Published
5 hours agoon
By
Akkare News
ಕಿಶೋರ ವರ್ಗ ಬಾಲಕಿಯರ ವಿಭಾಗದಲ್ಲಿ ಹತ್ತನೇ ತರಗತಿಯ ಬಿ. ತ್ರಿಶಾ 400 ಮೀ ಹರ್ಡಲ್ಸ್ನಲ್ಲಿ ಪ್ರಥಮ, 100 ಮೀ ಹರ್ಡಲ್ಸ್ನಲ್ಲಿ ದ್ವಿತೀಯ ಹಾಗೂ 4×400 ಮೀ ರಿಲೇಯಲ್ಲಿ ಪ್ರಥಮ ಸ್ಥಾನವನ್ನು ಪಡೆದಿದ್ದಾರೆ. ಹತ್ತನೇ ತರಗತಿಯ ಆರುಷಿ ಎನ್. ಚಕ್ರ ಎಸೆತದಲ್ಲಿ ದ್ವಿತೀಯ, ಹತ್ತನೇ ತರಗತಿಯ ಶ್ರದ್ಧಾ ಕೆ. ಕಟ್ವಾಟ್ 4×400 ಮೀ ರಿಲೇಯಲ್ಲಿ ಪ್ರಥಮ, ಹತ್ತನೇ ತರಗತಿಯ ಅದಿತಿ ಎನ್.ಶೆಟ್ಟಿ, 4×400 ರಿಲೇಯಲ್ಲಿ ಪ್ರಥಮ, ಒಂಬತ್ತನೇ ತರಗತಿಯ ನಿಹಾರಿಕ ಕೆ.ಎಸ್ 4×400 ರಿಲೇಯಲ್ಲಿ ಪ್ರಥಮ ಸ್ಥಾನವನ್ನು ಪಡೆದಿದ್ದಾರೆ.
ಬಾಲವರ್ಗ ಬಾಲಕರ ವಿಭಾಗದಲ್ಲಿ ಎಂಟನೇ ತರಗತಿಯ ದೀಪಾಂಶ್ ಶೆಟ್ಟಿ 600 ಮೀ ಓಟದ ಸ್ಪರ್ಧೆಯಲ್ಲಿ ದ್ವಿತೀಯ, 400 ಮೀ ಓಟದ ಸ್ಪರ್ಧೆಯಲ್ಲಿ ತೃತೀಯ, ಏಳನೇ ತರಗತಿಯ ಆರಾಧ್ಯ ಗಣೇಶ್ ಎತ್ತರ ಜಿಗಿತದಲ್ಲಿ ದ್ವಿತೀಯ ಹಾಗೂ ಗುಂಡು ಎಸೆತದಲ್ಲಿ ತೃತೀಯ ಸ್ಥಾನವನ್ನು ಪಡೆದಿದ್ದಾರೆ. ಬಾಲವರ್ಗ ಬಾಲಕಿಯರ ವಿಭಾಗದಲ್ಲಿ ಗ್ರಂಥನಾ ಎಂ. ಎತ್ತರ ಜಿಗಿತದಲ್ಲಿ ತೃತೀಯ ಸ್ಥಾನವನ್ನು ಪಡೆದಿದ್ದಾರೆ.



