದ್ಯಾರ್ಥಿಯಾದ  ವಿಧಾತ್ ರೈ ( ಶ್ರೀ ಜಿ. ವಿಠ್ಠಲ ರೈ  ಮತ್ತು ಶ್ರೀಮತಿ ಮಲ್ಲಿಕಾ .ಕೆ ತಿಂಗಳಾಡಿ ಇವರ ಪುತ್ರ )ಆಯ್ಕೆ ಗೊಂಡಿರುತ್ತಾರೆ.

ಶಾಲಾ ಮುಖ್ಯ ಗುರುಗಳಾದ ಶ್ರೀ ಪ್ರಸನ್ನ ಕೆ ಮಾರ್ಗದರ್ಶನದಲ್ಲಿ ಹಾಗೂ ಶಾಲಾ ಸಹ ಶಿಕ್ಷಕರಾದ ಶ್ರೀ ಆನಂದ್ .ಆರ್  ಇವರ ನೇತೃತ್ವ ದಲ್ಲಿ 5ನೇ ತರಗತಿಯಿಂದ ಮೇಲ್ಪಟ್ಟ ವಿದ್ಯಾರ್ಥಿ – ವಿದ್ಯಾರ್ಥಿನಿಯರು ಮತದಾನ ಪ್ರಕ್ರಿಯೆಯಲ್ಲಿ ತಮ್ಮನ್ನು ತೊಡಗಿಸಿಕೊಂಡರು. ಶಾಲಾ ಕಾರ್ಯದರ್ಶಿಗಳಾದ ಶ್ರೀ ಕೃಷ್ಣ ಪ್ರಸಾದ್ ಕೆದಿಲಾಯ ಹಾಗೂ ಶಾಲಾ ಕೋಶಾಧಿಕಾರಿಗಳಾದ ಶ್ರೀ ಹರೀಶ್ ಪುತ್ತೂರಾಯರು ಉಪಸ್ಥಿತರಿದ್ದು ಶುಭ ಹಾರೈಸಿದರು. ಶಾಲಾ ಶಿಕ್ಷಕ ವೃಂದ ಮತಗಟ್ಟೆ ಅಧಿಕಾರಿಗಳಾಗಿ ಕರ್ತವ್ಯ ನಿರ್ವಹಿಸಿದರು.

​

 

Continue Reading
Click to comment

Leave a Reply

Your email address will not be published. Required fields are marked *

Advertisement